ಕ್ರೆಫೆಲ್ಡ್ (ಜರ್ಮನಿ): ಭಾರತ ಪುರುಷರ ಹಾಕಿ ತಂಡವು ಜರ್ಮನಿ ವಿರುದ್ಧ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಟದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಮತ್ತು ಮಾರ್ಟಿನ್ ಹೊನರ್ ಗೋಲು ಗಳಿಸಿ ಸಮಬಲ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2021ರ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ 6-1 ಗೋಲುಗಳ ಜಯ ಸಾಧಿಸಿದ ನಂತರ ಆತ್ಮವಿಶ್ವಾಸದಿಂದ ಆಡಿದ ವಿಶ್ವದ ನಂ .4 ಭಾರತ, ಅತಿಥೇಯ ಜರ್ಮನಿ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ತೋರಿದೆ. ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದು, ಡಿಫೆಂಡರ್ ಜರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಜಯಗಳಿಸುವಂತೆ ಮಾಡಿದರು.
-
FT: 🇩🇪 1 - 1 🇮🇳
— Hockey India (@TheHockeyIndia) March 2, 2021 " class="align-text-top noRightClick twitterSection" data="
What a thrilling way to end our day!
Congratulations to @DHB_hockey and the #MenInBlue on today's performance. 🙌#IndiaKaGame #TourOfEurope #GERvIND pic.twitter.com/lY8yKUIFOk
">FT: 🇩🇪 1 - 1 🇮🇳
— Hockey India (@TheHockeyIndia) March 2, 2021
What a thrilling way to end our day!
Congratulations to @DHB_hockey and the #MenInBlue on today's performance. 🙌#IndiaKaGame #TourOfEurope #GERvIND pic.twitter.com/lY8yKUIFOkFT: 🇩🇪 1 - 1 🇮🇳
— Hockey India (@TheHockeyIndia) March 2, 2021
What a thrilling way to end our day!
Congratulations to @DHB_hockey and the #MenInBlue on today's performance. 🙌#IndiaKaGame #TourOfEurope #GERvIND pic.twitter.com/lY8yKUIFOk
ಇನ್ನು ಈ ಬಗ್ಗೆ ಮಾತನಾಡಿದ ಭಾರತದ ಮುಖ್ಯ ತರಬೇತುದಾರ ಗ್ರಹಾಂ ರೀಡ್, "ಈ ಪಂದ್ಯವು ನಮ್ಮ ಆಟಗಾರರಿಗೆ ಉತ್ತಮ ಅನುಭವವಾಗಿತ್ತು. ಇದು ಕಠಿಣ ಪಂದ್ಯವಾಗಿತ್ತು ಮತ್ತು ತಂಡವು ಜಯ ಸಾಧಿಸುವಲ್ಲಿ ಶ್ರಮಿಸಿದೆ. ಎರಡೂ ತಂಡಗಳು ಅವಕಾಶಗಳನ್ನು ಸೃಷ್ಟಿಸಿದವು ಮತ್ತು ಈ ಆಟದಿಂದ ನಾವು ಬಹಳಷ್ಟು ಕಲಿಯುತ್ತೇವೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.
ಭಾರತ ಮುಂದಿನ ಶನಿವಾರ ಗ್ರೇಟ್ ಬ್ರಿಟನ್ ವಿರುದ್ಧ ಆಡಲಿದೆ.