ನವದೆಹಲಿ: ಟೀಂ ಇಂಡಿಯಾ ಹಾಕಿ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಹಾಗೂ ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಅವರ ಹೆಸರನ್ನ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ಮಾಹಿತಿ ನೀಡಿದ್ದು, ಹರ್ಮನ್ಪ್ರೀತ್ ಸಿಂಗ್, ವಂದನಾ ಕಠಾರಿಯಾ ನಾಗೂ ನವಜೋತ್ ಕೌರ್ ಹೆಸರನ್ನ ಅರ್ಜುನ್ ಅವಾರ್ಡ್ಗೋಸ್ಕರ ಶಿಫಾರಸು ಮಾಡಿದೆ. ಜೀವಮಾನ ಸಾಧನೆಗೋಸ್ಕರ ಧ್ಯಾನ್ ಚಂದ್ ಪ್ರಶಸ್ತಿಗಾಗಿ ಹಾಕಿ ಇಂಡಿಯಾದ ಮಾಜಿ ಆಟಗಾರರಾದ ಆರ್.ಪಿ ಸಿಂಗ್, ಸಂಗೈ ಇಬೆಮ್ಹಾಲ್ ಆಯ್ಕೆಯಾಗಿದ್ದಾರೆ. ಉಳಿದಂತೆ ದ್ರೋಣಾಚಾರ್ಯ ಪ್ರಶಸ್ತಿಗೆ ತರಬೇತುದಾರರಾದ ಬಿ.ಜೆ. ಕರಿಯಪ್ಪ ಹಾಗೂ ಸಿ.ಆರ್. ಕುಮಾರ್ ಶಿಫಾರಸುಗೊಂಡಿದ್ದಾರೆ.
ಇದನ್ನೂ ಓದಿರಿ: ಒಲಂಪಿಕ್ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹ ಧನ!
ಪಿ.ಆರ್ ಶ್ರೀಜೇಶ್ 2018ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ, 2018ರ ಏಷ್ಯಾ ಗೇಮ್ಸ್ನಲ್ಲಿ ಕಂಚಿನ ಪದಕ ಹಾಗೂ FIH ಪುರುಷರ ಹಾಕಿ ಫೈನಲ್ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಈಗಾಗಲೇ ಇವರಿಗೆ 2015ರಲ್ಲಿ ಅರ್ಜುನ್ ಪ್ರಶಸ್ತಿ ಹಾಗೂ 2017ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ದೀಪಿಕಾ ಮಹತ್ವದ ಪಾತ್ರ ವಹಿಸಿದ್ದರು.