ETV Bharat / sports

ಸರ್ಕಾರದಿಂದ ಘುಮನ್ಹೇರಾ ಕ್ರೀಡಾಂಗಣದಲ್ಲಿ ಹಾಕಿ ಅಕಾಡೆಮಿ ಸ್ಥಾಪನೆ: ಸಿಸೋಡಿಯಾ - ಟೋಕಿಯೋ ಒಲಿಂಪಿಕ್ಸ್ 2020

ಕ್ರೀಡಾ ಸೌಲಭ್ಯಗಳಿಂದ ಅಸ್ಪೃಶ್ಯವಾಗಿ ಉಳಿದಿದ್ದರೂ ಘುಮನ್ಹೇರಾ ದೇಶಕ್ಕೆ ಹಲವು ಹಾಕಿ ಸ್ಟಾರ್‌ಗಳನ್ನು ನೀಡಿದೆ. ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರ ಈ ಪಟ್ಟಣಕ್ಕೆ ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಿಕೊಡಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

Delhi govt will set up hockey academy at Ghumanher
ಮನೀಶ್ ಸಿಸೋಡಿಯಾ
author img

By

Published : Dec 4, 2021, 10:42 PM IST

ನವದೆಹಲಿ: ಒಡಿಶಾ ಸರ್ಕಾರದ ನಂತರ ಹಲವು ರಾಜ್ಯಗಳು ಹಾಕಿ ಕ್ರೀಡೆಗೆ ಮನ್ನಣೆ ಮತ್ತು ಪ್ರೋತ್ಸಾಹ ಆರಂಭಿಸುತ್ತಿದ್ದು, ಇದೀಗ ಆ ಸಾಲಿಗೆ ದೆಹಲಿ ಸರ್ಕಾರ ಕೂಡ ಸೇರಿಕೊಂಡಿದೆ. ಘುಮನ್ಹೇರಾ ಸ್ಟೇಡಿಯಂನಲ್ಲಿ ಹಾಕಿ ಅಕಾಡೆಮಿಯ ಜೊತೆಗೆ ಆಟಗಾರರಿಗಾಗಿ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಘೋಷಿಸಿದ್ದಾರೆ.

ದೆಹಲಿಯಲ್ಲಿ 4 ವಿಶ್ವದರ್ಜೆಯ ಹಾಕಿ ಮೈದಾನಗಳನ್ನು ನಿರ್ಮಿಸಲು ಅರವಿಂದ್ ಕೇಜ್ರಿವಾಲ್ ಸರ್ಕಾರ ತೀರ್ಮಾನಿಸಿದೆ. ಅದರಲ್ಲಿ ಘುಮನ್ಹೇರಾ ಸ್ಟೇಡಿಯಂನಲ್ಲೂ ಒಂದು ಮೈದಾನ ಇರಲಿದೆ ಎಂದು ಇದೇ ಕ್ರೀಡಾಂಗಣದಲ್ಲಿ ಛಜ್ಜುರಾಮ್ ಸ್ಮಾರಕ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಿದ ನಂತರ ಹೇಳಿದ್ದಾರೆ.

ಕ್ರೀಡಾ ಸೌಲಭ್ಯಗಳಿಂದ ಅಸ್ಪೃಶ್ಯವಾಗಿ ಉಳಿದಿದ್ದರೂ ಘುಮನ್ಹೇರಾ ದೇಶಕ್ಕೆ ಹಲವು ಹಾಕಿ ಸ್ಟಾರ್‌ಗಳನ್ನು ನೀಡಿದೆ. ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರ ಈ ಪಟ್ಟಣಕ್ಕೆ ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಿಕೊಡಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಐತಿಹಾಸಿಕ ಕಂಚಿನ ಪದಕ ಗೆದ್ದ ನಂತರ ಒಡಿಶಾ ಜೊತೆಗೆ ಯುಪಿ ಸೇರಿದಂತೆ ಕೆಲವು ರಾಜ್ಯಗಳು ಹಾಕಿ ಕ್ರೀಡೆ ಪ್ರೋತ್ಸಾಹ ನೀಡಲು ಮತ್ತು ಕ್ರೀಡೆಗಾಗಿ ಹಣ ಕೂಡ ಬಿಡುಗಡೆ ಮಾಡಿವೆ.

ಇದನ್ನೂ ಓದಿ:2033ವರೆಗೂ ಹಾಕಿಗೆ ಪ್ರಾಯೋಜಕತ್ವ ಮುಂದುವರಿಸುವುದಾಗಿ ಒಡಿಶಾ ಸಿಎಂ ಪಟ್ನಾಯಕ್ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.