ETV Bharat / sports

ಫುಟ್ಬಾಲ್​​ ದಿಗ್ಗಜರನ್ನು ಹಿಂದಿಕ್ಕಿ ಫೋರ್ಬ್ಸ್​ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಫೆಡರರ್​​

ಅತಿ ಹೆಚ್ಚು ಗ್ರ್ಯಾಂಡ್ ​ಸ್ಲಾಮ್​ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್​ ಫೋರ್ಬ್ಸ್​ಪಟ್ಟಿಯಲ್ಲಿ ಫುಟ್ಬಾಲ್​​​​ ಸೂಪರ್​ ಸ್ಟಾರ್​ಗಳಾದ ಕ್ರಿಶ್ಚಿಯಾನೋ ರೊನಾಲ್ಡೊ ಹಾಗೂ ಲಿಯೋನಲ್​ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ. ಇವರು ಕಳೆದ 12 ತಿಂಗಳಲ್ಲಿ 106.3 (802 ಕೋಟಿ ರೂ. ) ಮಿಲಿಯನ್​ ಅಮೆರಿಕನ್​ ಡಾಲರ್​ ಸಂಪಾದಿಸಿದ್ದಾರೆ.

ಫೋರ್ಬ್ಸ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರೋಜರ್​ ಫೆಡರರ್​

author img

By

Published : May 30, 2020, 1:58 PM IST

ಜ್ಯೂರಿಚ್​(ಸ್ವಿಟ್ಜರ್​ಲೆಂಡ್​)​: ಸ್ವಿಟ್ಜರ್​ಲೆಂಡ್​ನ ಟೆನ್ನಿಸ್​ ದಂತಕತೆ ರೋಜರ್​ ಫೆಡರರ್​ ಫೋರ್ಬ್ಸ್​ ಬಿಡುಗಡೆ ಮಾಡಿರುವ ಶ್ರೀಮಂತ ಆಥ್ಲೀಟ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಅತಿ ಹೆಚ್ಚು ಗ್ರ್ಯಾಂಡ್ ​ಸ್ಲಾಮ್​ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್​ ಫೋರ್ಬ್ಸ್​ ಪಟ್ಟಿಯಲ್ಲಿ ಫುಟ್ಬಾಲ್​​​ ಸೂಪರ್​ ಸ್ಟಾರ್​ಗಳಾದ ಕ್ರಿಶ್ಚಿಯಾನೋ ರೊನಾಲ್ಡೊ ಹಾಗೂ ಲಿಯೋನಲ್​ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ. ಇವರು ಕಳೆದ 12 ತಿಂಗಳಲ್ಲಿ 106.3 (802 ಕೋಟಿ ರೂ.) ಮಿಲಿಯನ್​ ಅಮೆರಿಕನ್​ ಡಾಲರ್​ ಸಂಪಾದಿಸಿದ್ದಾರೆ. ಈ ಮೂಲಕ ಫೋರ್ಬ್ಸ್​ ಇತಿಹಾಸದಲ್ಲಿ ಟೆನ್ನಿಸ್​ ಆಟಗಾರನೊಬ್ಬ ಮೊದಲ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್​ ಜೂನ್​ 1, 2019ರಿಂದ ಜೂನ್​ 1, 2020ರವರೆಗಿನ ವೇತನ, ಜಾಹೀರಾತಿನಿಂದ ಬರುವ ಆದಾಯ, ಒಪ್ಪಂದಗಳ ಬೋನಸ್, ಪ್ರಶಸ್ತಿಗಳು ಹಾಗೂ ಟೂರ್ನಮೆಂಟ್​ಗಳಲ್ಲಿ ಭಾಗವಹಿಸುವುದರಿಂದ ಬರುವ ಆದಾಯವನ್ನೆಲ್ಲಾ ಲೆಕ್ಕಾಚಾರ ಮಾಡಿ ಶ್ರೇಯಾಂಕ ಬಿಡುಗಡೆ ಮಾಡಿದೆ.

ಫೆಡರರ್​ ಮೊದಲ ಸ್ಥಾನಕ್ಕೆ ಬರಲು ಕೊರೊನಾ ಲಾಕ್​ಡೌನ್​ನಿಂದ ಫುಟ್ಬಾಲ್​​​ ಆಟಗಾರರ ವೇತನದಲ್ಲಿ ಭಾರಿ ಕಡಿತ ಮಾಡಿರುವುದಾಗಿದೆ ಎನ್ನಲಾಗಿದೆ. ಫೋರ್ಬ್ಸ್​ ಪಟ್ಟಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸಿರುವ ರೋಜರ್​ ಫೆಡರರ್​ ನಂತರದ ಸ್ಥಾನಗಳಲ್ಲಿ ಫುಟ್ಬಾಲ್​​ ಸ್ಟಾರ್​ಗಳಾದ ಫೋರ್ಚುಗಲ್​ನ ಕ್ರಿಶ್ಚಿಯಾನೊ ರೊನಾಲ್ಡೊ 105 ಮಿಲಿಯನ್​ ಯುಎಸ್​ಡಿ, (793 ಕೋಟಿ ರೂ.) 3ನೇ ಸ್ಥಾನದಲ್ಲಿ, ಅರ್ಜೆಂಟೈನಾದ ಲಿಯೋನಲ್​ ಮೆಸ್ಸಿ 104 ಮಿಲಿಯನ್​ ಯುಎಸ್​ಡಿ (785 ಕೋಟಿ ರೂ.) ಹಾಗೂ ಬ್ರೆಜಿಲ್​ನ ನೇಮರ್ ​ 95.5 ಮಿಲಿಯನ್ ಯುಎಸ್​ಡಿ (721 ಕೋಟಿ ರೂ.) 4ನೇ ಸ್ಥಾನದಲ್ಲಿದ್ದಾರೆ.

ಮಹಿಳಾ ಅಥ್ಲೀಟ್​ಗಳ ಲಿಸ್ಟ್​ನಲ್ಲಿ ಜಪಾನ್​ ನವೋಮಿ ಒಸಾಕಾ 37.4 ಮಿಲಿಯನ್​ ಅಮೆರಿಕನ್​ ಡಾಲರ್​ ಸಂಪಾದಿಸಿ ಮೊದಲ ಸ್ಥಾನ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.