ETV Bharat / sports

ಜಪಾನ್​ನ ಮಿಡ್​ಫೀಲ್ಡರ್​ ಗೊಡ್ಡಾರ್ಡ್​ ಜೊತೆ ಮುಂಬೈ ಎಫ್​ಸಿ ಒಪ್ಪಂದ - ಜಪಾನಿನ ಮಿಡ್ ಫೀಲ್ಡರ್ ಸೈ ಗೊಡ್ಡಾರ್ಡ್

23 ವರ್ಷದ ಆಟಗಾರ ಒಂದು ವರ್ಷದ ಅವಧಿಗೆ ಕ್ಲಬ್​ ಸೇರಿಕೊಂಡಿದ್ದಾರೆ. ಇಂಗ್ಲಿಷ್​​ ಕ್ಲಬ್​ ಟೊಟೆನ್​ಹ್ಯಾಮ್ ಹಾಟ್ಸ್​ಪುರ್​ ಆಕಾಡೆಮಿಯಲ್ಲಿ ಪಳಗಿರುವ ಗೊಡ್ಡಾರ್ಡ್ 2017ರಲ್ಲಿ ಕ್ಲಬ್ ತೊರೆಯುವ ಮುನ್ನ ಅಂಡರ್ 19, ಅಂಡರ್ 21 ಹಾಗೂ ಅಂಡರ್​ 23 ವಿಭಾಗದಲ್ಲಿ ಕ್ಲಬ್​ ಪರ ಆಡಿದ್ದರು.

ಜಪಾನ್​ನ ಮಿಡ್​ಫೀಲ್ಡರ್​ ಗೊಡ್ಡಾರ್ಡ್​
ಜಪಾನ್​ನ ಮಿಡ್​ಫೀಲ್ಡರ್​ ಗೊಡ್ಡಾರ್ಡ್​
author img

By

Published : Oct 27, 2020, 5:03 PM IST

ಮುಂಬೈ: ಮುಂಬರುವ 2020 - 21ರ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್​ಗಾಗಿ ಇಂಗ್ಲೆಂಡ್ ಮೂಲದ ಜಪಾನಿನ ಮಿಡ್ ಫೀಲ್ಡರ್ ಸೈ ಗೊಡ್ಡಾರ್ಡ್‌ ಮುಂಬೈ ಸಿಟಿ ಎಫ್‌ಸಿ ಜೊತೆಗೆ ಮಂಗಳವಾರ ಒಪ್ಪಂದ ಮಾಡಿಕೊಂಡಿದ್ದಾರೆ.

23 ವರ್ಷದ ಆಟಗಾರ ಒಂದು ವರ್ಷದ ಅವಧಿಗೆ ಕ್ಲಬ್​ ಸೇರಿಕೊಂಡಿದ್ದಾರೆ. ಇಂಗ್ಲಿಷ್​​ ಕ್ಲಬ್​ ಟೊಟೆನ್​ಹ್ಯಾಮ್ ಹಾಟ್ಸ್​ಪುರ್​ ಅಕಾಡೆಮಿಯಲ್ಲಿ ಪಳಗಿರುವ ಗೊಡ್ಡಾರ್ಡ್ 2017ರಲ್ಲಿ ಕ್ಲಬ್ ತೊರೆಯುವ ಮುನ್ನ ಅಂಡರ್ 19, ಅಂಡರ್ 21 ಹಾಗೂ ಅಂಡರ್​ 23 ವಿಭಾಗದಲ್ಲಿ ಕ್ಲಬ್​ ಪರ ಆಡಿದ್ದರು.

ಗೊಡ್ಡಾರ್ಡ್ ನಂತರ ಇಟಲಿಗೆ ತೆರಳಿ ಸೀರಿ ಬಿ ಲೀಗ್​ನಲ್ಲಿ ಬೆನೆವೆಂಟೊ ಕ್ಯಾಲ್ಸಿಯೊ ಕ್ಲಬ್​ ಜೊತೆ 2018ರಲ್ಲಿ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಜಪಾನ್​ನ ಮಿಡ್​ಫೀಲ್ಡರ್​ ಗೊಡ್ಡಾರ್ಡ್​
ಜಪಾನ್​ನ ಮಿಡ್​ಫೀಲ್ಡರ್​ ಗೊಡ್ಡಾರ್ಡ್​

ಯುವ ಆಕ್ರಮಣಕಾರಿ ಮಿಡ್ - ಫೀಲ್ಡರ್ ನಂತರ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಬಯಕೆಯಿಂದ 2019 - 20ರ ಋತುವಿನಲ್ಲಿ ಸೈಪ್ರಿಯೋಟ್ ಕ್ಲಬ್ ಪಫೋಸ್ ಎಫ್‌ಸಿಗೆ ತೆರಳಿದ್ದರು.

ಇದರ ಜೊತೆಗೆ ಗೊಡ್ಡಾರ್ಡ್​ ಜಪಾನ್​ ಅಂಡರ್ 16 ಮತ್ತು ಅಂಡರ್ 17 ರಾಷ್ಟ್ರೀಯ ತಂಡದಲ್ಲೂ ಆಡಿದ ಅನುಭವ ಹೊಂದಿದ್ದಾರೆ.

"ಮುಂಬೈ ಸಿಟಿ ತಂಡದ ಪರ ಆಡುವುದಕ್ಕೆ ಅವಕಾಶ ಬಂದಿರುವುದು ನನಗೆ ಖುಷಿಯಾಗಿದೆ. ನಾನು ಭಾರತಕ್ಕೆ ಬರಲು ತುಂಬಾ ಉತ್ಸುಕನಾಗಿದ್ದೇನೆ, ಇಲ್ಲಿ ನನ್ನ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ನನ್ನ ಆಟವನ್ನು ಅಭಿವೃದ್ಧಿಪಡಿಸುತ್ತೇನೆ. ಕೋಚ್ ಸೆರ್ಗಿಯೋ ಲೋಬೆರಾ ಅವರೊಂದಿಗೆ ತಂಡ ಹೊಂದಿರುವ ಫಿಲಾಸಫಿ ಬಗ್ಗೆ ನನಗೆ ತಿಳಿದಿದೆ. ಅವರ ಕೋಚಿಂಗ್​ನಲ್ಲಿ ಫುಟ್ಬಾಲ್ ಆಡಲು ಇಷ್ಟಪಡುತ್ತೇನೆ" ಎಂದು ಗೊಡ್ಡಾರ್ಡ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.