ಪ್ಯಾರಿಸ್: ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಸೇರಿದಂತೆ ಪಿಎಸ್ಜಿ ಕ್ಲಬ್‌ನ ನಾಲ್ವರು ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ ಎಂದು ಕ್ಲಬ್ ಭಾನುವಾರ ಖಚಿತಪಡಿಸಿದೆ.
ಮೆಸ್ಸಿ ಹೊರತುಪಡಿಸಿ, PSG ಕ್ಲಬ್‌ನ ಜುವಾನ್ ಬೆರ್ನಾಟ್, ಸೆರ್ಗಿಯೋ ರಿಕೊ ಮತ್ತು ನೇಥನ್ ಬಿಟುಮ್ಜಾಲಾ ಅವರಿಗೆ ಕೋವಿಡ್ 19 ಸೋಂಕು ತಗುಲಿದೆ. ಈ ಎಲ್ಲಾ ಸೋಂಕಿತ ಆಟಗಾರರನ್ನು ಪ್ರತ್ಯೇಕಿಸಲಾಗಿದೆ ಎಂದು ಕ್ಲಬ್ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.
"ಕ್ಲಬ್‌ನ ನಾಲ್ವರು ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಅವರೆಲ್ಲರೂ ಐಸೊಲೇಸನ್ನಲ್ಲಿದ್ದಾರೆ ಮತ್ತು ಸೂಕ್ತವಾದ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದಾರೆ" ಎಂದು ಪಿಎಸ್ಜಿ ತನ್ನ ಸ್ಟೇಟ್ಮೆಂಟ್ನಲ್ಲಿ ತಿಳಿಸಿದೆ.
ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ನೇಮರ್ ಅವರು ಜನವರಿ 9ರವರೆಗೆ ಬ್ರೆಜಿಲ್ನಲ್ಲೇ ಪಿಎಸ್ಜಿ ವೈದ್ಯಕೀಯ ಸಿಬ್ಬಂದಿ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಅವರು ತರಬೇತಿಗೆ ಮರಳಲು ಇನ್ನೂ 3 ವಾರ ಆಗಬಹುದು ಎಂದು ಇದೇ ಸಂದರ್ಭದಲ್ಲಿ ಕ್ಲಬ್ ಮಾಹಿತಿ ನೀಡಿದೆ.
ಫ್ರೆಂಚ್ ಕಪ್‌ನಲ್ಲಿ ಭಾಗವಹಿಸಿರುವ ಪಿಎಸ್ಜಿ ಮಂಗಳವಾರ ವ್ಯಾನೆಸ್ ಅನ್ನು ಎದುರಿಸಲಿದೆ.
ಇದನ್ನೂ ಓದಿ:Ashes Test: ಪತ್ನಿ ನೆನಪಿಗಾಗಿ ನಡೆಯುವ 'ಪಿಂಕ್ ಟೆಸ್ಟ್'ಗೂ ಮುನ್ನವೇ ಮೆಕ್ಗ್ರಾತ್ಗೆ ಕೋವಿಡ್