ETV Bharat / sports

ಐಎಸ್​ಎಲ್​ ಪ್ರಶಸ್ತಿ ವಿಜೇತರು: ಹೀರೋ ಆಫ್ ದಿ ಲೀಗ್ ಪ್ರಶಸ್ತಿ ಪಡೆದ ರಾಯ್ ಕೃಷ್ಣ - ಗೋಲ್ಡನ್ ಗ್ಲೌ ಪ್ರಶಸ್ತಿ ಪಡೆದ ಭಟ್ಟಾಚಾರ್ಯ

ಎಫ್​ಸಿ ಗೋವಾ ಪರ ಮೊದಲ ಆವೃತ್ತಿ ಆಡಿದ ಸ್ಪೇನ್​ನ ಇಗೋರ್​ ಟೂರ್ನಿಯಲ್ಲಿ ನಿರ್ಣಾಯಕವಾದ 14 ಗೋಲು ಸಿಡಿಸಿದ್ದಾರೆ. ಇವರ ಅದ್ಭುತ ಆಟದ ನೆರವಿನಿಂದ ಗೋವಾ 6ನೇ ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು

ಐಎಸ್​ಎಲ್​ ಪ್ರಶಸ್ತಿ ವಿಜೇತರು
ರಾಯ್ ಕೃಷ್ಣ
author img

By

Published : Mar 14, 2021, 3:55 PM IST

ಮಾರ್ಗೊ(ಗೋವಾ): ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್​ನ 7ನೇ ಆವೃತ್ತಿಯಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಗಾನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಮುಂಬೈಸಿಟಿ ಎಫ್​ಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದೆ.

ಶನಿವಾರ ಟೂರ್ನಿ ಅಂತ್ಯಗೊಂಡಿದ್ದು, 7ನೇ ಆವೃತ್ತಿಯಲ್ಲಿ ವಿವಿಧ ಪ್ರಶಸ್ತಿಗೆ ಭಾಜನರಾದ ಆಟಗಾರರ ವಿವಿರ ಇಲ್ಲಿದೆ.

ಗೋಲ್ಡನ್​ ಬೂಟ್​-ಇಗೋರ್ ಅಂಗುಲಾ

ಎಫ್​ಸಿ ಗೋವಾ ಪರ ಮೊದಲ ಆವೃತ್ತಿ ಆಡಿದ ಸ್ಪೇನಿನ ಇಗೋರ್​ ಟೂರ್ನಿಯಲ್ಲಿ ನಿರ್ಣಾಯಕವಾದ 14 ಗೋಲು ಸಿಡಿಸಿದ್ದಾರೆ. ಇವರ ಅದ್ಭುತ ಆಟದ ನೆರವಿನಿಂದ ಗೋವಾ 6ನೇ ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು. ಸ್ಪಾನೀಸ್ ಆಟಗಾರ ಈ ಪ್ರಶಸ್ತಿಗೆ ಫಿಜಿಯಾದ ರಾಯ್​ ಕೃಷ್ಣ ಅವರಿಂದ ಭಾರಿ ಸ್ಪರ್ಧೆ ಎದುರಿಸಿದರು. ಕೃಷ್ಣ ಕೂಡ 14 ಗೋಲು ಗಳಿಸಿದರಾದರೂ ಇಗೋರ್​ ಕಡಿಮೆ ಸಮಯ ತೆಗೆದುಕೊಂಡಿದ್ದರಿಂದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಗೋಲ್ಡನ್ ಗ್ಲೌವ್​- ಅರಿಂದಾಮ್ ಭಟ್ಟಾಚಾರ್ಯ

ಎಟಿಕೆ ಮೋಹನ್ ಬಗಾನ್​ ತಂಡದ ಗೋಲ್​ ಕೀಪರ್ ಅರಿಂದಾಮ್​ ಭಟ್ಟಾಚಾರ್ಯ ಗೋಲ್ಡನ್ ಗ್ಲೌವ್​ ಪ್ರಶಸ್ತಿ ಪಡೆದಿದ್ದಾರೆ. ಇವರು ಟೂರ್ನಿಯಲ್ಲಿ ಕಡಿಮೆ ಗೋಲ್​​ ಬಿಟ್ಟುಕೊಟ್ಟ ಗೋಲ್ ಕೀಪರ್ ಎನಿಸಿಕೊಂಡಿದ್ದಾರೆ. ಅವರು 19 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.

ಹೀರೋ ಆಫ್​ ದ ಲೀಗ್​- ರಾಯ್​ ಕೃಷ್ಣ

ಎಟಿಕೆ ಮೋಹನ್ ಬಗಾನ್ ತಂಡದ ರಾಯ್​ ಕೃಷ್ಣ ಟೂರ್ನಿಯಲ್ಲಿ 14 ಗೋಲು ಮತ್ತು 8 ಬಾರಿ ಅಸಿಸ್ಟ್ ಮಾಡಿದ್ದರು. ಹಾಗಾಗಿ ಟೂರ್ನಿಯಲ್ಲಿ ಗೋಲ್ಡನ್​ ಬೂಟ್ ಪ್ರಶಸ್ತಿ ಪಟ್ಟಿಯಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿನ್ನಿಂಗ್​ ಪಾಸ್​ ಆಫ್​ ದ ಲೀಗ್: ಆಲ್ಬೆರ್ಟೊ ನೊಗುವೆರಾ

ಎಫ್​ಸಿ ಗೋವಾ ತಂಡದ ಆಲ್ಬೆರ್ಟೊ ನೊಗುವೆರಾ ವಿನ್ನಿಂಗ್ ಪಾಸ್​ ಆಫ್​ ದ ಲೀಗ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ಟೂರ್ನಿಯಲ್ಲಿ 8 ಗೋಲುಗಳಿಗೆ ಅಸಿಸ್ಟ್ ಮಾಡಿದ್ದರೆ, ಸ್ವತಃ ಒಂದು ಗೋಲು ಗಳಿಸಿದ್ದಾರೆ.

ಎಮರ್ಜಿಂಗ್ ಪ್ಲೇಯರ್ ಆಫ್​ ದ ಲೀಗ್​: ಲಾಲೆಂಗ್ಮಾವಿಯಾ

ನಾರ್ಥ್​ ಈಸ್ಟ್​ ಯುನೈಟೆಡ್​ ತಂಡ ಸೆಮಿಫೈನಲ್ ಪ್ರವೇಶಿಸಲು ನೆರವಾಗಿದ್ದ 20 ವರ್ಷದ ಲಾಲೆಂಗ್ಮಾವಿಯಾಗೆ ಎಮರ್ಜಿಂಗ್ ಪ್ಲೇಯರ್ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.