ಕೋಲ್ಕತ್ತಾ: ಕೋಲ್ಕತ್ತಾದ ದೈತ್ಯ ಫುಟ್‌ಬಾಲ್ ಕ್ಲಬ್ ಆಗಿರುವ ಈಸ್ಟ್ ಬೆಂಗಾಲ್ ಎಫ್ಸಿ 2020-21ರ ಆವೃತ್ತಿಯ ಐಎಸ್ನಲ್ಲಿ ಹೊಸ ತಂಡವಾಗಿ ಆಡಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರಕಟಿಸಿದ್ದಾರೆ.
100 ವರ್ಷ ಪೂರೈಸಿರುವ ಕ್ಲಬ್ ಪರ ಸಿಮೆಂಟ್ ಕಂಪನಿಯೊಂದು ಹೂಡಿಕೆ ಮಾಡಲು ಸಿದ್ದವಿದ್ದು ಎಂದಿರುವ ಮಮತಾ, ಎಲ್ಲಾ ಸಮಸ್ಯೆ ಬಗೆಹರಿದಿದ್ದು ಮುಂದಿನ ಇಂಡಿಯನ್ ಸೂಪರ್ ಲೀಗ್ನಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಹೊಸ ತಂಡವಾಗಿ ಕಣಕ್ಕಿಳಿಯಲಿದೆ ಎಂದಿದ್ದಾರೆ.
ಐಎಸ್‌ಎಲ್‌ನ ಪೋಷಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಈಸ್ಟ್ ಬೆಂಗಾಲ್ ತಂಡವನ್ನು ಲೀಗ್‌ನ ಹನ್ನೊಂದನೇ ಕ್ಲಬ್ ಆಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಹಿಂದಿನ ವರದಿಗಳ ಪ್ರಕಾರ ಈಸ್ಟ್ ಬೆಂಗಾ್ಲ್ ತಂಡ ಐಎಸ್ಎಲ್ಗೆ ಸೇರ್ಪಡೆಗೊಳ್ಳಲು ಮತ್ತೊಂದು ಸೀಸನ್ ಕಾಯಬೇಕಾಗಬಹುದು ಎನ್ನಲಾಗಿತ್ತು. ಸಿಮೆಂಟ್ ಕಂಪನಿಯೊಂದು ಕ್ಲಬ್ಗೆ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೆರವು ನೀಡಿದ್ದರಿಂದ ಎಫ್ಎಸ್ಡಿಎಲ್ ಈಸ್ಟ್ ಬೆಂಗಾಲ್ ತಂಡವನ್ನು ಐಎಸ್ಎಲ್ಗೆ ಸೇರಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.