ಲಂಡನ್: ಯೂರೋ 2020ರ ಫೈನಲ್ ಪಂದ್ಯದಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ತಂಡ ಸೋಲು ಕಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಂಡದ ಕಪ್ಪು ವರ್ಣೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿರುವುದಕ್ಕೆ ಮಾಜಿ ಇಂಗ್ಲಿಷ್ ಕ್ರಿಕೆಟರ್ ಕೆವಿನ್ ಪೀಟರ್ಸನ್ ಕಿಡಿಕಾರಿದ್ದಾರೆ. 2030ರ ವಿಶ್ವಕಪ್ ಆಯೋಜನೆಯ ಹಕ್ಕನ್ನು ಪಡೆದರೆ ಅದು ಅದ್ಭುತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಯೂರೋ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್ನಲ್ಲಿ 3-2ರ ಅಂತರದಲ್ಲಿ ಸೋಲು ಕಂಡಿತು. ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಗಳಿಸಲು ವಿಫಲರಾದ ಮೂವರು ಕಪ್ಪು ಆಟಗಾರರನ್ನು ಕೆಲವು ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದರು. ಇದಕ್ಕೆ ಫುಟ್ಬಾಲ್ ಅಸೋಸಿಯೇಷನ್, ಪ್ರಧಾನಿ ಬೋರಿಸ್ ಜಾನ್ಸನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಕ್ರಿಕೆಟ್ ತಂಡದ ನಾಯಕ ಪೀಟರ್ಸನ್ ಕೂಡ ನಿಂದಿಸಿದವರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
-
The walk I took with Dylan to get our car home last night was scary absolutely HORRENDOUS!
— Kevin Pietersen🦏 (@KP24) July 12, 2021 " class="align-text-top noRightClick twitterSection" data="
This behaviour in 2021?? 🤬
The abuse of the players who gave us so much joy?? 🤬
Do we actually deserve the 2030 World Cup? 🤔
">The walk I took with Dylan to get our car home last night was scary absolutely HORRENDOUS!
— Kevin Pietersen🦏 (@KP24) July 12, 2021
This behaviour in 2021?? 🤬
The abuse of the players who gave us so much joy?? 🤬
Do we actually deserve the 2030 World Cup? 🤔The walk I took with Dylan to get our car home last night was scary absolutely HORRENDOUS!
— Kevin Pietersen🦏 (@KP24) July 12, 2021
This behaviour in 2021?? 🤬
The abuse of the players who gave us so much joy?? 🤬
Do we actually deserve the 2030 World Cup? 🤔
"ಕಳೆದ ರಾತ್ರಿ ಡೈಲನ್ ಅವರೊಂದಿಗೆ ನಮ್ಮ ಕಾರಿನಲ್ಲಿ ಮನೆಗೆ ತಲುಪಿದ ದಾರಿ ಸಂಪೂರ್ಣವಾಗಿ ಭಯಾನಕವಾಗಿತ್ತು. 2021ರಲ್ಲಿ ಇಂತಹ ವರ್ತನೆಯೇ? ನಮಗೆ ಸಾಕಷ್ಟು ಆನಂದವನ್ನು ತಂದುಕೊಟ್ಟ ಆಟಗಾರರನ್ನು ನಿಂದಿಸುವುದೇ? 2030ರ ವಿಶ್ವಕಪ್ ಅನ್ನು ಆಯೋಜನೆ ಮಾಡಲು ನಾವು ಅರ್ಹರೇ?" ಎಂದು ಪೀಟರ್ಸನ್ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಿಂದಿಸಿದವರನ್ನು ಗುರುತಿಸಿ ಎಂದು ಬ್ರಿಟನ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಬ್ರಿಟನ್ ಪ್ರಧಾನಿ, ನಮ್ಮ ಹೀರೋಗಳು ಶ್ಲಾಘನೆಗೆ ಅರ್ಹರೇ ಹೊರೆತು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವುದಕ್ಕಲ್ಲ. ಈ ರೀತಿ ಭೀಕರವಾಗಿ ನಿಂದನೆ ಮಾಡಿದವರು ತಮ್ಮ ಬಗ್ಗೆ ನಾಚಿಕೆ ಪಡಬೇಕು ಎಂದು ಜಾನ್ಸನ್ ಟ್ವೀಟ್ ಮಾಡಿದ್ದರು.
-
The media in UK is probably the most powerful in the world. It should be a responsibility of theirs, to enforce the social media giants into verifying EVERY SINGLE PERSON that has an account.
— Kevin Pietersen🦏 (@KP24) July 12, 2021 " class="align-text-top noRightClick twitterSection" data="
No robots & no fake accounts!
ACCOUNTABILITY for all!
It’s destroying society!
">The media in UK is probably the most powerful in the world. It should be a responsibility of theirs, to enforce the social media giants into verifying EVERY SINGLE PERSON that has an account.
— Kevin Pietersen🦏 (@KP24) July 12, 2021
No robots & no fake accounts!
ACCOUNTABILITY for all!
It’s destroying society!The media in UK is probably the most powerful in the world. It should be a responsibility of theirs, to enforce the social media giants into verifying EVERY SINGLE PERSON that has an account.
— Kevin Pietersen🦏 (@KP24) July 12, 2021
No robots & no fake accounts!
ACCOUNTABILITY for all!
It’s destroying society!
ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ನಾಯಕ ಹ್ಯಾರಿ ಕೇನ್ ಮತ್ತು ಹ್ಯಾರಿ ಮಗ್ಯೂರ್ ಗೋಲುಗಳಿಸಿದರು. ಅವರ ಮುಂದಿನ ಮೂರು ಕಿಕ್ಗಳನ್ನು ತೆಗೆದುಕೊಂಡ ಮಾರ್ಕಸ್ ರಾಶ್‌ಫೋರ್ಡ್, ಜಾಡಾನ್ ಸ್ಯಾಂಚೊ ಗೋಲುಗಳಿಸಲು ವಿಫಲರಾದರು. ಈ ಮೂವರು ಕಪ್ಪು ವರ್ಣೀಯರಾಗಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿತ್ತು.
ಇದನ್ನೂ ಓದಿ: ಯೂರೋ ಕಪ್‌ನಲ್ಲಿ ಸೋಲುಂಡ ಕೋಪ, ಅಸಹನೆ: ಇಟಲಿಯನ್ನರನ್ನು ನಿಂದಿಸಿ, ಥಳಿಸಿದ ಇಂಗ್ಲೆಂಡ್ ಫ್ಯಾನ್ಸ್!