ನವದೆಹಲಿ: ಬಿಹಾರ ಮೂಲದ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಆಟಗಾರ್ತಿ ಮೋನಿ ಕುಮಾರಿ ಕೊರೊನಾ ಕಾರಣದಿಂದಾಗಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಅವರ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಪರಿಣಾಮವಾಗಿ ಅವರು ನರ್ಕಟಿಯಾಗಂಜ್ ರೈಲ್ವೆ ನಿಲ್ದಾಣದ ಬಳಿಯ ಕೊಳದ ದಂಡೆಯಲ್ಲಿ ತಂದೆಯೊಂದಿಗೆ ಬಟ್ಟೆ ಹೊಗೆಯುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಮೋನಿ 2018 ಮತ್ತು 2019ರಲ್ಲಿ ಅಸ್ಸೋಂ ಮತ್ತು ಒಡಿಸಾದಲ್ಲಿ ನಡೆದಿದ್ದ ಅಖಿಲ ಭಾರತ ಮಹಿಳಾ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಕಷ್ಟದ ಸಮಯದಲ್ಲಂತೂ ಕುಮಾರಿ ಆಟವನ್ನು ಬಿಡಲು ಬಯಸುತ್ತಿಲ್ಲ. ದೈನಂದಿನ ಅಭ್ಯಾಸಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೋನಿ ಕುಮಾರಿ ತಂದೆ, ಸರ್ಕಾರ ತಮ್ಮ ಮಗಳಿಗೆ ಕೆಲಸ ಕೊಡಬೇಕೆಂದು ಕೇಳಿಕೊಂಡಿದ್ದಾರೆ. ಈ ವೃತ್ತಿಯನ್ನು ಬಿಟ್ಟು ಆಟದ ಕಡೆಗೆ ಹೆಚ್ಚಿನ ಗಮನಹರಿಸಲು ನೆರವಾಗಬೇಕೇಂದು ಮನವಿ ಮಾಡಿಕೊಂಡಿದ್ದಾರೆ.
ಶುದ್ಧತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೊನಾವನ್ನು ನಿಯಂತ್ರಿಸಬಹುದು. ಅಲ್ಲದೆ ಜನರು ಈ ಸಂಕಷ್ಟದ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಮೋನಿ ಕುಮಾರಿ ಮನವಿ ಮಾಡಿಕೊಂಡಿದ್ದಾರೆ.