ETV Bharat / sports

ಮ್ಯಾಂಚೆಸ್ಟರ್​ ಸಿಟಿ ಮಣಿಸಿ 2ನೇ ಬಾರಿ ಚಾಂಪಿಯನ್ಸ್ ಲೀಗ್ ಗೆದ್ದ ಚೆಲ್ಸಿ

author img

By

Published : May 30, 2021, 6:03 PM IST

ಪಂದ್ಯದ ಮೊದಲಾರ್ಧ ಕೊನೆಗೊಳ್ಳಲು 3 ನಿಮಿಷಗಳಿದ್ದಾಗ 42ನೇ ನಿಮಿಷದಲ್ಲಿ ಹ್ಯಾವರ್ಟ್ಜ್ ಚೆಲ್ಸಿಗೆ 1-0 ಮುನ್ನಡೆ ಒದಗಿಸಿದರು. ಕೊನೆಯ ತನಕ ಇದೇ ಮುನ್ನಡೆಯನ್ನು ಉಳಿಸಿಕೊಂಡು 2ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು..

UEFA ಚಾಂಪಿಯನ್ಸ್​ ಲೀಗ್
UEFA ಚಾಂಪಿಯನ್ಸ್​ ಲೀಗ್

ಪೋರ್ಟೊ(ಪೋರ್ಚುಗಲ್): ಯುಇಎಫ್​ಎ ಚಾಂಪಿಯನ್ಸ್​ ಲೀಗ್​ನ ಫೈನಲ್​ ಪಂದ್ಯದಲ್ಲಿ ಮಾಂಚೆಸ್ಟರ್​ ಸಿಟಿ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿ ಚೆಲ್ಸಿ ತಂಡ ಚಾಂಪಿಯನ್​ ಆಗಿದೆ. ಕೈ ಹ್ಯಾವರ್ಟ್ಜ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಚೆಲ್ಸಿ ತಂಡ ಟ್ರೋಫಿಗೆ ಮುತ್ತಿಟ್ಟಿತು.

2012ರಲ್ಲಿ ಚಾಂಪಿಯನ್​ ಆಗಿದ್ದ ಚೆಲ್ಸಿ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಇದೀಗ ಬಲಿಷ್ಟ್​ ಮ್ಯಾಂಚೆಸ್ಟರ್​ ಸಿಟಿಯ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸನ್ನು ನುಚ್ಚು ನೂರು ಮಾಡುವ ಮೂಲಕ ಚಾಂಪಿಯನ್​ ಲೀಗ್ ಇತಿಹಾಸದಲ್ಲಿ 2ನೇ ಬಾರಿ ಚಾಂಪಿಯನ್ ಆಗಿ ಮೆರೆದಾಡಿದೆ.

ಇಡೀ ಪಂದ್ಯದಲ್ಲಿ ಮ್ಯಾಂಚೆಸ್ಟರ್​ ಸಿಟಿ ತಂಡ ಶೇ.61ರಷ್ಟು ಸಮಯದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಚೆಲ್ಸಿ ಶೇ.39ರಷ್ಟು ಸಮಯ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೆ, ಸಿಟಿ ತನಗೆ ಸಿಕ್ಕಿದ್ದ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಯಿತು.

ಗೋಲು ಸಿಡಿಸಲು ಕೇವಲ ಒಮ್ಮೆ ಮಾತ್ರ ಪ್ರಯತ್ನಿಸಿತು. ಕಡಿಮೆ ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಹೊಂದಿದರೂ ಚೆಲ್ಸಿ ತಂಡ 2 ಬಾರಿ ಗೋಲು ಬಾರಿಸಲು ಪ್ರಯತ್ನಿಸಿ ಒಮ್ಮೆ ಸಫಲ ಕಂಡಿತು.

ಪಂದ್ಯದ ಮೊದಲಾರ್ಧ ಕೊನೆಗೊಳ್ಳಲು 3 ನಿಮಿಷಗಳಿದ್ದಾಗ 42ನೇ ನಿಮಿಷದಲ್ಲಿ ಹ್ಯಾವರ್ಟ್ಜ್ ಚೆಲ್ಸಿಗೆ 1-0 ಮುನ್ನಡೆ ಒದಗಿಸಿದರು. ಕೊನೆಯ ತನಕ ಇದೇ ಮುನ್ನಡೆಯನ್ನು ಉಳಿಸಿಕೊಂಡು 2ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.

ಇದನ್ನು ಓದಿ:IPL ಪುನಾರಾರಂಭ : ಒಂದು ವಾರ ಮುಂಚೆ ಸಿಪಿಎಲ್​ ಆರಂಭಿಸಲು ವಿಂಡೀಸ್ ಮಂಡಳಿಗೆ ಬಿಸಿಸಿಐ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.