ಮಿನೇರೊ (ಬ್ರೆಜಿಲ್): ಫುಟ್ಬಾಲ್ ದಿಗ್ಗಜ ರೊನಾಲ್ಡೊ ಅವಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅವರ ಕ್ಲಬ್ ಕ್ರೂಝೈರೊ ಭಾನುವಾರ ದೃಢಪಡಿಸಿದೆ. ಇತ್ತೀಚೆಗಷ್ಟೇ 45 ವರ್ಷ ವಯಸ್ಸಿನ ರೊನಾಲ್ಡೊ ಬ್ರೆಜಿಲಿಯನ್ ಕ್ಲಬ್ ಕ್ರೂಝೈರೊ ಎಸ್ಪೋರ್ಟೆ ಕ್ಲಬ್ನಲ್ಲಿ ಬಹುಪಾಲು ಷೇರುಗಳನ್ನು ಖರೀದಿಸಿದ್ದರು.
ರೊನಾಲ್ಡೊ ಅವರು ಕ್ಲಬ್‌ನ 101ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋವಿಡ್ ದೃಢಪಟ್ಟ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಕ್ಲಬ್ ಭಾನುವಾರ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ನಾಲ್ಕು ಫಿಫಾ ವಿಶ್ವಕಪ್(fifa world cup)ಗಳಲ್ಲಿ ಆಡಿದ ರೊನಾಲ್ಡೊ, ಅವುಗಳಲ್ಲಿ ಎರಡು ವಿಶ್ವಕಪ್ ಗೆದ್ದು, ವಿಶ್ವದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ವಿಶ್ವಕಪ್‌ನಲ್ಲಿ 15 ಗೋಲು ಗಳಿಸಿದ ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಅವರ ದಾಖಲೆಯನ್ನು ರೊನಾಲ್ಡೊ 2014ರಲ್ಲಿ ಮುರಿದಿದ್ದರು.
ಇದನ್ನೂ ಓದಿ: PRO Kabaddi: ಪವನ್, ಬುಲ್ಸ್ ಆರ್ಭಟಕ್ಕೆ ಪುಣೇರಿ ಪಲ್ಟನ್ಸ್ ಪಲ್ಟಿ.. ಅಗ್ರಸ್ಥಾನಕ್ಕೇರಿದ ಬೆಂಗಳೂರು