ಮಾಲೆ : ನಾಯಕ ಚೆಟ್ರಿ ಅವರ 76ನೇ ಅಂತಾರಾಷ್ಟ್ರೀಯ ಗೋಲಿನ ಹೊರತಾಗಿಯೂ ಭಾರತ ತಂಡ ಎಸ್ಎಎಫ್ಎಫ್ ಚಾಂಪಿಯನ್ಶಿಪ್ನಲ್ಲಿ (SAFF Championships) ಸೋಮವಾರ ಬಾಂಗ್ಲಾದೇಶದ ವಿರುದ್ಧ 1-1ರಲ್ಲಿ ಡ್ರಾ ಸಾಧಿಸಿದೆ.
ಭಾರತದ 121ನೇ ಪಂದ್ಯವನ್ನಾಡುತ್ತಿರುವ 37 ವರ್ಷದ ಸುನೀಲ್ ಚೆಟ್ರಿ 27ನೇ ನಿಮಿಷದಲ್ಲಿ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಚೆಟ್ರಿ ಇನ್ನೊಂದು ಗೋಲುಗಳಿಸಿದರೆ ಬ್ರೆಜಿಲ್ನ ಪೀಲೆ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಪ್ರಸ್ತುತ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಗರಿಷ್ಠ ಗೋಲು ಗಳಿಸಿದವರ ಪಟ್ಟಿಯಲ್ಲಿ ಚೆಟ್ರಿ 4ನೇ ಸ್ಥಾನದಲ್ಲಿದ್ದಾರೆ. ಕ್ರಿಶ್ಚಿಯಾನೋ ರೊನಾಲ್ಡೊ(111), ಮೆಸ್ಸಿ(77) ಮತ್ತು ಅಲಿ ಮಾಬ್ಖೌಟ್(77) ಮೊದಲ 3 ಸ್ಥಾನದಲ್ಲಿದ್ದಾರೆ.
ಈ ಪಂದ್ಯದ ಮೊದಲಾರ್ಧದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿ ಮುನ್ನಡೆ ಕಾಪಾಡಿಕೊಂಡಿತು. ಆದರೆ, ದ್ವಿತಿಯಾರ್ಧದ 74ನೇ ನಿಮಿಷದಲ್ಲಿ ಬಾಂಗ್ಲಾದೇಶ ಗೋಲು ಸಿಡಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳ್ಳುವಂತೆ ಮಾಡಿತು.