ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ರನ್ಗಳಿಕೆ ಮಾಡಿದ್ದು, ಆತಿಥೇಯರ ಗೆಲುವಿಗೆ 290ರನ್ ಟಾರ್ಗೆಟ್ ಮುಂದಿಟ್ಟಿದೆ. ಇದರ ಜೊತೆಗೆ ಕೊನೆಯ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಶುಬ್ಮನ್ ಗಿಲ್ ಜಿಂಬಾಬ್ವೆ ನೆಲದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಧವನ್-ರಾಹುಲ್ ಜೋಡಿ 63ರನ್ಗಳ ಜೊತೆಯಾಟವಾಡಿದರು. 30ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ಕೆ ಎಲ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧವನ್ ಕೂಡ(40) ಬ್ರಾಂಡ್ ಇವನ್ಸ್ಗೆ ಬಲಿಯಾದರು.
-
Innings Break!
— BCCI (@BCCI) August 22, 2022 " class="align-text-top noRightClick twitterSection" data="
A brilliant 130 from @ShubmanGill as #TeamIndia post a total of 289/8 on the board.
Scorecard - https://t.co/ZwXNOvRwhA #ZIMvIND pic.twitter.com/sKPx9NzWwi
">Innings Break!
— BCCI (@BCCI) August 22, 2022
A brilliant 130 from @ShubmanGill as #TeamIndia post a total of 289/8 on the board.
Scorecard - https://t.co/ZwXNOvRwhA #ZIMvIND pic.twitter.com/sKPx9NzWwiInnings Break!
— BCCI (@BCCI) August 22, 2022
A brilliant 130 from @ShubmanGill as #TeamIndia post a total of 289/8 on the board.
Scorecard - https://t.co/ZwXNOvRwhA #ZIMvIND pic.twitter.com/sKPx9NzWwi
ಗಿಲ್- ಕಿಶನ್ ಜೊತೆಯಾಟ: ಆರಂಭಿಕ ಆಟಗಾರರ ಔಟಾದ ಬಳಿಕ ಒಂದಾದ ಗಿಲ್-ಕಿಶನ್ ಜೋಡಿ ತಂಡಕ್ಕೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎದುರಾಳಿ ಬೌಲರ್ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 150+ರನ್ಗಳ ಜೊತೆಯಾಟವಾಡಿದರು. ಈ ವೇಳೆ 50ರನ್ಗಳಿಕೆ ಮಾಡಿದ್ದ ಕಿಶನ್ ರನೌಟ್ ಬಲೆಗೆ ಬಿದ್ದರು.
ಜಿಂಬಾಬ್ವೆಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ಗಿಲ್: ಜಿಂಬಾಬ್ವೆ ಬೌಲರ್ಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಗಿಲ್ ದಾಖಲೆಯ 130ರನ್ಗಳಿಕೆ ಮಾಡಿದರು. ಜೊತೆಗೆ ಜಿಂಬಾಬ್ವೆ ನೆಲದಲ್ಲಿ 130ರನ್ಗಳಿಸಿ ದಾಖಲೆ ಬರೆದರು. ಈ ಹಿಂದೆ 1998ರಲ್ಲಿ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಅಜೇಯ 127ರನ್ಗಳಿಕೆ ಮಾಡಿದ್ದು, ಇಲ್ಲಿಯ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇಂದಿನ ಪಂದ್ಯದಲ್ಲಿ ಗಿಲ್ ಕೇವಲ 82 ಎಸೆತಗಳಲ್ಲಿ ಶತಕ ಸಿಡಿಸಿದರು.
ದಿಢೀರ್ ವಿಕೆಟ್ ಪತನ: ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ದೀಪಕ್ ಹೂಡಾ(1), ಸ್ಯಾಮ್ಸನ್(15), ಅಕ್ಸರ್ ಪಟೇಲ್(1), ಶಾರ್ದೂಲ್ ಠಾಕೂರ್(9)ರನ್ಗಳಿಸಿ ಔಟಾದರು. ತಂಡ ಕೊನೆಯದಾಗಿ 50 ಓವರ್ಗಳಲ್ಲಿ 8ವಿಕೆಟ್ ನಷ್ಟಕ್ಕೆ 289ರನ್ಗಳಿಕೆ ಮಾಡಿತು. ಜಿಂಬಾಬ್ವೆ ಪರ ಬ್ರಾಂಡ್ ಎವಿನ್ಸ್ ಐದು ವಿಕೆಟ್ ಪಡೆದರೆ, ಜಾಂಗ್ವೆ ಹಾಗೂ ವಿಕ್ಟರಿ ತಲಾ 1 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: Zim vs Ind 3rd ODI: ಜಿಂಬಾಬ್ವೆ ವಿರುದ್ಧ ಭಾರತ ಬ್ಯಾಟಿಂಗ್ ಆಯ್ಕೆ, ಸರಣಿ ಕ್ಲೀನ್ ಸ್ವೀಪ್ ಗುರಿ
ಜಿಂಬಾಬ್ವೆ ವಿರುದ್ಧ ನಡೆದ ಎರಡು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಈಗಾಗಲೇ ಎರಡು ಬಾರಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇಂದಿನ ಪಂದ್ಯ ಅನೌಪಚಾರಿಕವಾಗಿದೆ.