ETV Bharat / sports

​ಅಂಡರ್​ 19 ಕ್ರಿಕೆಟ್​ ಟೀಂ ಸೇರಿದ ತೆಲುಗು ಯುವತಿಯರು: ತಂದೆಯೇ ನಮಗೆ ಸ್ಪೂರ್ತಿ ಎನ್ನುತ್ತಿದ್ದಾರೆ ಯುವ ಕ್ರೀಡಾಪಟುಗಳು - national women cricket team

ನಮಗೆ ಭಾರತದ ಅಂಡರ್​ 19 ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಆಡಲಿದ್ದೇವೆ . ಈಗ ನ್ಯೂಜಿಲೆಂಡ್ ಸರಣಿಯಲ್ಲೂ ಶಕ್ತಿ ಪ್ರದರ್ಶನ ನೀಡಲಿದೆ. ಹಿರಿಯರ ತಂಡದಲ್ಲಿ ಆಡುವ ಗುರಿಯತ್ತ ಇದು ನಮ್ಮ ಮೊದಲ ಹೆಜ್ಜೆಯಾಗಿದೆ ಎನ್ನುತ್ತಿದ್ದಾರೆ ತ್ರಿಷಾ ಮತ್ತು ಶಬನಂ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ​ಅಂಡರ್​ 19 ತಂಡ ಸೇರಿದ ತೆಲುಗು ಯುವತಿಯರು; ತಂದೆಯೇ ನಮಗೆ ಸ್ಪೂರ್ತಿ ಎನ್ನುತ್ತಿದ್ದಾರೆ ಯುವ ಕ್ರೀಡಾಪಟುಗಳು
young-women-from-andhra-telangana-who-joined-the-indian-womens-cricket-team-under-19-team
author img

By

Published : Nov 22, 2022, 3:47 PM IST

Updated : Dec 1, 2022, 3:41 PM IST

ಭದ್ರಾಚಲಂ/ವಿಶಾಖಪಟ್ಟಣಂ: ಭಾರತೀಯ ಮಹಿಳಾ ಕ್ರಿಕೆಟ್​ ಅಂಡರ್​ 19 ತಂಡಕ್ಕೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ. ಗೊಂಗಡಿ ತ್ರಿಷಾ ಮತ್ತು ಶಬನಂ ಭಾರತೀಯ ಮಹಿಳಾ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಪೋಷಕರ ಕನಸನ್ನು ನನಸಾಗಿಸಿದ್ದಾರೆ. ಈ ಟಿವಿ ಭಾರತ್​ನೊಂದಿಗೆ ಮಾತನಾಡಿದ ಯುವತಿಯರು, ಭಾರತೀಯ ಮಹಿಳಾ ಕ್ರಿಕೆಟ್​​ ತಂಡ ಸೇರುವ ಕನಸು ತಮ್ಮ ಬಾಲ್ಯದ ಕ್ರಿಕೆಟ್​ ಹೋರಾಟದ ಬಗ್ಗೆ ತಿಳಿಸಿದ್ದಾರೆ.

ರೈಟ್​ ಹ್ಯಾಂಡೆಟ್​​ ಬ್ಯಾಟರ್​ ಹಾಗೂ ಲೆಗ್​ ಸ್ಪಿನರ್​ ಆಗಿರುವ ತ್ರಿಷಾ ತೆಲಂಗಾಣದ ಭದ್ರಾಚಲಂನವರಾಗಿದ್ದು, ತಮ್ಮ ಈ ಸಾಧನೆ ಸಂಪೂರ್ಣ ಕ್ರೆಡಿಟ್​ ಅನ್ನು ತಂದೆಗೆ ಸಲ್ಲಿಸಿದ್ದಾರೆ. ತ್ರಿಷಾ ತಂದೆ ರಾಮಿರೆಡ್ಡಿ ಭಾರತೀಯ ಹಾಕಿ ತಂಡದ ಪಟುವಾಗಿದ್ದು, ತಾವು ಪಟ್ಟ ಕಷ್ಟ ಮಗಳ ಕ್ರಿಕೆಟ್​ ಕನಸಿಗೆ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ.

ಹುಡುಗಿಯಾಗಿರುವ ನಾನು ಕ್ರಿಕೆಟ್​ ಅನ್ನು ವೃತ್ತಿಯನ್ನಾಗಿ ಆರಿಸಿಕೊಳ್ಳತ್ತಿರುವ ಬಗ್ಗೆ ನನ್ನ ತಂದೆಗೆ ಬಹಳಷ್ಟು ಪ್ರಶ್ನೆಗಳು ಎದುರಾದವು. ಆದರೆ, ಅವರು ಅದಕ್ಕೆ ಕೇರ್​ ಮಾಡಲಿಲ್ಲ ಎನ್ನುವ ತ್ರಿಷಾ ತಮ್ಮ ಈ ಸಾಧನೆಗೆ ತಾಯಿ ಮಾಧವಿ ಬೆಂಬಲ ಕೂಡ ಅಗಾಧ ಎಂದು ಸ್ಮರಿಸಿಕೊಂಡಿದ್ದಾರೆ.

ನನ್ನ ತಂದೆ ಹಾಕಿ ಕನಸು ನನಸಾಗಿರಲಿಲ್ಲ: ಐಟಿಸಿಯಲ್ಲಿ ಫಿಟ್ನೆಸ್​ ಸಮಲೋಚಕರಾಗಿ ಕೆಲಸಮಾಡಿದರೂ ಅವಕಾಶಗಳ ಕೊರತೆಯಿಂದಾಗಿ ನನ್ನ ತಂದೆ ಹಾಕಿ ತಂಡ ಸೇರುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ತಲೆಯಲ್ಲಿ ಯಾವಾಗಲೂ ಆಟಗಳದ್ದೇ ಚಿಂತೆ. ಈ ಹಿನ್ನಲೆ ಅವರು ನನ್ನನ್ನು ಚಾಪಿಂಯನ್​ ಆಗಿ ನೋಡಬೇಕು ಎಂದು ಬಯಸಿದರು. ನಾನು ಬ್ಯಾಟ್​ ಮತ್ತು ಬಾಲ್​ ಜೊತೆ ಬಾಲ್ಯ ಕಳೆದೆ. ಕ್ರಮೇಣ ಆಟದ ಮೇಲಿನ ಪ್ರೀತಿ ಹೆಚ್ಚಿತ್ತು. ಇದೇ ಕಾರಣದಿಂದ ನಾನು ಆಟವನ್ನು ಚೆನ್ನಾಗಿ ಆಡುತ್ತೇನೆ ಎಂದರು ತ್ರಿಷಾ.

ನನ್ನ ಉತ್ತಮ ತರಬೇತಿಗಾಗಿ ತಂದೆ ಕೆಲಸ ಬಿಟ್ಟು ಹೈದರಾಬಾದ್​ಗೆ ಬಂದೆವು. ಸಮರ್ಪಣಾ ಭಾವದಿಂದ ನಾನು ಆಟವಾಡುತ್ತಿದ್ದು, ಇದರ ಹಿಂದೆ ನನ್ನ ಪೋಷಕರ ತ್ಯಾಗ ಇದೆ ಎಂದರು. ಸದ್ಯ ತ್ರಿಷಾ ಕೋಚಿಂಗ್​ ಬಿಯಂಡ್​ ಅಕಾಡೆಮಿಯ ಆರ್​ ಶ್ರೀಧರ್​ ಅವರ ತರಬೇತಿಯಲ್ಲಿ ಆಡುತ್ತಿದ್ದಾರೆ. ನಿತ್ಯ ಬೆಳಗ್ಗೆ 6ಗಂಟೆಗೆ ತಂದೆಯೊಂದಿಗೆ ಪ್ರಾಕ್ಟೀಸ್​ ಆರಂಭವಾಗಿ, 7-8 ಗಂಟೆಗಳ ಕಾಲ ತರಬೇತಿ ನಡೆಯುತ್ತದೆ.

ದೊಡ್ಡ ಹೊಡೆತಗಳನ್ನು ಎದುರಿಸಲು ನೀವು ಫಿಟ್​ ಆಗಿರಬೇಕು. ನಾನು 50 ಯಾರ್ಡ್​ಗಳಲ್ಲಿ ಬಾಲ್​ಗಳನ್ನು ಎದುರಿಸುತ್ತೇನೆ. ಆದರೆ, ನಾನು ಈಗ 75 ಯಾರ್ಡ್​ಗಳಲ್ಲಿ ಸಿಕ್ಸ್​ ಬಾರಿಸಬಲ್ಲೆ ಎನ್ನುತ್ತಾರೆ ತ್ರಿಷಾ. ತ್ರಿಷಾ 8 ವರ್ಷ ವಯಸ್ಸಿನಲ್ಲೇ ರಾಜ್ಯದ ಅಂಡರ್​ 16 ಟೀಮ್​ನಲ್ಲಿ ಆಟವಾಡಿದ್ದಾರೆ. ತ್ರಿಷಾ ಎಚ್​ಸಿಎ ಸೀನಿಯರ್​ ಟೀಮ್​ ನಿಂದ ಆಯ್ಕೆಯಾಗಿದ್ದು, ಬಿಸಿಸಿಐ ಬೆಸ್ಟ್​ ಕ್ರಿಕೆಟರ್​ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಗೆ 13 ವರ್ಷಗಳ ಕಾಲ ಚಾಲೆಂಜರ್ಸ್ ಟೂರ್ನಿಯಲ್ಲೂ ಭಾಗಿಯಾಗಿದ್ದರು.

ಮಿಥಾಲಿಯಂತೆ ಹೆಚ್ಚಿನ ಸ್ಕೋರ್​: ತ್ರಿಷಾ, ಧೋನಿ ಮತ್ತು ಮಿಥಾಲಿ ರಾಜ್​ರಂತೆ ಅಂಡರ್​ 19 ನಲ್ಲಿ ಅತಿಹೆಚ್ಚು ರನ್​-ಸ್ಕೋರ್​​ ಹೊಂದಿದ್ದಾರೆ. ತ್ರಿಷಾ ಸದ್ಯ ಭಾವನ್ಸ್​ ಜ್ಯೂನಿಯರ್​ ಕಾಲೇಜಿನಲ್ಲಿ ಎರಡನೇ ವರ್ಷದ ಇಂಟರ್​ ಓದುತ್ತಿದ್ದು, ಸ್ವಿಮಿಂಗ್​ ಮತ್ತು ಡ್ರಾಯಿಂಗ್​ ಹವ್ಯಾಸವನ್ನು ಹೊಂದಿದ್ದಾರೆ.

ಶಬನಂ ಸಾಧನೆ ಹೀಗಿದೆ: ನೌಕ ಪಡೆ ಅಧಿಕಾರಿ ಜೊತೆ ಕ್ರಿಕೆಟರ್​ ಆಗಿರುವ ಮೊಹಮ್ಮದ್​​ ಶಕೀಲ್​ ಅವರ ಮಗಳಾದ ಶಬನಂ ವಿಶಾಖಪಟ್ಟಣದವರಾಗಿದ್ದಾರೆ. ಬಾಸ್ಟ್​​ ಬೌಲರ್ ಆಗಿದ್ದ ನನ್ನ ತಂದೆಯೇ ನಾನು ವೇಗಿ ಆಗಲು ಪ್ರೇರಣೆ. ಬ್ಯಾಟರ್‌ಗಳಿಗೆ ಉತ್ತಮ ವೇಗದಲ್ಲಿ ಬೌಲ್ ಮಾಡುವುದು ಸ್ಟಂಪ್​ ಮಾಡುವುದು ಖುಷಿ ನೀಡುತ್ತದೆ.

ಹಾಗಾಗಿ ನಾನು ಫಾಸ್ಟ್​ ಬೌಲಿಂಗ್​ ಕಡೆ ಹೆಚ್ಚು ಗಮನ ನೀಡಿದೆ ಎನ್ನುತ್ತಾರೆ ಶಬನಂ. ಕಳೆದ ವರ್ಷ ಆಂಧ್ರಪ್ರದೇಶದ ಅಂಡರ್​ 19 ತಂಡ ಸೇರ್ಪಡನೆಗೊಂಡ ಶಬನಂ ಚಾಲೆಂಜರ್ಸ್​ ಟೂರ್ನಮೆಂಟ್​ನಲ್ಲಿ ಆಡವಾಡಿದ್ದಾರೆ. ನನ್ನ ಗುರಿ ಮುಂದಿನ ವರ್ಷ ನಡೆಯಲಿರುವ ಅಂಡರ್​ 19 ವರ್ಲ್ಡ್​​ ಕಪ್​ನಲ್ಲಿ ಆಟವಾಡುವುದು.

ಪೋಷಕರ ನಂಬಿಕೆ ಉಳಿಸಿಕೊಂಡಿದ್ದೇನೆ: ಶಬನಂ ತಾಯಿ ಈಶ್ವರಮ್ಮ ಕೂಡ ನೌಕಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಹೋದರಿ ಶಹಜಾಹನ್​ ಬೇಗಂ ಕೂಡ ಕ್ರಿಕೆಟ್​​ ಪಟು. ನನ್ನ ತಂದೆಗೆ ಅನೇಕರು ಬೆಂಬಲ ನೀಡಲಿಲ್ಲ. ಆದರೆ, ಅವರು ಹುಡುಗರಿಗಿಂತ ಹುಡುಗಿಯರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದರು. ಅವರ ನಂಬಿಕೆ ಉಳಿಸಿ, ನಾವು ಏನೆಂದು ನಾವು ಸಾಬೀತು ಮಾಡಬೇಕು ಎಂದು ನಿಶ್ಚಯಿಸಿದೇವು. ಅದೇ ಹುಮ್ಮಸ್ಸಿನಿಂದ ನಾವು ಆಡುತ್ತಿದ್ದೇವೆ ಎಂದರು.

ತ್ರಿಷಾ ರೀತಿಯಲ್ಲೇ ಶಬನಂ ಕೂಡ ಬೆಳಗ್ಗೆಯೇ ಎದ್ದು ತಮ್ಮ ತರಬೇತಿ ಆರಂಭಿಸುವುದಾಗಿ ತಿಳಿಸಿದರು. ಕೋಸ್ಟಲ್​ ಅಕಾಡೆಮಿಯಲ್ಲಿ ಬೆಳಗ್ಗೆ ಮತ್ತು ವಿಡಿಸಿಯಲ್ಲಿ ಸಂಜೆ ಪ್ರಾಕ್ಟೀಸ್​ ಮಾಡುತ್ತೇವೆ. ಬೌಲರ್​ ಆಗಿ ವೃತ್ತಿ ಆರಂಭಿಸಿಕೊಳ್ಳಲು ಫಿಟ್ನೆಸ್​ ಅತ್ಯವಶ್ಯಕವಾಗಿದ್ದು, ಅದಕ್ಕಾಗಿ ವಿಶೇಷ ತರಬೇತಿ ಪಡೆಯುತ್ತಿದ್ದೇವೆ. ಸದ್ಯ ಗಂಟೆಗೆ 112 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡಬಲ್ಲೇ. ಕ್ರಿಕೆಟ್​ಗೆ ನೀಡುವಷ್ಟೇ ಗಮನವನ್ನು ಓದಿಗೆ ನೀಡುತ್ತಿದ್ದು, ಶಿವ ಶಿವಾನಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವುದಾಗಿ ಶಬನಂ ತಿಳಿಸಿದ್ದಾರೆ.

ವೇಗದ ಬೌಲರ್​ ಆಗುವುದು ನನ್ನ ಗುರಿ: ಭಾರತೀಯ ಮಹಿಳಾ ಕ್ರಿಕೆಟ್​ ತಂಡದಲ್ಲಿ ಉತ್ತಮ ವೇಗದ ಬೌಲರ್​ ಆಗಬೇಕು ಎಂಬುದು ನನ್ನ ಗುರಿ. ಇದಕ್ಕಾಗಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ. ಜುಲನ್​ ಗೋಸ್ವಾಮಿ ನನ್ನ ರೋಲ್​ ಮಾಡೆಲ್ ಎನ್ನುವ ಶಬನಂಗೆ ಬುಮ್ರಾ ಬ್ರೆಟ್​ ಲೀ ಎಂದರೆ ಇಷ್ಟ.

ನಮಗೆ ಭಾರತದ ಅಂಡರ್​ 19 ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಸಂತಸ ತಂದೆ, ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಆಡಲಿದ್ದಾರೆ. ಈಗ ನ್ಯೂಜಿಲ್ಯಾಂಡ್​ ಸರಣಿಯಲ್ಲೂ ಶಕ್ತಿ ಪ್ರದರ್ಶನ ನೀಡಲಿದೆ. ಹಿರಿಯರ ತಂಡದಲ್ಲಿ ಆಡುವ ಗುರಿಯತ್ತ ಇದು ನಮ್ಮ ಮೊದಲ ಹೆಜ್ಜೆಯಾಗಿದೆ ಎನ್ನುತ್ತಿದ್ದಾರೆ ತ್ರಿಷಾ ಮತ್ತು ಶಬನಂ.

ಇದನ್ನೂ ಓದಿ: ಐಪಿಎಲ್ ಬೆಟ್ಟಿಂಗ್ ತನಿಖೆ ನಡೆಸಿದ ಐಪಿಎಸ್ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಧೋನಿ

Last Updated : Dec 1, 2022, 3:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.