ಲಂಡನ್ : ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಪ್ರಯಾಣಿಕರನ್ನು ಇಂಗ್ಲೆಂಡ್ ನಿಷೇಧಿಸಿ ಕೆಂಪುಪಟ್ಟಿಗೆ ಸೇರಿಸಿದೆ. ಆದರೆ, ಇದರಿಂದ ಜೂನ್ನಲ್ಲಿ ನಡೆಯಬೇಕಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಐಸಿಸಿ ತಿಳಿಸಿದೆ.
ಜೂನ್ 18 ರಿಂದ 22ರವರೆಗೆ ಸೌತಂಪ್ಟನ್ನ ಏಜಸ್ ಬೌಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಟೆಸ್ಟ್ ಚಾಂಪಿಯನ್ ಟೈಟಲ್ಗಾಗಿ ಸೆಣಸಾಡಲಿದೆ. ಇಂಗ್ಲೆಂಡ್ ಭಾರತದ ಪ್ರಯಾಣಿಕರನ್ನು ರೆಡ್ ಲಿಸ್ಟ್ಗೆ ಸೇರಿಸಿರುವುದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.
ಯೋಜನೆಯಂತೆ ನಿಗದಿಯಾಗಿರುವ ದಿನಾಂಕದಂದೇ ನಡೆಯಲಿದೆ ಎಂದಿರುವ ಐಸಿಸಿ, ರಾಷ್ಟ್ರವೊಂದು ರೆಡ್‌ಲಿಸ್ಟ್‌ನಲ್ಲಿದ್ದಾಗ ಅದರ ಪರಿಣಾಮಗಳೇನು ಎಂಬುದನ್ನು ನಾವು ಇಂಗ್ಲೆಂಡ್ ಜೊತೆ ಚರ್ಚಿಸುತ್ತಿದ್ದೇವೆ" ಎಂದು ಐಸಿಸಿ ಮಂಗಳವಾರ ತಿಳಿಸಿದೆ.
ಇಸಿಬಿ(ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಮತ್ತು ಇತರ ಸದಸ್ಯರು ಸಾಂಕ್ರಾಮಿಕ ರೋಗದ ಮಧ್ಯೆ ಹೇಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸುರಕ್ಷಿತವಾಗಿ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈಗ ನಾವು ಅದನ್ನು ಮುಂದುವರಿಸಬಹುದು ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ಯುಕೆಯಲ್ಲಿ ಆಯೋಜನೆಯಂತೆ ಯಾವುದೇ ಅಡಚಣೆಯಿಲ್ಲದೆ ನಡೆಯಲಿದೆ ಎಂಬ ವಿಶ್ವಾಸವಿದೆ " ಎಂದು ಐಸಿಸಿ ವಕ್ತಾರರು ಹೇಳಿದ್ದಾರೆ.