ETV Bharat / sports

ಪೂಜಾರರ ಅರ್ಧದಷ್ಟು ಸಾಧನೆ ಮಾಡದವರೂ ಆತನ ಬ್ಯಾಟಿಂಗ್ ಟೀಕಿಸುತ್ತಿದ್ದಾರೆ : ಸಚಿನ್ ಕಿಡಿ

ಇದು ನಿಮ್ಮ ಕೈ ಬೆರಳುಗಳ ತರ, ಎಲ್ಲವೂ ಒಂದೇ ಸಮನಾಗಿರುವುದಿಲ್ಲ. ಆದರೆ, ಎಲ್ಲಾ ಬೆರಳುಗಳು ವಿವಿಧ ಪಾತ್ರವನ್ನು ನಿರ್ವಹಿಸುತ್ತವೆ. ಪೂಜಾರ ನಮ್ಮ ತಂಡದ ಅವಿಭಾಜ್ಯ ಅಂಗ. ಪೂಜಾರ ಭಾರತ ತಂಡಕ್ಕೆ ಏನು ಮಾಡುತ್ತಿದ್ದಾರೋ ಅದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರ ಪ್ರತಿ ಇನ್ನಿಂಗ್ಸ್‌ನ ಸೂಕ್ಷ್ಮವಾಗಿ ಪರಿಶೀಲಿಸುವ ಬದಲು, ಅವರೂ ಭಾರತಕ್ಕಾಗಿ ಏನೂ ಮಾಡಿದ್ದಾರೋ ಅದನ್ನು ನಾವು ಮೆಚ್ಚಬೇಕು..

ಚೇತೇಶ್ವರ್ ಪೂಜಾರ ಸಚಿನ್ ತೆಂಡೂಲ್ಕರ್
ಚೇತೇಶ್ವರ್ ಪೂಜಾರ ಸಚಿನ್ ತೆಂಡೂಲ್ಕರ್
author img

By

Published : Jun 15, 2021, 5:14 PM IST

ನವದೆಹಲಿ : ಕಳೆದ ಕೆಲವು ವರ್ಷಗಳಿಂದ ಭಾರತ ತಂಡ ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಪ್ರಮುಖ ಭಾಗವಾಗಿರುವ ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಶೈಲಿಯನ್ನು ಟೀಕಿಸುತ್ತಿರುವರು, ದೇಶಕ್ಕಾಗಿ ಏನೂ ಸಾಧನೆ ಮಾಡಿಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ಮತ್ತು ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ತೋರಿದ ಕೆಚ್ಛೆದೆಯ ಪ್ರಯತ್ನದ ಹೊರತಾಗಿಯೂ, ಅವರ ಬ್ಯಾಟಿಂಗ್ ಸ್ಕೋರ್​ಬೋರ್ಡ್​ ಮಚ್ಚೆಗೊಳಿಸುವಷ್ಟು ಉದ್ದೇಶವನ್ನು ಹೊಂದಿರಲಿಲ್ಲ ಎಂದು ಕೆಲವರು ಪೂಜಾರರನ್ನು ಟೀಕಿಸಿದ್ದರು. ಮೂರನೇ ಟೆಸ್ಟ್​ನಲ್ಲಿ 190+ ಎಸೆತಗಳನ್ನು ಎದುರಿಸಿ ಕೇವಲ 50 ರನ್​ಗಳಿಸಿದ್ದರಿಂದ ಕೆಲವು ಬಲಗೈ ಬ್ಯಾಟ್ಸ್​ಮನ್​ರನ್ನು ಟೀಕಿಸಿದ್ದರು. ಆದರೆ, ಸಚಿನ್‌ರಂತಹ ಟೀಕಾಕಾರರಿಗೆ ಮಾತಿನ ಚಾಟಿ ಬೀಸಿದ್ದು, ಟೀಕಾಕಾರರು ಪೂಜಾರ ಸಾಧನೆಯ ಹತ್ತಿರಕ್ಕೂ ಬರಲಾರದವರು ಎಂದಿದ್ದಾರೆ.

ಭಾರತಕ್ಕಾಗಿ ಚೇತೇಶ್ವರ್​ ಪೂಜಾರರ ಕೊಡುಗೆಯನ್ನು ನಾವೆಲ್ಲರೂ ಪ್ರಶಂಸಿಸಬೇಕು ಎಂದು ನಾನು ಭಾವಿಸುತ್ತೇನೆ. ಟೆಸ್ಟ್ ಕ್ರಿಕೆಟ್​ನಲ್ಲಿ ಯಾವಾಗಲೂ ಸ್ಟ್ರೈಕ್​ರೇಟ್​ ಕಾಪಾಡಿಕೊಳ್ಳುವುದು ಮುಖ್ಯವಲ್ಲ. ತಂಡ ಫಿಟ್​ ಇರಬೇಕಾದರೆ ನೀವು ವಿಭಿನ್ನ ಯೋಜನೆ ಮತ್ತು ವಿಭಿನ್ನ ಆಟಗಾರರನ್ನು ನೀವು ಹೊಂದಿರಬೇಕು, ಸ್ಟ್ರೈಕ್​ ರೇಟ್​ಗಾಗಿ ನಮ್ಮಲ್ಲಿ ರಿಷಭ್ ಪಂತ್ ಮತ್ತು ಜಡೇಜಾ ಅವರಂತ ಆಟಗಾರರಿದ್ದಾರೆ ಎಂದು ತೆಂಡೂಲ್ಕರ್ ತಂಡದಲ್ಲಿ ಪೂಜಾರ ಪಾತ್ರವೇನು ಎಂಬುದನ್ನು ಅರ್ಥಗರ್ಭಿತವಾಗಿ ಹೇಳಿದ್ದಾರೆ.

ಇದು ನಿಮ್ಮ ಕೈ ಬೆರಳುಗಳ ತರ, ಎಲ್ಲವೂ ಒಂದೇ ಸಮನಾಗಿರುವುದಿಲ್ಲ. ಆದರೆ, ಎಲ್ಲಾ ಬೆರಳುಗಳು ವಿವಿಧ ಪಾತ್ರವನ್ನು ನಿರ್ವಹಿಸುತ್ತವೆ. ಪೂಜಾರ ನಮ್ಮ ತಂಡದ ಅವಿಭಾಜ್ಯ ಅಂಗ. ಪೂಜಾರ ಭಾರತ ತಂಡಕ್ಕೆ ಏನು ಮಾಡುತ್ತಿದ್ದಾರೋ ಅದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರ ಪ್ರತಿ ಇನ್ನಿಂಗ್ಸ್‌ನ ಸೂಕ್ಷ್ಮವಾಗಿ ಪರಿಶೀಲಿಸುವ ಬದಲು, ಅವರೂ ಭಾರತಕ್ಕಾಗಿ ಏನೂ ಮಾಡಿದ್ದಾರೋ ಅದನ್ನು ನಾವು ಮೆಚ್ಚಬೇಕು ಎಂದು ಅವರು ಹೇಳಿದ್ದಾರೆ.

ಅವರ (ಪೂಜಾರ) ತಂತ್ರ ಮತ್ತು ಸ್ಟ್ರೈಕ್ ರೋಟೇಟ್​ ಮಾಡುವುದನ್ನು ಟೀಕಿಸುತ್ತಿರುವವರು, ಪೂಜಾರ ಅವರಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಆಸ್ಟ್ರೇಲಿಯಾದ ಪ್ರತಿಭೆಗಳನ್ನು ಗುರುತಿಸಿ, ಸದೃಢಗೊಳಿಸಲು ಭಾರತದ ಕ್ರಮ ಅನುಸರಿಸುವುದು ಅಗತ್ಯ: ಟಿಮ್ ಪೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.