ETV Bharat / sports

WTC ಫೈನಲ್​ನಲ್ಲಿ ಪಂತ್​ ಆಟ ನೋಡಲು ಎದುರು ನೋಡುತ್ತಿದ್ದೇನೆ: ಆಸೀಸ್​ ಲೆಜೆಂಡ್​ ಕಾತರ

ಸೌತಾಂಪ್ಟನ್‌ನ ಏಜಿಯಸ್ ಬೌಲ್‌ನಲ್ಲಿ ಜೂನ್ 18 ರಿಂದ ಭಾರತ ನ್ಯೂಜಿಲ್ಯಾಂಡ್​ ವಿರುದ್ಧ WTC ಫೈನಲ್‌ನಲ್ಲಿ ಸೆಣಸಾಡಲಿದೆ. ಈ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

WTC ಫೈನಲ್
WTC ಫೈನಲ್
author img

By

Published : Jun 17, 2021, 6:55 PM IST

ಸೌತಾಂಪ್ಟನ್: ಭಾರತ ತಂಡ ಉತ್ತಮ ಮತ್ತು ಸಮತೋಲಿತ ದಾಳಿಯನ್ನು ಹೊಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಗಿ ಆಡುವ ಅವಕಾಶ ಸೃಷ್ಟಿಸಿದ್ದಾರೆ. ಜೊತೆಗೆ ನಿರಂತರ ಸುಧಾರಣೆ ಕಾಣುತ್ತಿರುವ ಪಂತ್ ಆಟವನ್ನು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸೌತಾಂಪ್ಟನ್‌ನ ಏಜಿಯಸ್ ಬೌಲ್‌ನಲ್ಲಿ ಜೂನ್ 18 ರಿಂದ ಭಾರತ ನ್ಯೂಜಿಲ್ಯಾಂಡ್​ ವಿರುದ್ಧ WTC ಫೈನಲ್‌ನಲ್ಲಿ ಸೆಣಸಾಡಲಿದೆ. ಈ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾವು WTC ಫೈನಲ್​ನಲ್ಲಿ ವಿಶ್ವದ ಇಬ್ಬರು ಅದ್ಭುತ ಬ್ಯಾಟ್ಸ್​ಮನ್​ಗಳು ಮುಖಾಮುಖಿಯನ್ನು ನಾವು ನೋಡುವುದು ಅದೃಷ್ಟವಾಗಿದೆ. ಕೇನ್ ವಿಲಿಯಮ್ಸನ್​ ಒಬ್ಬ ಪರಿಣಾಮಕಾರಿ ಬ್ಯಾಟ್ಸ್​ಮನ್. ಕೊಹ್ಲಿ ಒಬ್ಬ ಆಕ್ರಮಣಕಾರಿ ಆಟಗಾರ ಪ್ರಮುಖ ಪಂದ್ಯಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಪ್ರವೃತ್ತಿಯನ್ನು ಅವರು ಹೊಂದಿದ್ದಾರೆ ಎಂದು ಐಸಿಸಿ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಬೌಲಿಂಗ್ ದಾಳಿಯನ್ನು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ. ಏಕೆಂದರೆ 2 ತಂಡಗಳು ಅತ್ಯುತ್ತಮ ವೇಗಿಗಳನ್ನು ಹೊಂದಿದ್ದಾರೆ. ಭಾರತ ಉತ್ತಮ ಸಮತೋಲಿತ ಬೌಲಿಂಗ್ ದಾಳಿಯನ್ನು ಹೊಂದಿದೆ. ಏಕೆಂದರೆ ಅವರಲ್ಲಿ ಒಳ್ಳೆಯ ಸ್ಪಿನ್ನರ್​ಗಳಿದ್ದಾರೆ, ಜೊತೆಗೆ ಜಡೇಜಾ ಅಂತಹ ಆಲ್​ರೌಂಡರ್​ ಇದ್ದಾರೆ ಎಂದು ಚಾಪೆಲ್ ಹೇಳಿದ್ದಾರೆ.

ನಾನು ಎದುರು ನೋಡುತ್ತಿರುವ ಮತ್ತೊಬ್ಬ ಆಟಗಾರನೆಂದರೆ ರಿಷಭ್ ಪಂತ್, ಆತ ತುಂಬಾ ಸುಧಾರಿತ ಕ್ರಿಕೆಟಿಗನಾಗಿದ್ದಾರೆ. ಇದೊಂದು ಅತ್ಯುತ್ತಮ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಆಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಆಸ್ಟ್ರೇಲಿಯನ್ ಲೆಜೆಂಡ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಶೇನ್ ವಾರ್ನ್​ ಮತ್ತು ಶ್ರೀಲಂಕಾದ ಲೆಜೆಂಡ್​ ಮಹೇಲಾ ಜಯವರ್ದನೆ ಕೂಡ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಫೈನಲ್​ನಲ್ಲಿ ಗೆಲ್ಲುವ ನೆಚ್ಚಿನ ತಂಡ ಎಂದಿದ್ದಾರೆ.

ಇದನ್ನು ಓದಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಟ್ರೈಕ್​ರೇಟ್​ ಸಂಪೂರ್ಣ ಅಸಂಬದ್ಧ ಎಂದು ಪೂಜಾರ ತೋರಿಸಿಕೊಟ್ಟಿದ್ದಾರೆ: ದಿನೇಶ್ ಕಾರ್ತಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.