ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಸುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತದ ಆಟಗಾರರು ಹೊಸ ಜರ್ಸಿಯಲ್ಲಿ ಫೊಟೋಶೂಟ್ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿತ್ರಗಳನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಅಡಿಡಾಸ್ ಸಂಸ್ಥೆ ಹೊಸ ಜರ್ಸಿ ಕಿಟ್ಗಳನ್ನು ಒದಗಿಸಿದೆ.
ಭಾರತ ತಂಡದ ಆಟಗಾರರು ಈ ಜರ್ಸಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇತ್ತೀಚೆಗೆ ಅಡಿಡಾಸ್ ಕಿಟ್ ಪ್ರಾಯೋಜಕ್ವ ವಹಿಸಿಕೊಂಡಿತ್ತು. ಮೂರು ಮಾದರಿಯ ಕ್ರಿಕೆಟ್ಗೆ ಹೊಸ ಜರ್ಸಿ ಸಿದ್ಧಪಡಿಸಲಾಗಿದೆ. ಟೆಸ್ಟ್ಗೆ ಸಾಂಪ್ರದಾಯಿಕ ಬಳಿ ಮತ್ತು ಏಕದಿನಕ್ಕೆ ನೀಲಿ ಬಣ್ಣದ ಡ್ರೆಸ್ನಲ್ಲಿ ತಂಡ ಆಡಲಿದೆ.
-
Lights 💡
— BCCI (@BCCI) June 5, 2023 " class="align-text-top noRightClick twitterSection" data="
Camera 📸
Headshots ✅#TeamIndia | #WTC23 pic.twitter.com/9G34bFfg78
">Lights 💡
— BCCI (@BCCI) June 5, 2023
Camera 📸
Headshots ✅#TeamIndia | #WTC23 pic.twitter.com/9G34bFfg78Lights 💡
— BCCI (@BCCI) June 5, 2023
Camera 📸
Headshots ✅#TeamIndia | #WTC23 pic.twitter.com/9G34bFfg78
ಕಿಶನ್, ಗಿಲ್ಗೆ 11ರಲ್ಲಿ ಸ್ಥಾನ?: ಟೆಸ್ಟ್ನಲ್ಲಿ ಆರಂಭಿಕರಾಗಿ ಗಿಲ್ ತಮ್ಮನ್ನು ಈಗಾಗಲೇ ಪ್ರೂವ್ ಮಾಡಿಕೊಂಡಿದ್ದಾರೆ. ಹೀಗಾಗಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ವರ್ಷ ಗಿಲ್ ಗೋಲ್ಡನ್ ಫಾರ್ಮ್ನಲ್ಲಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಭಾರತದಲ್ಲಿ ನಡೆದ ಕ್ರಿಕೆಟ್ ಸರಣಿಗಳಲ್ಲೂ ಉತ್ತಮ ಲಯದಲ್ಲಿ ಬ್ಯಾಟ್ ಬೀಸಿದ್ದರು. ಈ ವರ್ಷದ ಆರಂಭದಲ್ಲೇ ಶತಕ, ದ್ವಿಶತಕ ಸಾಧನೆ ತೋರಿದ್ದರು.
ಭಾರತ ತಂಡದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದ ಶ್ರೀಕರ್ ಭರತ್ ಬ್ಯಾಟಿಂಗ್ನಲ್ಲಿ ಮಿಂಚಿಲ್ಲ. ಗ್ಲೌಸ್ ತೊಟ್ಟು ತಮ್ಮ ಕೆಲಸವನ್ನು ಉತ್ತಮವಾಗಿಯೇ ನಿಭಾಯಿಸಿದ್ದಾರೆ. ಹೀಗಾಗಿ ಇಶಾನ್ ಕಿಶನ್ಗೆ ತಂಡದಲ್ಲಿ ಆಡುವ ಅವಕಾಶ ಕಡಿಮೆ ಇದೆ. ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಭರತ್ 6 ಇನಿಂಗ್ಸ್ನಲ್ಲಿ 20.22 ರ ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಆದರೆ ಒಂದು ಅರ್ಧಶತಕವೂ ಅವರ ಬ್ಯಾಟ್ನಿಂದ ದಾಖಲಾಗಿಲ್ಲ.
18 ತಿಂಗಳ ನಂತರ ಮತ್ತೆ ಟೆಸ್ಟ್ಗೆ ಮರಳಿರುವ ರಹಾನೆಗೆ ಸ್ಥಾನ ಪಕ್ಕಾ ಆಗಿದೆ. ಅಲ್ಲದೇ ಚೇತೇಶ್ವರ ಪೂಜಾರ ಸಹ ಕೌಂಟಿ ಕ್ರಿಕೆಟ್ನಲ್ಲಿ ಶತಕಗಳನ್ನು ಗಳಿಸಿ ಇಂಗ್ಲೆಂಡ್ ಹವಾಮಾನಕ್ಕೆ ಹೊಂದಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪೂಜಾರ ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ. ರವೀಂದ್ರ ಜಡೇಜಾ ಸ್ಪಿನ್ ಅಲ್ರೌಂಡರ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರ್ದೂಲ್ ಠಾಕೂರ್ ವೇಗದ ಬೌಲಿಂಗ್ ವಿಭಾಗದ ಆಲ್ರೌಂಡರ್ ಆಗಿ ಆಡುವ ಸಾಧ್ಯತೆ ಇದೆ. ಅಶ್ವಿನ್ಗೆ ಹನ್ನೊಂದರ ಬಳಗದಲ್ಲಿ ಅವಕಾಶ ಕಡಿಮೆ ಇದೆ. ಮೂವರು ವೇಗದ ಬೌಲರ್ಗಳನ್ನು ಆಡಿಸಿದಲ್ಲಿ ಶಾರ್ದೂಲ್ ಇರುವುದರಿಂದ ಉಮೇಶ್ ಹೊರಗಿಟ್ಟು ಅವಳಿ ಸ್ಪಿನ್ನರ್ ಆಡಿಸಿದರೆ ಅಶ್ವಿನ್ ಆಡುವರು ಎಂದು ಹೇಳಲಾಗುತ್ತಿದೆ.
ಸಂಭಾವ್ಯ 11 ಆಟಗಾರರ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಆರ್.ಅಶ್ವಿನ್/ ಉಮೇಶ್ ಯಾದವ್, ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಪಂದ್ಯ ಡ್ರಾ, ರದ್ದಾದರೆ ಟೆಸ್ಟ್ ಚಾಂಪಿಯನ್ ಟ್ರೋಫಿ ಯಾರಿಗೆ? ಡಬ್ಲ್ಯೂಟಿಸಿಯಲ್ಲಿ ಈ ನಿಯಮ ರದ್ದು