ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನೆರಡು ದಿನ ಬಾಕಿ ಉಳಿದಿದೆ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಭಾರತ, ಬಲಿಷ್ಠ ಆಸ್ಟ್ರೇಲಿಯಾದೊಂದಿಗೆ ಸೆಣಸಾಡಲಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ಎದುರಿನ ಸೋಲಿನಿಂದಾಗಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು. ಈ ಬಾರಿ ಗೆದ್ದು ಟೈಟಲ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದ್ದು. ಉಭಯ ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿವೆ. ಐಪಿಎಲ್ ಗುಂಗಿನಿಂದ ಹೊರಬರಲು ಭಾರತ ತಂಡದ ಎಲ್ಲ ಸದಸ್ಯರ ಬೆವರಿಳಿಸುತ್ತಿದ್ದಾರೆ. ಸಸೆಕ್ಸ್ನ ಅರುಂಡೆಲ್ ಕೌಂಟಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ತಂಡ ಭಾನುವಾರ ಓವಲ್ ಮೈದಾನಕ್ಕೆ ಆಗಮಿಸಿದ್ದು, ಅಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿದೆ. ಮೈದಾನದಲ್ಲಿ ತಂಡದ ಕಸರತ್ತಿನ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿಕೊಂಡಿದೆ.
ಆಸೀಸ್ ತಂಡ ಬೆಕೆನ್ಹ್ಯಾಮ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದು, ಸೋಮವಾರ ಓವಲ್ ಮೈದಾನಕ್ಕೆ ಆಗಮಿಸಲಿದೆ. ತಂಡದ ವೇಗಿ ಹೇಜಲ್ವುಡ್ ಗಾಯದಿಂದ ಫೈನಲ್ ತಪ್ಪಿಸಿಕೊಳ್ಳಲಿದ್ದು, ತಂಡಕ್ಕೆ ತುಸು ಹಿನ್ನಡೆ ಉಂಟಾಗಿದೆ. ವುಡ್ ಬದಲಿಗೆ ಮೈಕಲ್ ನೆಸರ್ ಸ್ಥಾನ ಪಡೆದಿದ್ದಾರೆ.
-
📍 The Oval, London
— BCCI (@BCCI) June 4, 2023 " class="align-text-top noRightClick twitterSection" data="
Prep mode 🔛 for #TeamIndia 👌 👌#WTC23 pic.twitter.com/SHEHCkzKAi
">📍 The Oval, London
— BCCI (@BCCI) June 4, 2023
Prep mode 🔛 for #TeamIndia 👌 👌#WTC23 pic.twitter.com/SHEHCkzKAi📍 The Oval, London
— BCCI (@BCCI) June 4, 2023
Prep mode 🔛 for #TeamIndia 👌 👌#WTC23 pic.twitter.com/SHEHCkzKAi
ಪಂದ್ಯ ಡ್ರಾ- ಟೈ ರದ್ದಾದರೆ ಟ್ರೋಫಿ ಯಾರಿಗೆ?: ಸತತ ಎರಡನೇ ಬಾರಿಗೆ ಭಾರತ ತಂಡ ಫೈನಲ್ ತಲುಪಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಈ ಬಾರಿ ಆಸೀಸ್ ಎದುರಾಳಿಯಾಗಿದ್ದು, ಪಂದ್ಯ ಡ್ರಾ, ಟೈ ಮತ್ತು ರದ್ದಾದರೆ ಯಾವ ತಂಡವು ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪಡೆಯುತ್ತದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲದ ಪ್ರಶ್ನೆಯಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ಸೈಟ್ವೊಂದರ ವರದಿಯ ಪ್ರಕಾರ, ಮಳೆ ಮತ್ತಿರರ ಕಾರಣಗಳಿಂದ ಪಂದ್ಯ ಡ್ರಾ, ಟೈ ಅಥವಾ ರದ್ದಾರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜಂಟಿಯಾಗಿ ಪ್ರಶಸ್ತಿಯನ್ನು ಪಡೆಯಲಿವೆ. ಇದಲ್ಲದೇ ಜೂನ್ 11 ರಂದು ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಜೂನ್ 12 ರಂದು ಮೀಸಲು ದಿನದ ವ್ಯವಸ್ಥೆ ಮಾಡಲಾಗಿದೆ. ಮಳೆ ಅಥವಾ ಇನ್ನಾವುದೇ ಕಾರಣದಿಂದ ಪಂದ್ಯವು ಒಂದು ಗಂಟೆಗೂ ಹೆಚ್ಚು ವಿಳಂಬವಾದಾಗ ಮಾತ್ರ ಮೀಸಲು ದಿನದ ಬಳಕೆಗೆ ಅವಕಾಶವಿದೆ.
ಈ ನಿಯಮ ರದ್ದು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಐಸಿಸಿ ಕೆಲ ನಿಯಮಗಳನ್ನು ರದ್ದು ಮಾಡಿದೆ. ಡಬ್ಲ್ಯುಟಿಸಿಯಲ್ಲಿ ಮೈದಾನದ ಅಂಪೈರ್ ನೀಡುವ 'ಸಾಫ್ಟ್ ಸಿಗ್ನಲ್ ' ನಿಯಮ ಇರುವುದಿಲ್ಲ ಎಂದು ಐಸಿಸಿ ಹೇಳಿದೆ. ಸಾಫ್ಟ್ ಸಿಗ್ನಲ್ ಅಂದರೆ, ಆಟಗಾರ ಕ್ಯಾಚ್ ಅಥವಾ ಎಲ್ಬಿಡಬ್ಲ್ಯೂ ಆದಾಗ ಅಂಪೈರ್ ತೀರ್ಪು ನೀಡುತ್ತಾರೆ. ಅದನ್ನು ಎದುರಾಳಿ ತಂಡ ಪ್ರಶ್ನಿಸಿ ಮೂರನೇ ಅಂಪೈರ್ ಮೊರೆ ಹೋದರೆ, ಮೈದಾನದ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್ ಅನ್ನು ಪರಿಗಣಿಸುವಂತಿಲ್ಲ. ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಮೂರನೇ ಅಂಪೈರ್ ನೀಡಿದ ನಿರ್ಧಾರವೇ ಅಂತಿಮವಾಗಿರಲಿದೆ.
ಇದಕ್ಕೂ ಮೊದಲು ಆನ್ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಮೂರನೇ ಅಂಪೈರ್ ಪರಿಗಣಿಸುತ್ತಿದ್ದರು. ಹೀಗಾಗಿ ಈ ನಿಯಮದಿಂದ ಸಾಕಷ್ಟು ವಿವಾದಗಳು ಉಂಟಾಗಿದ್ದರು. ಹೀಗಾಗಿ ಈ ನಿಯಮವನ್ನು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರದ್ದುಪಡಿಸಿದೆ.
ಓದಿ: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಧೋನಿ ದಾಖಲೆ ಮುರಿಯಲಿರುವ ವಿರಾಟ್ ಮತ್ತು ರೋಹಿತ್..