ETV Bharat / sports

ಮಹಿಳಾ ಪ್ರೀಮಿಯರ್ ಲೀಗ್​: ಯುಪಿ ಸೋಲಿಸಿ ಫೈನಲ್‌ಗೆ ನೇರ​ ಪ್ರವೇಶ ಪಡೆದ ಡೆಲ್ಲಿ - ಡೆಲ್ಲಿ ಕ್ಯಾಪಿಟಲ್ಸ್​ ಯುಪಿ ವಾರಿಯರ್ಸ್​ ಪಂದ್ಯ

ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಮಹಿಳಾ ಪ್ರೀಮಿಯರ್​ ಲೀಗ್​ನ ಫೈನಲ್​ ತಲುಪಿತು. ಮಾರ್ಚ್​ 26 ರಂದು ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್​ ನೇರ ಫೈನಲ್​​ ಪ್ರವೇಶ
ಡೆಲ್ಲಿ ಕ್ಯಾಪಿಟಲ್ಸ್​ ನೇರ ಫೈನಲ್​​ ಪ್ರವೇಶ
author img

By

Published : Mar 22, 2023, 6:58 AM IST

ಮುಂಬೈ: ಮಹಿಳಾ ಪ್ರೀಮಿಯರ್​ ಲೀಗ್​ನ(WPL) "ಫೈನಲ್​" ಕದನ ಎಂದೇ ಬಿಂಬಿತವಾಗಿದ್ದ ಕೊನೆಯ ಲೀಗ್​ ಪಂದ್ಯಗಳಲ್ಲಿ ನಿರೀಕ್ಷೆಯಂತೆ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಜಯ ಸಾಧಿಸಿವೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ವಿರುದ್ಧ ಐದು ವಿಕೆಟ್​ಗಳ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್​ ನೇರವಾಗಿ ಫೈನಲ್​ ತಲುಪಿತು. ಲೀಗ್​ನಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಆರ್​ಸಿಬಿಯನ್ನು 4 ವಿಕೆಟ್​​ಗಳಿಂದ ಮಣಿಸಿ ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಅಗ್ರಸ್ಥಾನ ಪಡೆಯಿತು. ಆಡಿದ 8 ಪಂದ್ಯಗಳಲ್ಲಿ ಮುಂಬೈ ಮತ್ತು ಡೆಲ್ಲಿ ತಲಾ 6 ಗೆದ್ದು 2 ರಲ್ಲಿ ಸೋತು 12 ಅಂಕ ಪಡೆದಿವೆ. ಆದರೆ, ನೆಟ್​ರನ್​ ರೇಟ್​ನಲ್ಲಿ ಡೆಲ್ಲಿ ಮುಂಬೈಗಿಂತಲೂ ಮುಂದಿದ್ದ ಕಾರಣ ಫೈನಲ್​ಗೆ ನೇರ ಪ್ರವೇಶ ಪಡೆಯಿತು.

ಮುಂಬೈ ಇಂಡಿಯನ್ಸ್​ +1.711 ರನ್​ರೇಟ್​ ಹೊಂದಿದ್ದರೆ, ಡೆಲ್ಲಿ +1.856 ಹೊಂದಿದೆ. 2 ನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್​ ಮತ್ತು ಮೂರಲ್ಲಿರುವ ಯುಪಿ ವಾರಿಯರ್ಸ್​​ ಫೈನಲ್​ ತಲುಪಬೇಕಾದರೆ, ಎಲಿಮಿನೇಟರ್​ ಪಂದ್ಯವಾಡಿ, ಅಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಡೆಲ್ಲಿ ತಂಡದ ಜೊತೆ ಕಾದಾಡಲಿದೆ. ಮಾರ್ಚ್​ 24 ರಂದು ಎಲಿಮಿನೇಟರ್​, ಮಾರ್ಚ್​ 26 ರಂದು ಫೈನಲ್ ಪಂದ್ಯ ನಡೆಯಲಿದೆ.

ಹ್ಯಾಟ್ರಿಕ್​ ಗೆಲುವು ತಡೆದ ಡೆಲ್ಲಿ: ಪಂದ್ಯದಲ್ಲಿ ಡೆಲ್ಲಿ ತಂಡ ಪಾರಮ್ಯ ಮೆರೆಯಿತು. ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಹ್ಯಾಟ್ರಿಕ್​ ಜಯದ ಗುರಿಯಲ್ಲಿದ್ದ ಯುಪಿ ವಾರಿಯರ್ಸ್​ಗೆ ಡೆಲ್ಲಿ ನಾರಿಯರು ಬ್ರೇಕ್​ ಹಾಕಿದರು. ಆಲ್‌ರೌಂಡ್ ಪ್ರದರ್ಶನ ನೀಡಿದ ಅಲಿಸ್ ಕ್ಯಾಪ್ಸಿ 3 ವಿಕೆಟ್‌ ಕಬಳಿಸಿದರೆ, 34 ರನ್ ಮಾಡಿ ಬ್ಯಾಟಿಂಗ್​ನಲ್ಲಿ ನೆರವಾದರು. ಇದು ಕ್ಯಾಪಿಟಲ್ಸ್ ಜಯಕ್ಕೆ ಕಾರಣವಾಯಿತು.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಯುಪಿ ವಾರಿಯರ್ಸ್​, ತಹಿಲಾ ಮೆಕ್​ಗ್ರಾಥ್​ರ ಅಜೇಯ ಅರ್ಧಶತಕ ಬಲದಿಂದ 6 ವಿಕೆಟ್​ಗೆ 138 ರನ್​ ಗಳಿಸಿತು. ಡೆಲ್ಲಿ ತಂಡ 17.5 ಓವರ್​ಗಳಲ್ಲಿ 142 ಬಾರಿಸಿ ಗುರಿ ಬೆನ್ನಟ್ಟುವ ಮೂಲಕ ಫೈನಲ್​ ಸ್ಥಾನ ಖಚಿತಪಡಿಸಿಕೊಂಡಿತು. ಸಂಘಟಿತ ಪ್ರದರ್ಶನ ನೀಡಿದ ಡೆಲ್ಲಿ ವನಿತೆಯರು ಯುಪಿ ಮಹಿಳೆಯರ ವಿರುದ್ಧ ಸುಲಭ ಜಯ ಪಡೆದರು.

ಯುಪಿ ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ 36, ಶ್ವೇತಾ ಶೆಹ್ರಾವತ್​​ 19, ಸಿಮ್ರಾನ್​ ಶೈಕ್​ 11 ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸಿಡಿದ ತಹಿಲಾ ಮೆಕ್​ಗ್ರಾಥ್​ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರು. ತಹಿಲಾ ಕೇವಲ 32 ಎಸೆತಗಳಲ್ಲಿ 58 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಇನಿಂಗ್ಸ್​ನಲ್ಲಿ 8 ಬೌಂಡರಿ, 2 ಸಿಕ್ಸರ್​ ಇದ್ದವು. ಸಿಮ್ರಾನ್​ ಔಟಾದ ಬಳಿಕ ಬೇರೆ ಬ್ಯಾಟರ್​ಗಳು ನೆರವು ನೀಡದ ಕಾರಣ ತಂಡ ಕುಸಿತ ಕಂಡು 20 ಓವರ್​ಗಳಲ್ಲಿ 138 ರನ್​ ಮಾತ್ರ ಕಲೆ ಹಾಕಿತು. ಡೆಲ್ಲಿ ಪರವಾಗಿ ಅಲಿಸ್ಸಾ ಕ್ಯಾಪ್ಸಿ 3, ರಾಧಾ ಯಾದವ್​ 2, ಜೆಸ್​ ಜೊನಾಸ್ಸೆನ್​ 1 ವಿಕೆಟ್​ ಪಡೆದರು.

ಸುಲಭ ತುತ್ತಾದ ಗುರಿ: ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​​ ನಾಯಕಿ ಮೆಗ್​ ಲ್ಯಾನಿಂಗ್​, ಮಾರಿಝನ್ನೆ ಕಾಪ್​, ಅಲಿಸ್ಸಾ ಕ್ಯಾಪ್ಸಿ ಉತ್ತಮ ಬ್ಯಾಟ್​ನಿಂದಾಗಿ ಸುಲಭವಾಗಿ ಜಯ ದಾಖಲಿಸಿತು. ಬೌಲಿಂಗ್​ನಲ್ಲಿ 3 ವಿಕೆಟ್​ ಪಡೆದು ಮಿಂಚಿದ್ದ ಅಲಿಸ್ಸಾ ಕ್ಯಾಪ್ಸಿ 34 ರನ್​ ಗಳಿಸಿದರು. ಇದಲ್ಲದೇ, ಮೆಗ್​ 39, ಕಾಪ್​ 34, ಶೆಫಾಲಿ ವರ್ಮಾ 21 ರನ್​ ಗಳಿಸಿದರು. ತಂಡ 13 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು.

ಇದನ್ನೂ ಓದಿ: ಅಲ್ಪ ಮೊತ್ತಕ್ಕೆ ಕುಸಿದ ಆರ್​ಸಿಬಿ: ಬೆಂಗಳೂರು ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.