ETV Bharat / sports

ಭೂತ ಕಾಲದ ಲೆಕ್ಕಾಚಾರಕ್ಕಿಂತ ವರ್ತಮಾನದಲ್ಲಿ ಕೆಲಸ ಮಾಡುವುದು ಉತ್ತಮ: ರೋಹಿತ್​ ಶರ್ಮಾ

author img

By ETV Bharat Karnataka Team

Published : Nov 14, 2023, 10:12 PM IST

ಹಿಂದಿನ ಆಟದ ಬಗ್ಗೆ ಯೋಚಿಸುವುದಕ್ಕಿಂತ ಇಂದು ಹೇಗೆ ಆಡಬೇಕು ಎಂಬುದನ್ನು ಯೋಚಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಪಂದ್ಯದ ಮುನ್ನಾದಿನ ನಡೆದ ಪತ್ರಕಾಗೋಷ್ಠಿಯಲ್ಲಿ ರೋಹಿತ್​ ಶರ್ಮಾ ಹೇಳಿದರು.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್​ ಸೆಮೀಸ್ ಸೋಲಿನಲ್ಲಿ ಈಗ ಆಡುತ್ತಿರುವ ತಂಡದ ಅರ್ಧದಷ್ಟು ಆಟಗಾರರು ಆಡಿರಲಿಲ್ಲ. ಭಾರತ ಮೊದಲ ವಿಶ್ವಕಪ್​ ಗೆದ್ದಾಗ ಹೆಚ್ಚಿನ ಆಟಗಾರರು ಹುಟ್ಟಿರಲೇ ಇಲ್ಲ. ಹೀಗಾಗಿ ಹಿಂದಿನ ಲೆಕ್ಕಾಚಾರ ಮಾಡುವುದಕ್ಕಿಂತ ವರ್ತಮಾನದ ಕೆಲಸದ ಬಗ್ಗೆ ಚಿಂತಿಸುವುದು ಉತ್ತಮ ಎಂದು ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

"2011ರ ವಿಶ್ವಕಪ್​ ಗೆದ್ದಾಗ ಈ ತಂಡದಲ್ಲಿದ್ದ ಅರ್ಧದಷ್ಟು ಆಟಗಾರರು ಆಡುತ್ತಿರಲಿಲ್ಲ. ಮೊದಲ ವಿಶ್ವಕಪ್​ ಗೆದ್ದಾಗ ಕೆಲ ಆಟಗಾರರು ಹುಟ್ಟಿಯೇ ಇರಲಿಲ್ಲ. ಬೆಳೆಯುತ್ತಿರುವ ಯುವ ಆಟಗಾರರಲ್ಲಿ ನಾವು ಇಂದು ಏನಾಗುತ್ತಿದೆ, ನಾಳೆ ಏನಾಗಬೇಕು ಎಂಬ ಆಸಕ್ತಿಯನ್ನು ನೀಡಬೇಕು. ಅಲ್ಲದೇ ಆಟಗಾರನಾಗಿ ಪ್ರತಿಯೊಬ್ಬ ಏನು ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಕೇಂದ್ರೀಕರಿಸಬೇಕಾಗಿದೆ. ತಂಡಕ್ಕಾಗಿ ಏನನ್ನು ಮಾಡಬಲ್ಲರು ಎಂದು ನೋಡಬೇಕಿದೆ. ಗಮನ ಯಾವಾಗಲೂ ವರ್ತಮಾನದ ಮೇಲೆ ಇರುತ್ತದೆ. ಇದು ತುಂಬಾ ಒಳ್ಳೆಯದು ಎಂದು ನಾನು ನಂಬುತ್ತೇನೆ. ಈ ರೀತಿಯ ಪಂದ್ಯಾವಳಿಗೆ ಹೋಗುವಾಗ, ಮೊದಲನೆ ಆಟದಿಂದ, ನಾವು ಇಂದು ಏನನ್ನು ಸಾಧಿಸಬಹುದು ಎಂಬುದರ ಮೇಲೆ ಯಾವಾಗಲೂ ಗಮನ ಹರಿಸಬೇಕು. ಇಂದು ನೀವು ಏನನ್ನು ಸಾಧಿಸುತ್ತೀರೋ ಅದು ನಾಳೆ ನೀವು ಏನನ್ನು ಸಾಧಿಸಬಹುದು ಎಂಬುದಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ನಮ್ಮಲ್ಲಿರುವ ಯುವ ಆಟಗಾರರು ಉತ್ತಮವಾಗಿ ಬೆಳೆಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಕುಲ್ದೀಪ್​ ಯಾದವ್​ ಅವರನ್ನು ತಂಡದ ಬಲ ಎಂದು ರೋಹಿತ್​ ಹೇಳಿದ್ದಾರೆ. ಧರ್ಮಶಾಲಾದಲ್ಲಿ ಕಿವೀಸ್​ ತಂಡಕ್ಕೆ ಕುಲ್ದೀಪ್​ ಕಾಡಿದ್ದರು, ಅದೇ ವಿಶ್ವಾಸವನ್ನು ಮುಂದುವರೆಸುತ್ತಾರೆ ಎಂದು ಹೇಳಿದ್ದಾರೆ. "ಕುಲ್ದೀಪ್ ಅವರಿಗೆ ವಹಿಸಲಾದ ಕಾರ್ಯವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಮತ್ತು ಅವರ ಕಾರ್ಯಕ್ಷಮತೆಯಿಂದ ನಮಗೆ ತುಂಬಾ ಸಂತೋಷವಾಗಿದೆ. 2019 ರಲ್ಲಿ ನಾನು ನಾಯಕನಾಗಿರಲಿಲ್ಲ ಆದ್ದರಿಂದ ಈ ಸುತ್ತಲಿನ ಮಾತುಕತೆಗಳೊಂದಿಗೆ ನೇರ ಸಂಪರ್ಕದಲ್ಲಿರಲಿಲ್ಲ. ಆದರೆ, ಆಗಲೂ ಮತ್ತು ಈಗಲೂ ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಹಾರ್ದಿಕ್ ಗಾಯಗೊಂಡಿದ್ದರಿಂದ ನಾವು ನಮ್ಮ ಸಂಯೋಜನೆಯನ್ನು ಸ್ವಲ್ಪ ಬದಲಾಯಿಸಬೇಕಾಗಿತ್ತು, ಆದರೆ ಪ್ರತಿಯೊಬ್ಬ ಆಟಗಾರನಿಗೆ ನಿಯೋಜಿಸಲಾದ ಪಾತ್ರಗಳು ಬದಲಾಗಿಲ್ಲ ಮತ್ತು ಅವರು ಆ ಪಾತ್ರಗಳಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.

"ಇತರ ವಿಷಯಗಳ ಬಗ್ಗೆ ಯೋಚಿಸಲು ಬೇರೆ ಸಮಯ ಇದೆ. ಆದರೆ, ಕ್ರಿಕೆಟ್ ಬಗ್ಗೆ ಪ್ರತಿಕ್ಷಣವೂ ಯೋಚನೆ ಮಾಡುತ್ತೇನೆ. ನನ್ನ ಪ್ರಯಾಣದ ಬಗ್ಗೆ ಯೋಚಿಸಲು ನನಗೀಗ ಸಮಯವಿಲ್ಲ. ಬಹುಶಃ ನಾನು ನವೆಂಬರ್ 19ರ ನಂತರ ಅದನ್ನು ಮಾಡುತ್ತೇನೆ. ಆಶಾದಾಯಕವಾಗಿ, ಅದೃಷ್ಟವು ಧೈರ್ಯಶಾಲಿಗಳಿಗೆ ಒಲವು ತೋರುತ್ತದೆ " ಎಂದು ಅವರು ನಗುತ್ತಾ ಹೇಳಿದರು.

ನ್ಯೂಜಿಲೆಂಡ್ ತಂಡದ ಉತ್ತಮ ಅಂಕಗಳ ಬಗ್ಗೆ ಮಾತನಾಡಿದ ಅವರು "ಕಿವೀಸ್​ ಅತ್ಯಂತ ಶಿಸ್ತುಬದ್ಧ ಮತ್ತು ಸ್ಥಿರವಾದ ತಂಡ". ಅವರಿಗೆ ಅದೃಷ್ಟ ಇದ್ದಲ್ಲಿ ಅವರ ತಂಡ ಅಹಮದಾಬಾದ್​​ಗೆ ಪ್ರಯಾಣ ಬೆಳೆಸುತ್ತದೆ ಎಂದಿದ್ದಾರೆ.

ಮುಂಬೈಕರ್ ರೋಹಿತ್​ಗೆ ವಾಂಖೆಡೆಯಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಇದೆ. ತಮ್ಮ ತವರು ನೆಲದ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದವರು ಹೇಳಿದರು. "ಟಾಸ್ ನಿರ್ಣಾಯಕ ಅಂಶವಲ್ಲ ಎಂದು ನಾನು ಹೇಳಬಲ್ಲೆ." ಎಲ್ಲಾ ಆಟಗಾರರು ತಮ್ಮ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸಿದರೆ, ಟಾಸ್​ ಲೆಕ್ಕಕ್ಕೇ ಬರುವುದಿಲ್ಲ.

ಆಟಗಾರರ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ ರೋಹಿತ್​ ಶರ್ಮಾ, ಭಾರತದ ಆಟಗಾರರು ಎಲ್ಲೇ ಆಡಿದರು ಅಭಿಮಾನಿಗಳು ಅವರೊಂದಿಗೆ ಇದ್ದೇ ಇರ್ತಾರೆ. ಬ್ಯಾಟರ್​ ಶತಕ ಗಳಿಸಬೇಕು, ಬೌಲರ್​ 5 ವಿಕೆಟ್​ ಪಡೆಯಬೇಕು ಎಂದೇ ಬಯಸುತ್ತಾರೆ. 200 ರಿಂದ 250 ಪಂದ್ಯ ಆಡಿದವನಿಗೆ, 5-10 ಪಂದ್ಯ ಆಡಿದವನಿಗೆ ಒಂದೇ ರೀತಿಯ ಆಟದ ಒತ್ತಡ ಇರುತ್ತದೆ. ಆದರೆ ನಾವು ಇವೆಲ್ಲವನ್ನು ಬದಿಗಿಟ್ಟು, ಆಟ ಮತ್ತು ನಮ್ಮ ತಂತ್ರವನ್ನು ಕಾರ್ಯಗತ ಮಾಡಬೇಕಷ್ಟೇ" ಎಂದು ಹೇಳಿದರು.

ಇದನ್ನೂ ಓದಿ: IND vs NZ: ಸೆಮೀಸ್​ ಸೇಡಿಗೆ ರೋಹಿತ್​ ಪಡೆ ರೆಡಿ: ಮುಂದುವರೆಯುತ್ತಾ ಭಾರತದ ಅಜೇಯ ಓಟ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.