ETV Bharat / sports

ಭಾರತ vs ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ ಯಾರು ಪ್ರಬಲರು? ಇಲ್ಲಿದೆ ಅಂಕಿ - ಅಂಶ

India vs Australia: ನಾಕೌಟ್​ ಹಂತದ ಭಾರತ ಮತ್ತು ಆಸ್ಟ್ರೇಲಿಯಾದ ಮುಖಾಮುಖಿಯಲ್ಲಿ ಹೆಚ್ಚು ಮೇಲುಗೈ ಸಾಧಿಸಿದ ತಂಡ ಯಾವುದು ಎಂಬುದಕ್ಕೆ ಇಲ್ಲಿದೆ ಉತ್ತರ.

india vs australia
india vs australia
author img

By ETV Bharat Karnataka Team

Published : Nov 17, 2023, 5:45 PM IST

ಹೈದರಾಬಾದ್​: 2023ರ ವಿಶ್ವಕಪ್​ ಚಾಂಪಿಯನ್​ಗೆ ಎದುರಾಳಿಗಳು ಭಾರತ ಮತ್ತು ಆಸ್ಟ್ರೇಲಿಯಾ ಎಂಬುದು ನಿಗದಿಯಾಗಿದೆ, ನವೆಂಬರ್​ 19ರಂದು ಯಾರ ಮುಡಿಗೆ ವಿಶ್ವಕಪ್​ ಕಿರೀಟ ಏರಿಲಿದೆ ಎಂಬುದು ನಿರ್ಧಾರ ಆಗಲಿದೆ. ಈ ಅಂತಿಮ ಹಣಾಹಣಿಗಾಗಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ.

ಲೀಗ್​ ಮತ್ತು ಸೆಮೀಸ್​ ಸೇರಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಪ್ರವೇಶಿಸಿರುವ ಟೀಮ್​ ಇಂಡಿಯಾ ಜಾಗತಿಕವಾಗಿ ಗೆಲ್ಲುವ ಅಚ್ಚುಮೆಚ್ಚಿನ ತಂಡವಾಗಿದೆ. ಆದರೆ, ಇತಿಹಾಸದ ಪುಟದಲ್ಲಿ ವಿಶ್ವ ವೇದಿಕೆಯ ಪ್ರಮುಖ ಹಂತದಲ್ಲಿ ಕಾಂಗರೂ ಪಡೆ ಮೇಲುಗೈ ಸಾಧಿಸಿದೆ. ಐದು ಬಾರಿ ವಿಶ್ವ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ಎಂಟನೇ ವಿಶ್ವಕಪ್​ ಫೈನಲ್ ಪಂದ್ಯವಾಗಿದೆ. ಎರಡು ಬಾರಿ ವಿಶ್ವಕಪ್​ ಗೆದ್ದಿರುವ ಭಾರತ ತಂಡಕ್ಕೆ ಇದು ಮೂರನೇ ಫೈನಲ್ ಪಂದ್ಯ ಆಗಿದೆ.

ಭಾರತ - ಆಸಿಸ್​ ಮು​ಖಾಮುಖಿ: ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ 13 ಸಲ ಎದುರಾಗಿದೆ. ಇದರಲ್ಲಿ ಭಾರತ 5, ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆದ್ದಿದೆ. ಈ ಎರಡು ತಂಡಗಳು ನಾಕೌಟ್ ಹಂತದಲ್ಲಿ 3 ಬಾರಿ ಮುಖಾಮುಖಿ ಆಗಿದ್ದು, ಭಾರತ ಒಮ್ಮೆ ಮಾತ್ರ ಗೆದ್ದಿದ್ದರೆ ಎರಡು ಬಾರಿ ಸೋಲು ಕಂಡಿದೆ. ಈ ಬಾರಿ ಫೈನಲ್​ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿದ್ದು, ವಿಜಯ ಮಾಲೆ ಯಾರ ಕೊರಳಿಗೆ ಎಂಬ ಕುತೂಹಲ ಎಲ್ಲರಲ್ಲಿದೆ.

ಹಿಂದಿನ ಪಂದ್ಯಗಳು:

1 - 2003 ವಿಶ್ವಕಪ್ ಫೈನಲ್: 2003ರ ಏಕದಿನ ವಿಶ್ವಕಪ್‌ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಿತು. ಈ ಅಮೋಘ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿತ್ತು. 360 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತವನ್ನು 125 ರನ್‌ಗಳಿಂದ ಸೋಲಿಸಿ ಟ್ರೋಫಿ ಗೆಲ್ಲುವ ಕನಸನ್ನು ಆಸ್ಟ್ರೇಲಿಯಾ ಭಗ್ನಗೊಳಿಸಿತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದಿತ್ತು.

2 - 2011 ವಿಶ್ವಕಪ್ ಕ್ವಾರ್ಟರ್​ ಫೈನಲ್​: 2011ರ ವಿಶ್ವಕಪ್‌ನ ಕ್ವಾರ್ಟರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 260 ರನ್‌ ಗಳಿಸಿತ್ತು. ಈ ಗುರಿಯನ್ನು ಭಾರತ ತಂಡ 47.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ತಲುಪಿತು. ಇದರೊಂದಿಗೆ ಭಾರತ 14 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ಗಳಿಂದ ಪಂದ್ಯ ಗೆದ್ದು ಆಸ್ಟ್ರೇಲಿಯಾದ ಸೆಮಿಫೈನಲ್ ಕನಸನ್ನು ಭಗ್ನಗೊಳಿಸಿತು.

3 - 2015 ವಿಶ್ವಕಪ್ ಸೆಮಿಫೈನಲ್: 2011ರಲ್ಲಿ ಚಾಂಪಿಯನ್​ ಆಗಿದ್ದ ಭಾರತವನ್ನು ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಮಣಿಸಿ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಭಾರತದ ಕನಸನ್ನು ಭಗ್ನಗೊಳಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 328 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ 46.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿ 95 ರನ್‌ಗಳಿಂದ ಸೋಲು ಕಂಡಿತು. ಇದರೊಂದಿಗೆ ಭಾರತವು 2011ರಲ್ಲಿ ಗೆದ್ದ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

2023ರ ವಿಶ್ವಕಪ್​ಗೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಸೋಲಿಸಿತ್ತು. ಹಾಗೆಯೇ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತ - ಆಸ್ಟ್ರೇಲಿಯಾ ಮುಖಾಮುಖಿ ಆಗಿದ್ದವು. ಇಲ್ಲಿಯೂ ಭಾರತವೇ ಮೇಲುಗೈ ಸಾಧಿಸಿತ್ತು. ಈಗ ಮತ್ತೊಮ್ಮೆ ಎದುರಾಗುತ್ತಿದ್ದು, ಗೆದ್ದವರು ಚಾಂಪಿಯನ್​ ಪಟ್ಟ ಅಲಂಕರಿಸಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್‌ಗೂ ಮುನ್ನ ವಾಯುಪಡೆಯ ಸೂರ್ಯಕಿರಣ್‌ ತಂಡದಿಂದ ಆಕರ್ಷಕ ಏರ್‌ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.