ನವದೆಹಲಿ: ಆಸ್ಟ್ರೇಲಿಯಾದ ಅನುಭವಿ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಆರು ವಿಶ್ವಕಪ್ ಶತಕಗಳ ದಾಖಲೆಯನ್ನು ಸರಿಗಟ್ಟಿ ಇತಿಹಾಸ ಬರೆದಿದ್ದಾರೆ. ಅಲ್ಲದೆ, ವಿಶ್ವಕಪ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ತೆಂಡೂಲ್ಕರ್ ಜೊತೆಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಫಾರ್ಮ್ಗೆ ಮರಳಿರುವ ವಾರ್ನರ್ ಆಸಿಸ್ ಪರ ಸತತ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 5 ಇನ್ನಿಂಗ್ಸ್ನಲ್ಲಿ ಒಂದು ಅರ್ಧಶತಕ ಮತ್ತು 2 ಶತಕದ ಇನ್ನಿಂಗ್ಸ್ ಆಡಿರುವ ಅವರು ಆಸ್ಟ್ರೇಲಿಯಾ ಪರ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
-
Most World Cup centuries (innings):
— Mufaddal Vohra (@mufaddal_vohra) October 25, 2023 " class="align-text-top noRightClick twitterSection" data="
Rohit - 7 (22).
Warner - 6 (23)*.
Sachin - 6 (44). pic.twitter.com/xvByQodLdx
">Most World Cup centuries (innings):
— Mufaddal Vohra (@mufaddal_vohra) October 25, 2023
Rohit - 7 (22).
Warner - 6 (23)*.
Sachin - 6 (44). pic.twitter.com/xvByQodLdxMost World Cup centuries (innings):
— Mufaddal Vohra (@mufaddal_vohra) October 25, 2023
Rohit - 7 (22).
Warner - 6 (23)*.
Sachin - 6 (44). pic.twitter.com/xvByQodLdx
ರೋಹಿತ್ ಶರ್ಮಾ 22 ಇನ್ನಿಂಗ್ಸ್‌ಗಳಲ್ಲಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳೊಂದಿಗೆ (7) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಡಚ್ ತಂಡದ ವಿರುದ್ಧ ಆರಂಭದಿಂದಲೇ ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ ವಾರ್ನರ್ 11 ಬೌಂಡರಿಗಳು ಮತ್ತು ಮೂರು ಸಿಕ್ಸ್ ಗಳಿಂದ 104 ರನ್ ಗಳಿಸಿದರು. ಇದರಿಂದ ವಿಶ್ವಕಪ್‌ನಲ್ಲಿ 6ನೇ ಶತಕವನ್ನು ದಾಖಲಿಸಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು. ನಂತರದ ಸ್ಥಾನದಲ್ಲಿ ರಿಕ್ಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಾಕಾರ (5) ಇದ್ದಾರೆ.
ನೆದರ್ಲೆಂಡ್ ವಿರುದ್ಧ ವಾರ್ನರ್ ಅವರ ಏಕದಿನ ಕ್ರಿಕೆಟ್ನ 22ನೇ ಶತಕವಾಗಿದೆ. ಕಡಿಮೆ ಇನ್ನಿಂಗ್ಸ್ನಿಂದ 22 ಶತಕ ಗಳಿಸಿದ ದಾಖಲೆಯನ್ನೂ ಈ ವೇಳೆ ವಾರ್ನರ್ ಮಾಡಿದರು. 126 ಇನ್ನಿಂಗ್ಸ್ನಿಂದ ಆಶೀಮ್ ಹಾಮ್ಲಾ, 143 ಇನ್ನಿಂಗ್ಸ್ನಿಂದ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ 153 ಇನ್ನಿಂಗ್ಸ್ನಿಂದ 3ನೇ ಆಟಗಾರ ಆಗಿದ್ದಾರೆ.
-
The iconic David Warner jump.
— Mufaddal Vohra (@mufaddal_vohra) October 25, 2023 " class="align-text-top noRightClick twitterSection" data="
Pushpa celebration.
- David Warner is a complete package!pic.twitter.com/mIA4JCMnaK
">The iconic David Warner jump.
— Mufaddal Vohra (@mufaddal_vohra) October 25, 2023
Pushpa celebration.
- David Warner is a complete package!pic.twitter.com/mIA4JCMnaKThe iconic David Warner jump.
— Mufaddal Vohra (@mufaddal_vohra) October 25, 2023
Pushpa celebration.
- David Warner is a complete package!pic.twitter.com/mIA4JCMnaK
ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಫಾರ್ಮ್ನಲ್ಲಿರುವ ಡೇವಿಡ್ ಮಾರ್ನರ್ ಸತತ ಎರಡು ಶತಕಗಳನ್ನು ಗಳಿಸಿದರು. ಕಳೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 163 ರನ್ನ ಇನ್ನಿಂಗ್ಸ್ ಕಟ್ಟಿದರೆ, ಇಂದು 104 ರನ್ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಆಟಗಾರರಾದ ಮಾರ್ಕ್ ವಾ, ರಿಕ್ಕಿ ಪಾಂಟಿಂಗ್, ಮ್ಯಾಥ್ಯು ಹೆಡೆನ್ ಅವರ ಪಟ್ಟಿಗೆ ಸೇರಿದರು. ಈ ಎಲ್ಲಾ ಆಟಗಾರರು ವಿಶ್ವಕಪ್‌ನಲ್ಲಿ ಸತತ ಎರಡು ಶತಕ ದಾಖಲಿಸಿದ್ದರು. 2023ರಲ್ಲಿ ವಾರ್ನರ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರು 14 ಏಕದಿನ ಇನ್ನಿಂಗ್ಸ್‌ಗಳಲ್ಲಿ 51.57 ಸರಾಸರಿ ಮತ್ತು 114.78 ಸ್ಟ್ರೈಕ್ ರೇಟ್‌ನೊಂದಿಗೆ 722 ರನ್ ಗಳಿಸಿದ್ದಾರೆ.
ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿತು. ನಂತರ ಫಾರ್ಮ್ಗೆ ಮರಳಿದ ಆಟಗಾರರು ತಂಡವನ್ನು ಗೆಲುವಿನ ಟ್ರ್ಯಾಕ್ಗೆ ತಂದರು. ನಂತರದ ಶ್ರೀಲಂಕಾ ಮತ್ತು ಪಾಕಿಸ್ತಾನದ ಮೇಲೆ ಜಯ ದಾಖಲಿಸಿರುವ ಆಸ್ಟ್ರೇಲಿಯಾ ನೆದರ್ಲೆಂಡ್ ವಿರುದ್ಧವೂ ಜಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.
ಇದನ್ನೂ ಓದಿ: ಶ್ರೇಷ್ಠತೆ ಎಂಬುದಿಲ್ಲ, ಉತ್ತಮವಾಗಿ ಕಾರ್ಯನಿರ್ವಹಿಸುವುದು ಗುರಿ ಆಗಿರಬೇಕು: ವಿರಾಟ್ ಕೊಹ್ಲಿ