ಮುಂಬೈ: ಐಸಿಸಿ 2022ರ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದ್ದು, ಕಿವೀಸ್ ನಾಡಿನಲ್ಲಿ ನಡೆಯುವ ಈ ಕದನದಲ್ಲಿ ಭಾರತ ವನಿತೆಯರು ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
8 ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಭಾರತ ಮಾರ್ಚ್ 6ರಂದು ಪಾಕಿಸ್ತಾನ, ಮಾರ್ಚ್ 10ರಂದು ನ್ಯೂಜಿಲ್ಯಾಂಡ್, ಮಾರ್ಚ್ 12ರಂದು ವೆಸ್ಟ್ ಇಂಡೀಸ್, ಮಾರ್ಚ್ 16ರಂದು ಇಂಗ್ಲೆಂಡ್, 19ರಂದು ಆಸ್ಟ್ರೇಲಿಯಾ, 22ರಂದು ಬಾಂಗ್ಲಾದೇಶ ಮತ್ತು 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.
ಮಾರ್ಚ್ 4ರಂದು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ಎದುರಾಗಲಿವೆ. ಏಪ್ರಿಲ್ 3ರಂದು ಕ್ರೈಸ್ಟ್ಚರ್ಚ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
-
🚨The #CWC22 dates are out.
— BCCI Women (@BCCIWomen) December 15, 2021 " class="align-text-top noRightClick twitterSection" data="
Let's get behind #TeamIndia💪 pic.twitter.com/txjkg3tPQU
">🚨The #CWC22 dates are out.
— BCCI Women (@BCCIWomen) December 15, 2021
Let's get behind #TeamIndia💪 pic.twitter.com/txjkg3tPQU🚨The #CWC22 dates are out.
— BCCI Women (@BCCIWomen) December 15, 2021
Let's get behind #TeamIndia💪 pic.twitter.com/txjkg3tPQU
ಒಟ್ಟು 8 ತಂಡಗಳು 3 ನಾಕೌಟ್ ಪಂದ್ಯಗಳು ಸೇರಿದಂತೆ 31 ಪಂದ್ಯಗಳನ್ನಾಡಲಿವೆ. 2017ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತಾದರೂ ಇಂಗ್ಲೆಂಡ್ ವಿರುದ್ಧ ಕೇವಲ 9 ರನ್ಗಳಿಂದ ಸೋಲು ಕಂಡು ನಿರಾಶೆಯನುಭವಿಸಿತ್ತು.
ಇದುವರೆಗೆ 11 ವಿಶ್ವಕಪ್ ನಡೆದಿದ್ದು, ಆಸ್ಟ್ರೇಲಿಯಾ 6 ಬಾರಿ ಮತ್ತು ಇಂಗ್ಲೆಂಡ್ 4 ಬಾರಿ ಚಾಂಪಿಯನ್ ಆಗಿದ್ದರೆ, ಒಮ್ಮೆ(2000) ನ್ಯೂಜಿಲ್ಯಾಂಡ್ ಟ್ರೋಫಿ ಎತ್ತಿ ಹಿಡಿದಿದೆ.
ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲಿದ್ದೇನೆ : ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ