ಅಡಿಲೇಡ್: ಇಗ್ಲೆಂಡ್ ಮಹಿಳಾ ತಂಡದ ವಿರುದ್ಧ ಗುರುವಾರ ನಡೆದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ದಾಖಲೆಯ ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ.
ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 54 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ಗಳಿಸಿತ್ತು. ಡೇನಿಯಲ್ ವೇಟ್ 54 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 70 ರನ್ಗಳಿಸಿದರೆ, ಬ್ಯೂಮಾಂಟ್ 24 ಎಸೆತಗಳಲ್ಲಿ 30, ನ್ಯಾಟ್ ಸೀವರ್ 23 ಎಸೆತಗಳಲ್ಲಿ 32 ರನ್ಗಳಿಸಿದ್ದರು. ತಹಿಲಾ ಮೆಕ್ಗ್ರಾಕ್ 26ಕ್ಕೆ 3, ಅಲನ್ ಕಿಂಗ್ 28ಕ್ಕೆ 1 ವಿಕೆಟ್ ಪಡೆದಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್ನು 170 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಮೆಗ್ ಲ್ಯಾನಿಂಗ್ 44 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ ಅಜೇಯ 64 ರನ್ಗಳಿಸಿದರೆ, ತಹಿಲಾ ಮೆಕ್ಗ್ರಾತ್ 49 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 91 ರನ್ಗಳಿಸಿ ಗೆಲುವಿನ ರೂವಾರಿಗಳಾದರು.
ದಾಖಲೆಯ ರನ್ ಚೇಸ್
ಇನ್ನು 3 ಓವರ್ಗಳು ಬಾಕಿ ಉಳಿದಿರುವಂತೆ ಇಂಗ್ಲೆಂಡ್ ನೀಡಿದ್ದ 170 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟು ಮೂಲಕ ಆಸ್ಟ್ರೇಲಿಯಾ ತನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು ಚೇಸ್ ಮಾಡಿದ ದಾಖಲೆಗೆ ಪಾತ್ರವಾಯಿತು. ಈ ಹಿಂದೆ 2018ರಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 163 ರನ್ಗಳ ಗುರಿಯನ್ನು ಬೆನ್ನಟ್ಟಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.
ಮಹಿಳಾ ಟಿ20ಯಲ್ಲಿ ಅಗ್ರ 5 ಯಶಸ್ವಿ ರನ್ ಚೇಸ್
ಇಂಗ್ಲೆಂಡ್ -199 vs ಭಾರತ
ಇಂಗ್ಲೆಂಡ್ -179 vs ಆಸ್ಟ್ರೇಲಿಯಾ
ಭಾರತ -174 vs ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ -173 vs ಪಾಕಿಸ್ತಾನ
ಆಸ್ಟ್ರೇಲಿಯಾ- 170 vs ಇಂಗ್ಲೆಂಡ್
ಇದನ್ನೂ ಓದಿ: ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ನೀಡದ ಕಾರಣ ಬಹಿರಂಗ ಪಡಿಸಿದ ಶಿಖರ್ ಧವನ್!