ETV Bharat / sports

Womens Ashes: ಮಹಿಳಾ ಆ್ಯಶಸ್‌ ಗೆದ್ದು ಬೀಗಿದ ಆಸ್ಟ್ರೇಲಿಯಾ; ತವರಿನಲ್ಲಿ ಇಂಗ್ಲೆಂಡ್​ ವನಿತೆಯರಿಗೆ ಸೋಲು

author img

By

Published : Jun 26, 2023, 7:19 PM IST

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ 89 ರನ್‌ಗಳಿಂದ ಆಸ್ಟ್ರೇಲಿಯಾ ತಂಡ ಮಹಿಳಾ ಆ್ಯಶಸ್‌ ಟೂರ್ನಿಯಲ್ಲಿ ಗೆಲುವು ದಾಖಲಿಸಿತು.

Womens Ashes 2023 Australia beat England by 89 runs

ಇಂಗ್ಲೆಂಡ್​ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಏಕೈಕ ಆ್ಯಶಸ್​ ಟೆಸ್ಟ್​ ಅನ್ನು ಆಸ್ಟ್ರೇಲಿಯಾ ವನಿತೆಯರು 89 ರನ್‌ಗಳಿಂದ ಗೆದ್ದು ಬೀಗಿದರು. ಬಹುತೇಕ ಇಂಗ್ಲೆಂಡ್​​ ವಶದಲ್ಲೇ ಇದ್ದ ಗೆಲುವನ್ನು ಆಸ್ಟ್ರೇಲಿಯಾ ಬೌಲರ್​ ಆಶ್ಲೀಗ್ ಗಾರ್ಡ್ನರ್ ಚಾಣಾಕ್ಷತನದಿಂದ ಮರುವಶಕ್ಕೆ ಪಡೆದರು. ಗಾರ್ಡ್ನರ್ ಇಂಗ್ಲೆಂಡ್​ನ 8 ವಿಕೆಟ್​ ಕಬಳಿಸಿ ಆ್ಯಶಸ್​ ಗೆಲುವಿನ ರುವಾರಿಯಾದರು. ಪ್ರಸ್ತುತ ಆಸ್ಟ್ರೇಲಿಯಾದ ವನಿತೆಯರ ತಂಡ ಏಕದಿನ ವಿಶ್ವಕಪ್​, ಟಿ20 ವಿಶ್ವಕಪ್​​, ಕಾಮನ್​ವೆಲ್ತ್ ಗೇಮ್ಸ್​ ಮತ್ತು ಇದೀಗ ಆ್ಯಶಸ್ ಅ​ನ್ನೂ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಈ ನಾಲ್ಕು ಸ್ಪರ್ಧೆಯ ಚಾಂಪಿಯನ್ನರಾಗಿ​ ಕಾಂಗರೂ ನಾಡಿನ ವನಿತೆಯರ ತಂಡ ಹೊರಹೊಮ್ಮಿದೆ.

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 257 ರನ್‌ಗಳಿಗೆ ಆಲೌಟಾಯಿತು. 10 ರನ್​ ಮುನ್ನಡೆಯಿಂದ ಆಸಿಸ್​ ವನಿತೆಯರ ತಂಡ ಬ್ಯಾಟಿಂಗ್​ ಆರಂಭಿಸಿದ್ದು ಇಂಗ್ಲೆಂಡ್​ ಗೆಲುವಿಗೆ 268 ರನ್‌ಗಳ ಅವಶ್ಯಕತೆ ಇತ್ತು. ನಾಲ್ಕನೇ ದಿನವಾದ ನಿನ್ನೆ ಕೊನೆಯ ಸೆಷನ್​ನಲ್ಲಿ ಇಂಗ್ಲೆಂಡ್​ ಮಹಿಳೆಯರು 28 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 116 ರನ್​ ಗಳಿಸಿದ್ದರು. ಕ್ರೀಸ್​ನಲ್ಲಿ ಡೇನಿಯಲ್ ವ್ಯಾಟ್ ಮತ್ತು ಕೇಟ್ ಕ್ರಾಸ್ ಇದ್ದರು. ಇಂದು ಆಸ್ಟ್ರೇಲಿಯಾಗೆ 5 ವಿಕೆಟ್​ನ ಅವಶ್ಯಕತೆ ಇದ್ದರೆ, ಆಂಗ್ಲರಿಗೆ 152 ರನ್‌ಗಳು ಬೇಕಿದ್ದವು. ನಾಲ್ಕನೇ ದಿನ ಇಂಗ್ಲೆಂಡ್​ನ 3 ವಿಕೆಟ್​ಗಳನ್ನು ಕಬಳಿಸಿದ್ದ ಗಾರ್ಡ್ನರ್ ಇಂದು ಐದು ವಿಕೆಟ್​ ಕಿತ್ತು ಇಂಗ್ಲೆಂಡ್​ಗೆ ಮುಳುವಾದರು.

  • In Women's Cricket:

    •Current Champions:
    In ODI WC - AUS.
    In T20 WC - AUS.
    In CWG - AUS.
    In Ashes Test - AUS.

    •Most successful:
    In ODI WCs - AUS (7).
    In T20 WCs - AUS (6).
    In CWG - AUS.
    In Ashes Test - AUS (16).

    Australia - The Greatest Team in the Women's Cricket history. pic.twitter.com/8GFzOCHz9z

    — CricketMAN2 (@ImTanujSingh) June 26, 2023 " class="align-text-top noRightClick twitterSection" data=" ">

In Women's Cricket:

— CricketMAN2 (@ImTanujSingh) June 26, 2023

ಡೇನಿಯಲ್ ವ್ಯಾಟ್ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್​ ಉರುಳಿದ ಕಾರಣ ತಂಡವನ್ನು ವಿಜಯದ ಹೊಸ್ತಿಲಿಗೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾದರು. ಇಂದು ಇಂಗ್ಲೆಂಡ್​ ತಂಡ 62 ರನ್​ ಕಲೆಹಾಕುವಷ್ಟರಲ್ಲಿ ಆಲೌಟ್​ ಆಯಿತು. ಡೇನಿಯಲ್ ವ್ಯಾಟ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಬೇರಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ದ್ವಿಶತಕ ಗಳಿಸಿದ್ದ ಟಮ್ಮಿ ಬ್ಯೂಮಾಂಟ್ 28 ರನ್​ ಗಳಿಸಿದ್ದು ಎರಡನೇ ಹೆಚ್ಚಿನ ರನ್​ ಆಗಿದೆ. ಮತ್ತೆಲ್ಲ ಆಟಗಾರ್ತಿಯರು ಹತ್ತು ರನ್ ಗಡಿ ದಾಟಿಸಲು ಪರದಾಡಿದರು. ಇಂದು ಕೇವಲ 20 ಓವರ್​ ಆಡುವಷ್ಟರಲ್ಲಿ ಇಂಗ್ಲೆಂಡ್​ 178ಕ್ಕೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತ್ತು.

ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ 137 ರನ್​ ಮತ್ತು ಎಲ್ಲಿಸ್ ಪೆರ್ರಿ 99 ರನ್ ಸಹಾಯದಿಂದ 473 ರನ್​ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ ಟಮ್ಮಿ ಬ್ಯೂಮಾಂಟ್ ಅವರ 208 ರನ್‌ಗಳ​ ಸಹಾಯದಿಂದ 463 ರನ್​ ಗಳಿಸಿ ಆಲೌಟಾಗಿ 10 ರನ್​ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ವೇಗವಾಗಿ ಬೆತ್ ಮೂನಿ (85) ಮತ್ತು ಅಲಿಸ್ಸಾ ಹೀಲಿ (50) ಅವರ ಅರ್ಧಶತಕದ ನೆರವಿನಿಂದ 257 ರನ್​ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್‌ ವಿವರ: ಆಸ್ಟ್ರೇಲಿಯಾ 473 (ಅನ್ನಾಬೆಲ್ ಸದರ್‌ಲ್ಯಾಂಡ್ 137, ಎಲ್ಲಿಸ್ ಪೆರ್ರಿ 99; ಸೋಫಿ ಎಕ್ಲೆಸ್ಟೋನ್ 5-129) & 258 (ಬೆತ್ ಮೂನಿ 85, ಅಲಿಸ್ಸಾ ಹೀಲಿ 50; ಸೋಫಿ ಎಕ್ಲೆಸ್ಟೋನ್ 5-63), ಇಂಗ್ಲೆಂಡ್ 463 (ಟಮ್ಮಿ ಬ್ಯೂಮಾಂಟ್ 7, ಬಿಯು 208 ; ಆಶ್ಲೀಗ್ ಗಾರ್ಡ್ನರ್ 4-99, ತಹ್ಲಿಯಾ ಮೆಕ್‌ಗ್ರಾತ್ 3-24) & 178 (ಡೇನಿಯಲ್ ವ್ಯಾಟ್ 54; ಆಶ್ಲೀ ಗಾರ್ಡ್ನರ್ 8-66) ಆಸ್ಟ್ರೇಲಿಯಾಕ್ಕೆ 89 ರನ್‌ಗಳಿಂದ ಗೆಲುವು.

ಇದನ್ನೂ ಓದಿ: Tammy Beaumont: ಮಹಿಳಾ ಆ್ಯಶಸ್​​- ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ದಾಖಲೆಯ ದ್ವಿಶತಕದಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.