ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್/ ಮಹಿಳಾ ಐಪಿಎಲ್) ನಲ್ಲಿ ಇದುವರೆಗೆ ಆರು ಪಂದ್ಯಗಳು ನಡೆದಿವೆ. ಬುಧವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯವಿತ್ತು. ಇದರಲ್ಲಿ ಎರಡು ಬಾರಿ ಸೋಲು ಕಂಡಿದ್ದ ಗುಜರಾತ್ 11 ರನ್ಗಳ ಜಯ ಸಾಧಿಸಿತು. ಡಬ್ಲ್ಯುಪಿಎಲ್ನಲ್ಲಿ ಸೋಲು-ಗೆಲುವಿನ ಪೈಪೋಟಿ ಮುಂದುವರೆಯುತ್ತಿದೆ. ಈ ನಡುವೆ ಕ್ರಿಕೆಟ್ ಮಹಿಳಾಮಣಿಗಳು ಹೋಳಿ ಹಬ್ಬವನ್ನು ಜೋರಾಗಿಯೇ ಆಚರಿಸಿದ್ದಾರೆ.
ವಿದೇಶಿ ಮಹಿಳಾ ಆಟಗಾರರು ಹೆಚ್ಚು ಉತ್ಸಾಹದಿಂದ ಹೋಳಿ ಆಡಿದರು. ಎಲಿಸಾ ಹೀಲಿ, ಶೆಫಾಲಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಎಲ್ಲಾ ಆಟಗಾರರು ತಮ್ಮ ತಂಡದ ಆಟಗಾರರ ಜೊತೆ ಬಗೆಬಗೆ ಬಣ್ಣದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್, ಆರ್ಸಿಬಿ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಹೋಳಿ ಆಚರಣೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಹಬ್ಬವಾದ ಹೋಳಿಯನ್ನು ಎಲ್ಲರೂ ಖುಷಿಯಿಂದ ಆಚರಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
- " class="align-text-top noRightClick twitterSection" data="
">
ಇದನ್ನೂ ಓದಿ: ಮೊದಲ ಜಯ ದಾಖಲಿಸಿದ ಗುಜರಾತ್ ಜೈಂಟ್ಸ್ : ಆರ್ಸಿಬಿಗೆ ಸತತ ಮೂರನೇ ಸೋಲು
ಡಬ್ಲ್ಯುಪಿಎಲ್ ಪಾಯಿಂಟ್ಸ್ ಪಟ್ಟಿ: ಡಬ್ಲ್ಯುಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ತಾನಾಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿದೆ. ದೆಹಲಿ ಕ್ಯಾಪಿಟಲ್ಸ್ ರನ್ ರೇಟ್ ಮುಂಬೈ ಇಂಡಿಯನ್ಸ್ ಗಿಂತ ಕಡಿಮೆ ಇದೆ. ಯುಪಿ ವಾರಿಯರ್ಸ್ ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದು 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಗುಜರಾತ್ ಜೈಂಟ್ಸ್ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅದೇ ರಾಯಲ್ ಚಾಲೆಂಜರ್ಸ್ ತಂಡವು ತನ್ನ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತು ಶೂನ್ಯ ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
- " class="align-text-top noRightClick twitterSection" data="
">
ಟೀ ಇಂಡಿಯಾ ಪುರುಷರ ತಂಡದಲ್ಲಿ ಹೋಳಿ ಸಂಭ್ರಮ: ಕೊನೆಯ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ಪುರುಷರ ಕ್ರಿಕೆಟ್ ತಂಡ ಮಾರ್ಚ್ 8 ರಂದು ಅಹಮದಾಬಾದ್ ತಲುಪಿತ್ತು. ಅಲ್ಲಿ ಟೀ ಇಂಡಿಯಾ ಹೋಳಿ ಹಬ್ಬವನ್ನು ನಿನ್ನೆ ಭರ್ಜರಿಯಾಗಿ ಆಚರಿಸಿತು. ಅಹಮದಾಬಾದ್ಗೆ ಬರುವ ಬಸ್ನಲ್ಲೂ ಅವರು ಹೋಳಿ ಆಚರಣೆ ಮಾಡಿದ್ದರು. ಕ್ರೀಡಾಂಗಣಕ್ಕೆ ತಲುಪಿದ ಬಳಿಕ ನಾಯಕ ರೋಹಿತ್ ಶರ್ಮಾ ಎಲ್ಲರಿಗೂ ಬಣ್ಣ ಬಳಿದು, ಜೊತೆಯಾಗಿ ಹೋಳಿ ಆಡಿ ಸಂಭ್ರಮಸಿದ್ದರು. ಈ ವಿಡಿಯೋವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ದೇಶಾದ್ಯಂತ ಕಳೆಗಟ್ಟಿದ ಹೋಳಿ: ದೇಶಾದ್ಯಂತ ಹೋಳಿ ಹಬ್ಬವನ್ನು ಪ್ರತಿ ವರ್ಷ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ಸೇರಿ ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿ ಹೋಳಿಯನ್ನು ಸಂಭ್ರಮಿಸುತ್ತಾರೆ.
ಇದನ್ನೂ ಓದಿ: 4ನೇ ಟೆಸ್ಟ್: ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್; ಭಾರತ-ಆಸೀಸ್ ಪ್ರಧಾನಿಗಳ 'ಕ್ರಿಕೆಟ್ ದೋಸ್ತಿ'