ETV Bharat / sports

ಕ್ಯಾನ್ಸರ್​ಗೆ ತಂದೆ, ಹಾವಿಗೆ ತಮ್ಮ ಬಲಿ: ಪಟ್ಟುಬಿಡದೇ ಬೆಳೆದ ಪ್ರತಿಭೆ ಅರ್ಚನಾ ದೇವಿಯ ಕ್ರಿಕೆಟ್​ಗಾಥೆಯಿದು!

ಅಪರಾಧ ಪ್ರಕರಣಗಳಿಂದಲೇ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದ ಉನ್ನಾವೋ ಇಂದು ಮಹಿಳಾ ಕ್ರಿಕೆಟರ್​ ಸಾಧನೆಯಿಂದಾಗಿ ಹೊಗಳಿಕೆಗೆ ಪಾತ್ರವಾಗಿದೆ. ಅಂಡರ್​ 19 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪಿನ್ನರ್​ ಅರ್ಚನಾ ದೇವಿ ಎಲ್ಲರ ಮನೆ ಮಾತಾಗಿದ್ದಾರೆ.

meet-archana
ಪಟ್ಟುಬಿಡದೆ ಬೆಳೆದ ಪ್ರತಿಭೆ ಅರ್ಚನಾ ದೇವಿ
author img

By

Published : Jan 30, 2023, 12:45 PM IST

ಉನ್ನಾವೋ/ಫಿರೋಜಾಬಾದ್: ಐಸಿಸಿ ಅಂಡರ್​ -19 ವಿಶ್ವಕಪ್​. ಇಂಗ್ಲೆಂಡ್​ ಆಟಗಾರ್ತಿ ಹೊಡೆದ ರಭಸಕ್ಕೆ ಚೆಂಡು ಮಿಡ್​ ಆನ್​ನತ್ತ ಹಾರಿ ಬಂತು. ಅಲ್ಲೇ ಇದ್ದ ಯುವ ಆಟಗಾರ್ತಿ ಚಂಗನೆ ಎಗರಿ ಕ್ಯಾಚ್​ ಪಡೆದರು. ಆಗ ಇಡೀ ಮೈದಾನ ಒಂದು ಕ್ಷಣ ಅವಾಕ್ಕಾಯಿತು. ಸ್ವತಃ ಇಂಗ್ಲೆಂಡ್ ಆಟಗಾರ್ತಿಗೇ ನಂಬಲಾಗಲಿಲ್ಲ. ಪುರುಷರಿಗಿಂತಲೂ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಕ್ಯಾಚ್​ ಹಿಡಿದ ಭಾರತದ ಆಟಗಾರ್ತಿಯೇ ಅರ್ಚನಾ ದೇವಿ.

  • A girl from a small village in Uttar Pradesh's Unnao district, Archana Devi is now representing India at the Under-19 T20 World Cup in South Africa, an accomplishment that would not have been possible without the support of others 🙌 #U19T20WorldCup pic.twitter.com/ahVQYp3vdv

    — ESPNcricinfo (@ESPNcricinfo) January 29, 2023 " class="align-text-top noRightClick twitterSection" data=" ">

ಹೌದು, ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಫಿರೋಜಾಬಾದ್​ನವರಾದ ಅರ್ಚನಾ ದೇವಿ ಇಂದು ಭಾರತ ಕ್ರಿಕೆಟ್​ನ ಕಣ್ಮಣಿ. ಫೈನಲ್​ ಪಂದ್ಯದಲ್ಲಿ ಪ್ರಮುಖ 2 ವಿಕೆಟ್​ ಕಿತ್ತು ವಿಶ್ವಕಪ್​​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ಹೆಮ್ಮೆಯ ಪುತ್ರಿಯ ಈ ವಿಜಯೋತ್ಸವ ಹುಟ್ಟೂರಲ್ಲಿ ಸಂಭ್ರಮ ಕಳೆಕಟ್ಟುವಂತೆ ಮಾಡಿದೆ. ಈ ಎಲ್ಲ ಸಂಭ್ರಮದ ಮಧ್ಯೆ ಅರ್ಚನಾ ದೇವಿಯವರ ಕ್ರಿಕೆಟ್​ ಪಯಣ ಮಾತ್ರ ಮುಳ್ಳಿನ ಹಾದಿಯೇ ಸರಿ.

ಅದು 2008. ಮಾರಕ ಕ್ಯಾನ್ಸರ್​ ತಂದೆಯನ್ನು ಬಲಿ ಪಡೆದಿತ್ತು. ಮನೆಗೆ ಹಿರಿತಲೆಯೇ ಇಲ್ಲವಾಗಿ ಕುಟುಂಬ ನಲುಗಿತ್ತು. 2017ರಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮನೆಗೆ ಆಧಾರವಾಗಿದ್ದ ಮಗ ಹಾವು ಕಡಿತದಿಂದ ಸಾವನ್ನಪ್ಪಿದ. ಈ ಎರಡೂ ದುರಂತಗಳು ಅರ್ಚನಾ ದೇವಿಯ ಆತ್ಮಸ್ಥೈರ್ಯವನ್ನೇ ಕಿತ್ತುಕೊಂಡಿದ್ದವು. ಆದರೆ, ತಾಯಿ ಸಾವಿತ್ರಿ ಅವರ ದಿಟ್ಟತನ ಇಂದು ಅರ್ಚನಾ ದೇವಿಯನ್ನು ದೇಶವೊಂದೇ ಅಲ್ಲ, ಕ್ರಿಕೆಟ್​ ಜಗತ್ತೇ ಗುರುತಿಸುವಂತೆ ಮಾಡಿದೆ.

ಬದುಕು ಕಸಿದು ಬೆಳಗಿಸಿದ ಕ್ರಿಕೆಟ್​: ಚಿಕ್ಕಂದಿನಲ್ಲಿ ಅರ್ಚನಾ ದೇವಿ ಕ್ರಿಕೆಟ್​ ಅನ್ನು ಆಯ್ದುಕೊಂಡಾಗ ಕುಟುಂಬ ನಿರಾಕರಿಸಿತು. ಹೆಣ್ಣು ಮಕ್ಕಳು ಕ್ರಿಕೆಟ್​ ಆಡುವುದನ್ನು ಕುಚೇಷ್ಟೆ ಮಾಡಿಯಾರು ಎಂಬ ಅಳುಕಿತ್ತು. ಆದರೆ, ತಾಯಿ ಮಾತ್ರ ಆಕೆಯ ಆಸೆಗೆ ನೀರೆರೆದರು. ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಗೆ ಸೇರಿಸಿದರು. ಬಳಿಕ ಮೊರಾದಾಬಾದ್‌ನಲ್ಲಿರುವ ಬಾಲಕಿಯರ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಅಲ್ಲಿಯೇ ಕ್ರಿಕೆಟ್​ ಜೀವನ ಕುಡಿಯೊಡೆಯಿತು.

ಚಿಕ್ಕಂದಿನಲ್ಲಿ ಮನೆಯ ಮುಂದೆ ಕ್ರಿಕೆಟ್​ ಆಡುತ್ತಿದ್ದಾಗ ಅರ್ಚನಾ ಚೆಂಡನ್ನು ಬಲವಾಗಿ ಹೊಡೆದಾಗ ಅದು ಪೊದೆಯೊಳಗೆ ಹೋಯಿತು. ಈ ವೇಳೆ, ಸಹೋದರ ಅದನ್ನು ತರಲು ಪೊದೆಯೊಳಗೆ ಕೈ ಹಾಕಿದಾಗ ಅಲ್ಲಿದ್ದ ಹಾವು ಕಚ್ಚಿದೆ. ವಿಷದಿಂದಾಗಿ ಆತ ಪ್ರಾಣಬಿಟ್ಟ. ಅಕ್ಕನನ್ನು ಕ್ರಿಕೆಟರ್​ ಆಗಿ ನೋಡುವುದು ತಮ್ಮನ ಕನಸಾಗಿತ್ತು. ಆದರೆ, ವಿಧಿ ಮಾತ್ರ ಅದನ್ನು ಬದಲಿಸಿತ್ತು. ತಮ್ಮನ ಕೊನೆ ಅಸೆಯಂತೆ ತಾನು ಕ್ರಿಕೆಟರ್​ ಆಗಬೇಕೆಂದು ಪಣತೊಟ್ಟ ಅರ್ಚನಾ ಅಂದಿನಿಂದ ಹಿಂತಿರುಗಿ ನೋಡಲಿಲ್ಲ.

ಗುರು ಸೋನಂ ಮಾರ್ಗದರ್ಶನ: ಮೈದಾನದಲ್ಲಿ ಕ್ರಿಕೆಟ್​ ಆಡುತ್ತಿದ್ದಾಗ ಅಚಾನಕ್ಕಾಗಿ ಚೆಂಡು ಅರ್ಚನಾ ದೇವಿಯವರ ಬಳಿ ಬಂದಾಗ ಆಕೆ ಸ್ಪಿನ್ ಬೌಲಿಂಗ್​ ಮಾಡಿ ಚೆಂಡು ಹಿಂದಿರುಗಿಸಿದರು. ಇದು ಅಲ್ಲಿದ್ದ ಕ್ರಿಕೆಟಿಗರನ್ನು ಸೆಳೆದಿತ್ತು. ಇದನ್ನು ಕೋಚ್​ ಆಗಿದ್ದ ಸೋನಂ ಅವರ ಬಳಿಕ ಹೇಳಿದಾಗ, ಅವರು ಬೌಲ್​ ಮಾಡಲು ಹೇಳಿದರು. ಅರ್ಚನಾ ಅವರು ತಮ್ಮ ಸ್ಪಿನ್​ ಚಾಣಾಕ್ಷತನವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು. ಅಂದಿನಿಂದ ಸೋನಂ ಅವರ ಗರಡಿ ಸೇರಿಕೊಂಡ ಅರ್ಚನಾ ಇಂದು ಭಾರತದ ಪ್ರತಿಭಾನ್ವಿಯ ಸ್ಪಿನ್ನರ್​ ಆಗಿ ಬೆಳೆದಿದ್ದಾರೆ.

ತಾಯಿ ಸಾವಿತ್ರಿಯ ಹೆಮ್ಮಯೆ ಮಾತುಗಳು: ಕಷ್ಟದ ಹಾದಿಯಲ್ಲಿ ಬೆಳದ ಮಗಳು ಇಂದು ಕ್ರಿಕೆಟ್​ನಲ್ಲಿ ಸಾಧನೆ ಮಾಡಿದ್ದು, ಅಪಾರ ಸಂತೋಷ ತಂದಿದೆ. ಅವಳ ಸಾಧನೆ ಮನೆಯ ಪರಿಸ್ಥಿತಿಯನ್ನು ಬದಲಿಸಿದೆ. ಅಂದು ಅವಳ ಸ್ಥಿತಿಯನ್ನು ಕಂಡು ಬೈಯ್ಯುತ್ತಿದ್ದವರು ಈಗ ಮನಬಿಚ್ಚಿ ಹೊಗಳುತ್ತಿದ್ದಾರೆ. ಇದೇ ಅವಳು ನಮಗೆ ಕೊಟ್ಟ ಬಹುದೊಡ್ಡ ಉಡುಗೊರೆ ಎಂದು ಮಗಳನ್ನು ಕೊಂಡಾಡುತ್ತಾರೆ ತಾಯಿ ಸಾವಿತ್ರಿ ಅವರು.

ಪತಿ, ಮಗನ ಸಾವು ಜೀವನವನ್ನು ಕಷ್ಟಕ್ಕೀಡು ಮಾಡಿತ್ತು. ಪತಿಯ ನಿಧನದ ಬಳಿಕ ಕುಟುಂಬ ನಿರ್ವಹಣೆ ನನ್ನ ಮೇಲೆ ಬಿತ್ತು. ಇದ್ದ ಚೂರುಪಾರು ಜಮೀನು, ಡೈರಿಯಲ್ಲೇ ಬದುಕು ನಡೆಸಬೇಕಾಯಿತು. ಇಂದು ಮಗಳು ಬೆಳೆದು ನಿಂತಿರುವುದು ನಮಗೆಲ್ಲಾ ಸಂತಸ ತಂದಿದೆ ಎಂದು ಹೇಳಿದರು.

ಗ್ರಾಮದಲ್ಲಿ ಸಂಭ್ರಮಾಚರಣೆ: ಫಿರೋಜಾಬಾದ್​ನಲ್ಲಿರುವ ಅವರ ಗ್ರಾಮದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಜನರು ರಸ್ತೆಯಲ್ಲಿ ಡಿಜೆ ಸಂಗೀತದೊಂದಿಗೆ ನೃತ್ಯ ಮಾಡಿದರು. 'ಭಾರತ್ ಮಾತಾ ಕೀ ಜೈ' ಘೋಷಣೆಗಳು ಮೊಳಗುತ್ತಿವೆ. ಪಟಾಕಿ ಸಿಡಿಸುವುದರ ಜೊತೆಗೆ ಕೋಚ್​ ಸೋನಮ್ ಯಾದವ್ ಅವರ ನೆರವನ್ನೂ ಜನರು ವಿಜಯೋತ್ಸವ ಮೆರವಣಿಗೆ ನೆನೆದರು.

ಓದಿ: U19W T20 World Cup: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರು, ತಂಡಕ್ಕೆ 5 ಕೋಟಿ ಬಹುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.