ಸೇಂಟ್ ಲೂಸಿಯಾ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ಗಳಾದ ಲುಂಗಿ ಎನ್ಗಿಡಿ ಹಾಗೂ ಎನ್ರಿಚ್ ನೋಕಿಯಾ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ ಕೇವಲ 97 ರನ್ಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆರಿಬಿಯನ್ನರು ಆರಂಭದಿಂದಲೂ ದ. ಆಫ್ರಿಕಾ ಬೌಲಿಂಗ್ ದಾಳಿ ಎದುರಿಸಲು ಪರದಾಡಿದರು. ಮಾಜಿ ನಾಯಕ ಜಾಸನ್ ಹೋಲ್ಡರ್ ಗಳಿಸಿದ 20 ರನ್ಗಳು ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಆರಂಭಿಕರಾದ ನಾಯಕ ಕ್ರೇಗ್ ಬ್ರಾಥ್ವೈಟ್ ಹಾಗೂ ಶೈ ಹೋಪ್ ತಲಾ 15 ರನ್, ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಎನ್. ಬೊನ್ನರ್ 10 ಹಾಗೂ ಆರ್. ಕಾರ್ನ್ವೆಲ್ 13 ರನ್ ಹೊರಡುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನೂ ತಲುಪುವಲ್ಲಿ ವಿಫಲರಾದರು.
-
West Indies bowled out for 97!
— ICC (@ICC) June 10, 2021 " class="align-text-top noRightClick twitterSection" data="
Lungi Ngidi returns a brilliant 5/19, with Anrich Nortje taking a four-for, as the hosts are bundled out in 40.5 overs 🔥#WTC21 | #WIvSA | https://t.co/hXZZJJWsiy pic.twitter.com/J7sPdxQsal
">West Indies bowled out for 97!
— ICC (@ICC) June 10, 2021
Lungi Ngidi returns a brilliant 5/19, with Anrich Nortje taking a four-for, as the hosts are bundled out in 40.5 overs 🔥#WTC21 | #WIvSA | https://t.co/hXZZJJWsiy pic.twitter.com/J7sPdxQsalWest Indies bowled out for 97!
— ICC (@ICC) June 10, 2021
Lungi Ngidi returns a brilliant 5/19, with Anrich Nortje taking a four-for, as the hosts are bundled out in 40.5 overs 🔥#WTC21 | #WIvSA | https://t.co/hXZZJJWsiy pic.twitter.com/J7sPdxQsal
40.5 ಓವರ್ಗಳಲ್ಲೇ ವಿಂಡೀಸ್ ಮೊದಲ ಇನ್ನಿಂಗ್ಸ್ ಅಂತ್ಯವಾಯಿತು. ದ. ಆಫ್ರಿಕಾ ಪರ ವೇಗಿಗಳಾದ ಲುಂಗಿ ಎನ್ಗಿಡಿ 19ಕ್ಕೆ 5, ಎನ್ರಿಚ್ ನೋಕಿಯಾ 35ಕ್ಕೆ 4 ಹಾಗೂ ರಬಾಡ 1 ವಿಕೆಟ್ ಪಡೆದು ಮಿಂಚಿದರು.
ಬಳಿಕ ಬ್ಯಾಟಿಂಗ್ ನಡೆಸಿದ ಹರಿಣಗಳ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದು, 31 ರನ್ಗಳ ಮುನ್ನಡೆ ಪಡೆದಿದೆ. ಆರಂಭಿಕ ಆಟಗಾರ ಅಡೆನ್ ಮಾರ್ಕ್ರಮ್ 60 ಬಾರಿಸಿ ತಂಡಕ್ಕೆ ನೆರವಾದರು. ನಾಯಕ ಡೀನ್ ಎಲ್ಗರ್ ಶೂನ್ಯಕ್ಕೆ ಔಟಾದರೆ, ಕೀಗನ್ ಪೀಟರ್ಸನ್ 19, ಕೈಲ್ ವೆರಿನ್ನೆ 6 ರನ್ಗೆ ಪೆವಿಲಿಯನ್ಗೆ ಮರಳಿದರು.
ದಿನದಾಟದ ಅಂತ್ಯಕ್ಕೆ ರಸ್ಸಿ ವಾನ್ ಡೆರ್ ಡಸ್ಸೆನ್ (34) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ (4) ಅಜೇಯರಾಗುಳಿದಿದ್ದು, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ಜಯ್ದೆನ್ ಸೀಲ್ಸ್ 3 ಹಾಗೂ ಕೆಮರ್ ರೋಚ್ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಧವನ್ಗೆ ನಾಯಕನ ಪಟ್ಟ, ಪಡಿಕ್ಕಲ್, ಗೌತಮ್ಗೆ ಅವಕಾಶ