ಸೇಂಟ್ ಜಾನ್ಸ್ : ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 3-2ರಲ್ಲಿ ಟಿ20 ಸರಣಿ ಗೆದ್ದ ತಂಡವನ್ನು ಫೆಬ್ರವರಿ 16ರಿಂದ ಭಾರತದ ವಿರುದ್ಧ ನಡೆಯುವ ಟಿ20 ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.
ಭಾನುವಾರ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಪೊಲಾರ್ಡ್ ಬಳಗ 17 ರನ್ಗಳಿಂದ ಗೆದ್ದು ಟಿ20 ಸರಣಿ ಗೆದ್ದಿತ್ತು. ಈಗಾಗಲೇ ಏಕದಿನ ತಂಡವನ್ನು ಪ್ರಕಟಿಸಿರುವ ವಿಂಡೀಸ್ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದ ತಂಡವನ್ನು ಚುಟುಕು ಸರಣಿಗೆ ಆಯ್ಕೆ ಮಾಡಿದೆ.
ಫೆಬ್ರವರಿ 6,9 ಮತ್ತು 11ರಂದು ಅಹ್ಮದಾಬಾದ್ನಲ್ಲಿ ಏಕದಿನ ಸರಣಿ ನಡೆದರೆ, ಫೆಬ್ರವರಿ 16, 18 ಹಾಗೂ 20ರಂದು ಕೋಲ್ಕತ್ತಾದಲ್ಲಿ ಟಿ20 ಸರಣಿ ನಡೆಯಲಿದೆ.
ನಾಯಕ ಪೊಲಾರ್ಡ್ ಜೊತೆಗೆ ಪೂರನ್, ಫ್ಯಾಬಿಯನ್ ಅಲೆನ್, ಡರೇನ್ ಬ್ರಾವೋ, ಜೇಸನ್ ಹೋಲ್ಡರ್, ಶಾಯ್ ಹೋಪ್ , ಅಕೀಲ್ ಹೊಸೈನ್, ಬ್ರೆಂಡನ್ ಕಿಂಗ್, ರೊಮಾರಿಯೋ ಶೆಫರ್ಡ್,ಓಡನ್ ಸ್ಮಿತ್ ಮತ್ತ ಹೇಡನ್ ವಾಲ್ಶ್ ಜೂನಿಯರ್ ಏಕದಿನ ಮತ್ತು ಟಿ20 ಎರಡೂ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ, ಫಿಟ್ನೆಸ್ ಕಾರಣದಿಂದ ಮತ್ತೊಮ್ಮೆ ಯುವ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿಮ್ರಾನ್ ಹೆಟ್ಮಾಯರ್ ಅವರನ್ನು ಎರಡೂ ತಂಡದಿಂದ ಹೊರಗುಳಿಸಲಾಗಿದೆ.
ವೆಸ್ಟ್ ಇಂಡೀಸ್ T20I ತಂಡ : ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡರೆನ್ ಬ್ರಾವೋ, ರಾಸ್ಟನ್ ಚೇಸ್, ಶೆಲ್ಡಾನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೋಸಿನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಓಡೆನ್ ಸ್ಮಿತ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ