ಬಾರ್ಬಡೋಸ್: ತವರಿನಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಇನ್ನೂ ಪ್ರಯೋಗ ನಡೆಸುತ್ತಿರುವ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ ಪಂದ್ಯದಲ್ಲಿ ಭಾರತದ ಕಳಪೆ ಬ್ಯಾಟಿಂಗ್ನಿಂದಾಗಿ ವಿಂಡೀಸ್ 6 ವಿಕೆಟ್ಗಳ ಗೆಲುವು ಸಾಧಿಸಿತು. ಈ ಮೂಲಕ ಭಾರತದ ವಿರುದ್ಧ 2019ರ ಬಳಿಕ ಮೊದಲ, ತವರಿನಲ್ಲಿ 6 ವರ್ಷಗಳ ನಂತರ ಪ್ರಥಮ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ಹಲವು ಬಾರಿ ಮಳೆ ಅಡ್ಡಿ ನಡುವೆ ಬ್ಯಾಟಿಂಗ್ ವೈಫಲ್ಯ ಕಂಡು 40.5 ಓವರ್ಗಳಲ್ಲಿ ಕೇವಲ 181 ರನ್ ಮಾತ್ರ ಗಳಿಸಿತು. ಇದಕ್ಕುತ್ತರವಾಗಿ ಕೆರಿಬಿಯನ್ ತಂಡದ ನಾಯಕ ಶಾಯ್ ಹೋಪ್ರ ಅಜೇಯ ಅರ್ಧಶತಕ ಬಲದಿಂದ ನಿರಾಯಾಸವಾಗಿ 36.4 ಓವರ್ಗಳಲ್ಲಿ 4 ವಿಕೆಟ್ಗೆ ನಷ್ಟಕ್ಕೆ ಗುರಿ ದಾಟಿ ಸರಣಿಯನ್ನು 1-1ರಲ್ಲಿ ಸಮಬಲ ಮಾಡಿಕೊಂಡಿತು.
-
West Indies win the second #WIvIND ODI.#TeamIndia will be aiming to bounce back in the third and final ODI.
— BCCI (@BCCI) July 29, 2023 " class="align-text-top noRightClick twitterSection" data="
Scorecard ▶️ https://t.co/hAPUkZJnBR pic.twitter.com/FdRk5avjPL
">West Indies win the second #WIvIND ODI.#TeamIndia will be aiming to bounce back in the third and final ODI.
— BCCI (@BCCI) July 29, 2023
Scorecard ▶️ https://t.co/hAPUkZJnBR pic.twitter.com/FdRk5avjPLWest Indies win the second #WIvIND ODI.#TeamIndia will be aiming to bounce back in the third and final ODI.
— BCCI (@BCCI) July 29, 2023
Scorecard ▶️ https://t.co/hAPUkZJnBR pic.twitter.com/FdRk5avjPL
'ಹೋಪ್' ಕಳೆದುಕೊಳ್ಳದ ವಿಂಡೀಸ್: ಮೊದಲ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೀಡಾಗಿದ್ದ ವಿಂಡೀಸ್ ಈ ಪಂದ್ಯದಲ್ಲಿ ಚೇತರಿಕೆಯ ಪ್ರದರ್ಶನ ನೀಡಿತು. ಭಾರತದ 181 ರನ್ಗಳ ಸಾಧಾರಣ ಗುರಿಯನ್ನು ನಾಯಕ ಶಾಯ್ ಹೋಪ್ರ ಅಜೇಯ ಅರ್ಧಶತಕ, ಕೀಸಿ ಕಾರ್ಟಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಲೀಸಾಗಿಯೇ ಮುಟ್ಟಿತು. ಬ್ರೆಂಡನ್ ಕಿಂಗ್ 15, ಕೈಲ್ ಮೇಯರ್ಸ್ 36 ರನ್ ಕಾಣಿಕೆ ನೀಡಿ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನೀಡಿದರು.
ಇದಾದ ಬಳಿಕ ಶಾಯ್ ಹೋಪ್ ಮತ್ತು ಕೀಸಿ ಕಾರ್ಟಿ ಬ್ಯಾಟಿಂಗ್ ಹೊಣೆ ಹೊತ್ತರು. 80 ಎಸೆತಗಳಲ್ಲಿ ತಲಾ 2 ಸಿಕ್ಸರ್, ಬೌಂಡರಿಗಳಸಮೇತ ಹೋಪ್ ಅಜೇಯ 63 ರನ್ ಬಾರಿಸಿದರೆ, ಕೀಸಿ ಕಾರ್ಟಿ 4 ಬೌಂಡರಿಗಳಿಂದ ಅಜೇಯ 48 ರನ್ ಮಾಡಿ 2 ರನ್ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ಬ್ಯಾಟಿಂಗ್ನಲ್ಲಿ 16 ರನ್‌ಗಳಿಂದ ನೆರವಾಗಿದ್ದ ಶಾರ್ದೂಲ್ ಠಾಕೂರ್ 3 ವಿಕೆಟ್ ಕೆಡವಿ ಮಿಂಚಿದರು.
ಭಾರತ 'ಟಿ20 ತಂಡ'ದ ಬ್ಯಾಟಿಂಗ್ ವೈಫಲ್ಯ: ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಬ್ಯಾಟಿಂಗ್ ಪ್ರಯೋಗ ನಡೆಸಿದ ಭಾರತ ತಂಡ ಟಿ20 ಆಟಗಾರರನ್ನೇ ಕಣಕ್ಕಿಳಿಸಿತ್ತು. ಸಂಜು ಸ್ಯಾಮನ್ಸ್ (9) ಮತ್ತು ಅಕ್ಷರ್ ಪಟೇಲ್ (1) ಸಿಕ್ಕ ಅವಕಾಶ ಕೈಚೆಲ್ಲಿದರು. ನಾಯಕ ಹಾರ್ದಿಕ್ ಪಾಂಡ್ಯ(7) ವೈಫಲ್ಯ ಇಲ್ಲೂ ಮುಂದುವರಿಯಿತು. ಸೂರ್ಯಕುಮಾರ್ ಯಾದವ್ 24 ರನ್ಗಳಿಗೆ ಸುಸ್ತಾದರು.
ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಇಶಾನ್ ಕಿಶನ್ ಮತ್ತೆ ಬ್ಯಾಟಿಂಗ್ ಝಳಪಿಸಿ 55 ರನ್ ಗಳಿಸಿದರು. ಇದು ವಿಂಡೀಸ್ ವಿರುದ್ಧ ಸತತ ಮೂರನೇ ಫಿಫ್ಟಿಯಾಗಿದೆ. ಕಡೆಯ ಟೆಸ್ಟ್ನಲ್ಲೂ ಅರ್ಧಶತಕ ಬಾರಿಸಿದ್ದರು. ಶುಭ್ಮನ್ ಗಿಲ್ 34, ಜಡೇಜಾ 10 ಶಾರ್ದೂಲ್ 16 ರನ್ ಮಾಡಿದರು. ಕರಾರುವಾಕ್ ದಾಳಿ ನಡೆಸಿದ ವಿಂಡೀಸ್ನ ಸ್ಪಿನ್ನರ್ ಗುಡಕೇಶ್ ಮೋಟಿ, ರೊಮಾರಿಯೊ ಶೆಫರ್ಡ್ ತಲಾ 3, ಅಲ್ಜಾರಿ ಜೋಸೆಫ್ 2 ವಿಕೆಟ್ ಕಿತ್ತರು.
200ರ ಗಡಿ ದಾಟದ ಭಾರತ: ಹಿರಿಯ ಆಟಗಾರರ ಹೊರತಾದ ಪೂರ್ಣ ಟಿ20 ತಂಡದಂತಿದ್ದ ಭಾರತ ತಂಡ ಸವಾಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿತು. ಇಲ್ಲಿ ಈವರೆಗೂ 200 ರನ್ ಗಡಿಯನ್ನು ಒಮ್ಮೆಯೂ ದಾಟಿದ ನಿದರ್ಶನವಿಲ್ಲ. 1989ರಲ್ಲಿ 198 ರನ್ ಗಳಿಸಿದ್ದೇ ಈವರೆಗಿನ ಅಧಿಕ ರನ್. ಇಲ್ಲಿ ಆಡಿರುವ 49 ಏಕದಿನ ಪಂದ್ಯಗಳ ಪೈಕಿ ಮೊದಲ ಇನಿಂಗ್ಸ್ ಸರಾಸರಿ 229 ರನ್ ಆಗಿದೆ.
ಇದನ್ನೂ ಓದಿ: ವಿಶ್ವಕಪ್ಗೂ ಮುನ್ನ 5 ದ್ವಿಪಕ್ಷೀಯ ಸರಣಿ ಆಡಲಿರುವ ಭಾರತ: ಹಾರ್ದಿಕ್ ನಾಯಕತ್ವದಲ್ಲಿ ಯುವ ಪಡೆ!