ಗ್ರೆನೆಡಾ : ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಪರಾಕ್ರಮ ತೋರಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳು ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದರು. ನಾಲ್ಕು ವರ್ಷಗಳ ನಂತರ ಒಂದಾಗಿ ಆಡಿದ ಕ್ರಿಸ್ ಗೇಲ್, ರಸೆಲ್, ಪೊಲಾರ್ಡ್ ಮತ್ತು ಬ್ರಾವೋ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ಗಳಿಸಿತ್ತು. ವ್ಯಾನ್ ಡರ್ ಡಾಸ್ಸೆನ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಆಜೇಯ 56 ರನ್ಗಳಿಸಿ ತಂಡದ ಗರಿಷ್ಠ ರನ್ ಸ್ಕೋರರ್ ಎನಿಸಿದರು. ಡಿಕಾಕ್ 37 ಮತ್ತು ರೀಜಾ ಹೆಂಡ್ರಿಕ್ಸ್ 17, ನಾಯಕ ಬವೂಮ 22 ರನ್ಗಳಿಸಿದರು.
ವಿಂಡೀಸ್ ಪರ ಫ್ಯಾಬಿಯನ್ ಅಲೆನ್ 18ಕ್ಕೆ 2, ರಸೆಲ್ 29ಕ್ಕೆ1, ಡಿಜೆ ಬ್ರಾವೋ 30ಕ್ಕೆ 2, ಹೋಲ್ಡರ್ 29ಕ್ಕೆ1 ವಿಕೆಟ್ ಪಡೆದು ಹರಿಣಗಳನ್ನು ಕಟ್ಟಿಹಾಕಿದರು.
161 ರನ್ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಕೇವಲ 15 ಓವರ್ಗಳಲ್ಲೇ ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಆ್ಯಂಡ್ರೆ ಫ್ಲೆಚರ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್ಗೆ 7 ಓವರ್ಗಳಲ್ಲಿ 85 ರನ್ಗಳ ಸೂರೆಗೈದರು.
ಫ್ಲೆಚರ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 30 ರನ್ ಗಳಿಸಿದರೆ, ಲೂಯಿಸ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ಗಳ ಸಹಿತ 71 ರನ್ಗಳಿಸಿದರು. ಕ್ರಿಸ್ ಗೇಲ್ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ ಅಜೇಯ 32 ಮತ್ತು ರಸೆಲ್ 12 ಎಸೆತಗಳಲ್ಲಿ 23 ರನ್ಗಳಿಸಿ ಗೆಲುವಿನ ದಡ ಸೇರಿದರು.
ಇದನ್ನು ಓದಿ: England vs Sri Lanka T-20: ಸರಣಿ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್