ಹೈದರಾಬಾದ್(ತೆಲಂಗಾಣ): ಖ್ಯಾತ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಸಂಬಂಧ ಇದೀಗ ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲ ದಿನಗಳ ಹಿಂದೆ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ರಾಹುಲ್ ಕಾಣಿಸಿದ್ದರು. ಈ ಮೂಲಕ ಇಬ್ಬರ ನಡುವಿನ ಲವ್ವಿ-ಡವ್ವಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಜೋಡಿ 2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಕ್ಕಳಾಗಿರುವ ಆಥಿಯಾ ಮತ್ತು ಆಹಾನ್ ಶೆಟ್ಟಿ ವಿವಾಹ ಮಾಡಲು ಕುಟುಂಬ ನಿರ್ಧರಿಸಿದ್ದು, ಒಟ್ಟಿಗೆ ಮದುವೆ ಸಮಾರಂಭ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಆಥಿಯಾ-ರಾಹುಲ್ ಸಂಬಂಧಕ್ಕೆ ಈಗಾಗಲೇ ಎರಡು ಕುಟುಂಬಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮತ್ತೊಂದು ಕಡೆ ಆಹಾನ್ ಕೂಡ ತಮ್ಮ ಬಹುಕಾಲದ ಗೆಳತಿ ತಾನಿಯಾ ಶ್ರಾಫ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡ ಆಥಿಯಾ - ರಾಹುಲ್!
ಕಳೆದ ಕೆಲ ದಿನಗಳ ಹಿಂದೆ ಸುನೀಲ್ ಶೆಟ್ಟಿ ಮಗ ಆಹಾನ್ ನಟನೆ ಮಾಡಿರುವ ತಡಪ್ ಚಿತ್ರದ ಸ್ಕ್ರೀನಿಂಗ್ ವೇಳೆ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿತ್ತು. ಇದಕ್ಕೂ ಮೊದಲು ಕಳೆದ ಕೆಲ ದಿನಗಳ ಹಿಂದೆ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನ ಖುದ್ದಾಗಿ ರಾಹುಲ್ ಬಹಿರಂಗಪಡಿಸಿದ್ದರು.
ಆಥಿಯಾ ಹುಟ್ಟುಹಬ್ಬದ ವೇಳೆ 'ಹ್ಯಾಪಿ ಬರ್ತಡೇ ಮೈ ಲವ್' ಎಂದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದ ವೇಳೆ ಮೈದಾನಕ್ಕೆ ಆಗಮಿಸಿದ್ದ ಆಥಿಯಾ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದರು.
- " class="align-text-top noRightClick twitterSection" data="
">
ಟೀಂ ಇಂಡಿಯಾ ಏಕದಿನ, ಟಿ20 ಕ್ರಿಕೆಟ್ನ ಉಪನಾಯಕನಾಗಿರುವ ಕೆ ಎಲ್ ರಾಹುಲ್, ಇದೀಗ ಐಪಿಎಲ್ನಲ್ಲಿ ಲಖನೌ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
- " class="align-text-top noRightClick twitterSection" data="
">
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ