ETV Bharat / sports

ದಿನೇಶ್​ ಕಾರ್ತಿಕ್​ಗೆ ಬೆನ್ನುನೋವು: ಕೋಚ್​ ರಾಹುಲ್​ ದ್ರಾವಿಡ್​ ಹೇಳೋದೇನು?

author img

By

Published : Nov 1, 2022, 3:44 PM IST

ಬೆನ್ನುನೋವಿಗೆ ಗುರಿಯಾಗಿರುವ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ರನ್ನು ನಾಳಿನ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಆಡಿಸುವ ಬಗ್ಗೆ ಕೋಚ್​ ರಾಹುಲ್​ ದ್ರಾವಿಡ್​ ಮಾಹಿತಿ ನೀಡಿದ್ದಾರೆ.

dinesh-karthiks-injury
ದಿನೇಶ್​ ಕಾರ್ತಿಕ್​ಗೆ ಬೆನ್ನುನೋವು

ಅಡಿಲೇಡ್ (ಆಸ್ಟ್ರೇಲಿಯಾ): ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಟೀಂ ಇಂಡಿಯಾದ ಹಿರಿಯ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ನಾಳೆ ನಡೆಯುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಿದೆ.

ಈ ಬಗ್ಗೆ ಮಾಹಿತಿ ನೀಡಿರುವ ತಂಡದ ಮುಖ್ಯ ತರಬೇತುದಾರ ರಾಹುಲ್​ ದ್ರಾವಿಡ್​, ದಿನೇಶ್​ ಕಾರ್ತಿಕ್​ ಬೆನ್ನುನೋವಿನ ಮೇಲೆ ನಿಗಾ ಇಡಲಾಗಿದೆ. ಅವರು ಮಂಗಳವಾರ ತಂಡದ ಜೊತೆಗೆ ನೆಟ್​ನಲ್ಲಿ ಅಭ್ಯಾಸ ಮಾಡಿದರು. ವೈದ್ಯರ ಸಲಹೆಯ ಮೇರೆಗೆ ನಾಳಿನ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನೆಟ್​ನಲ್ಲಿ ದಿನೇಶ್​ ಅಭ್ಯಾಸ: ನಾಳಿನ ಪಂದ್ಯದ ಸಿದ್ಧತೆಯಲ್ಲಿರುವ ಟೀಂ ಇಂಡಿಯಾ ಇಂದು ನೆಟ್​ನಲ್ಲಿ ಬೆವರಿಳಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿದ್ದು, ಸೆಮಿಫೈನಲ್​ ತಲುಪಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಹೀಗಾಗಿ ನಾಳಿನ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿರುವ ತಂಡ ನೆಟ್​ನಲ್ಲಿ ಭರ್ಜರಿಯಾಗಿ ಬೆವರಿಳಿಸಿದೆ. ಗಾಯಗೊಂಡ ಪಂದ್ಯದಿಂದ ಅರ್ಧಕ್ಕೆ ಹೊರನಡೆದಿದ್ದ ದಿನೇಶ್​ ಕಾರ್ತಿಕ್​ ಕೆಲ ಹೊತ್ತು ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ವೈದ್ಯರ ನಿಗಾದಲ್ಲಿರುವ ಕಾರ್ತಿಕ್​ ಪೂರ್ಣ ಫಿಟ್​ ಆಗಿದ್ದರೆ, ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿದೆ.

ತಂಡದ ಉತ್ತಮ ಫಿನಿಶರ್​ ಸ್ಥಾನ ಪಡೆದಿರುವ ದಿನೇಶ್​ ಕಾರ್ತಿಕ್​ ಕಳೆದ ಮೂರು ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಇದೀಗ ಗಾಯಗೊಂಡಿದ್ದು, ಅವರ ಜಾಗದಲ್ಲಿ ಯುವ ಉತ್ಸಾಹಿ ರಿಷಬ್​ ಪಂತ್ ಅವ​ರನ್ನು ಆಡಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹರಿಣಗಳ ವಿರುದ್ಧದ ಪಂದ್ಯದಲ್ಲಿ ರಿಷಬ್​, ದಿನೇಶ್​ ಬದಲಿಗೆ ಆಡಿದ್ದರು.

ಓದಿ: ಟಿ20 ವಿಶ್ವಕಪ್: ಗೆದ್ದು ಬೀಗಿದ ಲಂಕಾ, ಸೆಮಿಫೈನಲ್ ರೇಸ್‌ನಿಂದ ಅಫ್ಘಾನಿಸ್ತಾನ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.