ETV Bharat / sports

ನಾನು ಅಕ್ಷಯ್​ ಕುಮಾರ್​ರಂತೆ ದುಡ್ಡಿಗಾಗಿ ಟರ್ಬನ್ ತೊಡುವುದಿಲ್ಲ: ಹರ್​ಪ್ರೀತ್​ ಬ್ರಾರ್​

author img

By

Published : May 1, 2021, 3:14 PM IST

ಪಂಜಾಬ್​ ಕಿಂಗ್ಸ್​ ಗೆಲುವಿನ ಹೀರೋ ಆಗಿದ್ದ ಬ್ರಾರ್​ಗೆ ಇನ್​​​ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ನೀವು 'ಸಿಂಗ್​ ಇಸ್​ ಬ್ಲಿಂಗ್​' ಅಕ್ಷಯ್ ಕುಮಾರ್​ ರೀತಿ ಕಾಣುತ್ತೀರಾ ಎಂದು ಸಂದೇಶ ಕಳುಹಿಸಿದ್ದಾರೆ.

ಅಕ್ಷಯ್ ಕುಮಾರ್ -ಬ್ರಾರ್​
ಅಕ್ಷಯ್ ಕುಮಾರ್ -ಬ್ರಾರ್​

ನವದೆಹಲಿ: ಶುಕ್ರವಾರ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿ ಪಂಜಾಬ್​ ಕಿಂಗ್ಸ್ 34 ರನ್​ಗಳ ಗೆಲುವು ಪಡೆಯಲು ನೆರವಾಗಿದ್ದ ಹರ್​ಪ್ರೀತ್​ ಬ್ರಾರ್​ ತಾವೂ ಟರ್ಬನ್​ ಧರಿಸುವುದರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ವಿರುದ್ಧ ಬ್ಯಾಟಿಂಗ್​ನಲ್ಲಿ 25 ರನ್​ಗಳಿಸಿದ್ದ ಬ್ರಾರ್​ ನಂತರ ಬೌಲಿಂಗ್​ನಲ್ಲಿ ಕೊಹ್ಲಿ, ಮ್ಯಾಕ್ಸ್​ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಪಂಜಾಬ್​ ಕಿಂಗ್ಸ್​ ಗೆಲುವಿನ ಹೀರೋ ಆಗಿದ್ದ ಬ್ರಾರ್​ಗೆ ಇನ್​​ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ನೀವು 'ಸಿಂಗ್​ ಇಸ್​ ಬ್ಲಿಂಗ್​' ಅಕ್ಷಯ್ ಕುಮಾರ್​ ರೀತಿ ಕಾಣುತ್ತೀರಾ ಎಂದು ಸಂದೇಶ ಕಳುಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಾರ್​, ದುಡ್ಡಿಗೋಸ್ಕರ ನಾನು ಅಕ್ಷಯ್​ ಕುಮಾರ್​ ಅವರಂತೆ ಟರ್ಬನ್ ಧರಿಸುವುದಿಲ್ಲ" ಎಂದು ಆ ಸಂದೇಶದ ಸ್ಕ್ರೀನ್​ಶಾಟ್​ ತೆಗೆದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಟ್ವೀಟ್​ ಮಾಡಿದ್ದಾರೆ. ಜೊತೆಗೆ ತಮ್ಮ ಟ್ವೀಟ್​ನಲ್ಲಿ #isupportfarmers ಎಂಬ ಹ್ಯಾಶ್​ಟ್ಯಾಗ್​ ಅನ್ನು ಕೂಡ ಹಾಕಿಕೊಂಡಿದ್ದಾರೆ.

ಬಾಲಿವುಡ್​ ನಟ ಅಕ್ಷಯ್ ಕುಮಾರ್​ ಕೇಸರಿ, ಸಿಂಗ್​ ಇಸ್​ ಬ್ಲಿಂಗ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಿಖ್​ ಪಾತ್ರದಾರಿಯಾಗಿ ನಟಿಸಿದ್ದಾರೆ. ಹಾಗಾಗಿ ಅಕ್ಷಯ್ ಹಣ ಸಂಪಾದಿಸಲು ಟರ್ಬನ್​ ಧರಿಸುತ್ತಾರೆ, ತಾವೂ ಗೌರವ ಸೂಚಕವಾಗಿ ಧರಿಸುತ್ತೇವೆ ಅನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.