ಅಡಿಲೇಡ್(ಆಸ್ಟ್ರೇಲಿಯಾ): ಭಾರತ - ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎರಡೂ ತಂಡಗಳ ಆಟಗಾರರು ಭರ್ಜರಿಯಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಬಟ್ಲರ್ ’’ಖಂಡಿತವಾಗಿಯು ಭಾರತ ಮತ್ತು ಪಾಕಿಸ್ತಾನ ಪೈನಲ್ ಪಂದ್ಯವನ್ನು ನೋಡಲು ಬಯಸುವುದಿಲ್ಲ.
ಭಾರತವು ಅತ್ಯಂತ ಬಲಿಷ್ಠ ತಂಡ ಅದನ್ನು ಕಡೆಗಣಿಸುವ ಹಾಗೆ ಇಲ್ಲ. ಬಲಾಡ್ಯ ತಂಡದೊಂದಿಗೆ ಯೋಜನೆಗಳನ್ನು ರೂಪಿಸಿ ಕಣಕ್ಕಿಳಿಯ ಬೇಕು ಎಂದು ಬಟ್ಲರ್ ಹೇಳಿದರು.
ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್ ಗಾಯಗೊಂಡಿದ್ದು, ಅವರಿನ್ನೂ ಚೇತರಿಸಿಕೊಂಡಿಲ್ಲ. 11ರ ಬಳಗದಲ್ಲಾಡುವುದು ಕಷ್ಟ, ಮಲಾನ್ ಬದಲು ಸೆಮಿಫೈನಲ್ ಪಂದ್ಯಕ್ಕೆ ಪಿಲ್ ಸಾಲ್ಟ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದರು.
ಭಾರತ ತಂಡದ ಬಗ್ಗೆ ಮಾತನಾಡಿದ ಅವರು, ಎದುರಾಳಿಗಳ ಬೌಲಿಂಗ್ ಬಲಿಷ್ಠವಾಗಿದೆ. ಭುವನೇಶ್ವರ್ ಕುಮಾರ್ ಉತ್ತಮ ಬೌಲರ್ ಆಗಿದ್ದಾರೆ. ಆದರೆ ನಮಗೆ ಯಾವುದೇ ಅಂಜಿಕೆ ಇಲ್ಲ. ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದು,ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪಿನ್ನರ್ಸ್ಗಳು ಮಧ್ಯಮ ಓವರ್ಗಳಲ್ಲಿ ಹೆಚ್ಚು ಅಪಾಯಕಾರಿಯಾಗಿದ್ದು, ಯಜುವೇಂದ್ರ ಚಹಲ್ ಒಬ್ಬ ಶ್ರೇಷ್ಟ ಬೌಲರ್ ಎಂದು ಸ್ಪಿನ್ನರ್ಗಳ ಪ್ರಾಮುಖ್ಯತೆಯನ್ನು ಬಟ್ಲರ್ ವಿವರಿಸಿದರು. ಆದರೆ ಅಂತಿಮವಾಗಿ ತಂಡ ಗೆಲ್ಲಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದು, ಭಾರತದ ವಿರುದ್ಧ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಎಬಿಡಿ ಪ್ರಕಾರ, ಫೈನಲ್‌ಗೆ ಈ ಎರಡು ಟೀಂ, ಗೆಲ್ಲೋದು ಮಾತ್ರ ಇವರೇ!