ದುಬೈ: ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಕನಸಿನಲ್ಲಿ ಮುನ್ನುಗ್ಗುತ್ತಿರುವ ತಮ್ಮ ತಂಡ ಲೀಗ್ನಲ್ಲಿ ಅಗ್ರಸ್ಥಾನದಲ್ಲಿದ್ದೇವೆಂದು ರಿಲ್ಯಾಕ್ಸ್ ಮಾಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಕಗಿಸೋ ರಬಾಡ ಹೇಳಿದ್ದಾರೆ.
13 ಪಂದ್ಯಗಳಿಂದ 20 ಅಂಕಗಳನ್ನು ಹೊಂದಿರುವ ಡೆಲ್ಲಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದು, ಶುಕ್ರವಾರ ಮತ್ತೊಂದು ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್ 2021ರ ಕೊನೆಯ ಲೀಗ್ ಎದುರಿಸಲಿದೆ.
ನಾವು ಫೈನಲ್ಗೇರುವ ಮುನ್ನ ನಮಗೆ ಮತ್ತೊಂದು ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ, ಹಾಗಾಗಿ ನಾವು ಆ ಪಂದ್ಯಕ್ಕಾಗಿ ಉತ್ಸಾಹಿತರಾಗಿದ್ದೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ನಮಗೆ ಹೆಚ್ಚಿನ ಮಹತ್ವವಲ್ಲದಿದ್ದರೂ ನಾವು ನಮ್ಮ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ.
ನಾವು ಎಂದಿನಂತೆ ನಮ್ಮ ಆಟವನ್ನು ಆಡಲಿದ್ದೇವೆ ಎಂದು 13 ಪಂದ್ಯಗಳಿಂದ 14 ವಿಕೆಟ್ ಪಡೆದಿರುವ ರಬಾಡ ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
" ನಾವು ಇಲ್ಲಿಯವರೆಗೆ ಟೂರ್ನಿಯಲ್ಲಿ ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದೇವೆ. ಈ ಸ್ಥಾನದಲ್ಲಿರಲು ನಾವು ಹಕ್ಕನ್ನು ಗಳಿಸಿಕೊಂಡಿದ್ದೇವೆ. ಹಾಗಾಗಿ ಮುಂಬರುವ ಪಂದ್ಯಗಳಲ್ಲಿ ಗೆಲ್ಲುವುದಕ್ಕೆ ನಾವು ನಮ್ಮಿಂದ ಆಗುವ ಎಲ್ಲ ಶ್ರಮವನ್ನೂ ಹಾಕಲಿದ್ದೇವೆ ಮತ್ತು ಟೂರ್ನಮೆಂಟ್ನ ಅಂತ್ಯದ ಹೊರೆಗೂ ನಮ್ಮ ಅತ್ಯುತ್ತಮ ಆಟವನ್ನು ಆಡಲಿದ್ದೇವೆ " ಎಂದು ರಬಾಡ ತಿಳಿಸಿದ್ದಾರೆ.
ಆರ್ಸಿಬಿ ವಿರುದ್ಧ ಮೊದಲಾರ್ಧದ ಪಂದ್ಯದಲ್ಲಿ ಸೋಲು ಕಂಡಿರುವುದು ನಮಗೆ ಯಾವುದೇ ಸಮಸ್ಯೆ ತರುವುದಿಲ್ಲ. ಆದು ಮುಗಿದು ಹೋದ ಕಥೆ ಎಂದಿರುವ ದಕ್ಷಿಣ ಆಫ್ರಿಕನ್ ಬೌಲರ್ ತಮ್ಮ ಸಾಮರ್ಥ್ಯವನ್ನು ನಂಬಿ ಬಲಿಷ್ಠ ಆರ್ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ.
ಇದನ್ನು ಓದಿ:'IPLನೇ ಬನಾದಿ ಜೋಡಿ'.. ಮೈದಾನದಲ್ಲೇ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್!