ETV Bharat / sports

ರಾಹುಲ್​ ಮೇಲೆ ವಿಶ್ವಾಸವಿದೆ, ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ: ಆಯ್ಕೆ ಸಮಿತಿ ಅಧ್ಯಕ್ಷ - ರೋಹಿತ್ ಶರ್ಮಾ

ಕೆಎಲ್ ರಾಹುಲ್ ಅವರತ್ತ ಆಯ್ಕೆಗಾರರು ದೃಷ್ಟಿ ನೆಟ್ಟಿದ್ದು, ಅವರು ಮೂರೂ ಮಾದರಿಯ ಆಟಗಾರರಾಗಿದ್ದಾರೆ. ನಾಯಕತ್ವದ ಉತ್ತಮ ಅನುಭವ ಹೊಂದಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ರೋಹಿತ್​ ಅಲಭ್ಯತೆ ಹಿನ್ನೆಲೆಯಲ್ಲಿ ರಾಹುಲ್​ ಮೇಲೆ ನಾವು ವಿಶ್ವಾಸ ಹೊಂದಿದ್ದು, ಅವರ ನಾಯಕತ್ವ ಭವಿಷ್ಯಕ್ಕೆ ಬೆಂಬಲ ನೀಡುತ್ತೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹೇಳಿದ್ದಾರೆ.

we-are-grooming-kl-rahul-for-captaincy
ಕೆ.ಎಲ್​. ರಾಹುಲ್
author img

By

Published : Jan 1, 2022, 11:22 AM IST

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್​ ತಂಡದ ಸಾರಥ್ಯ ವಹಿಸಿಕೊಂಡಿರುವ ಕನ್ನಡಿಗ ಕೆ.ಎಲ್​. ರಾಹುಲ್​ ಅವರ ನಾಯಕತ್ವ ಭವಿಷ್ಯಕ್ಕೆ ಆಯ್ಕೆಗಾರರು ಇನ್ನಷ್ಟು ನೀರೆರೆಯುತ್ತಿದ್ದಾರೆ ಎಂದು ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉಪನಾಯಕತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ರಾಹುಲ್​ಗೆ ರೋಹಿತ್​ ಶರ್ಮಾ ಅನುಪಸ್ಥಿತಿಯಲ್ಲಿ ಏಕದಿನ ನಾಯಕನ ಪಟ್ಟವನ್ನೂ ನೀಡಲಾಗಿದೆ. ಉಪನಾಯಕತ್ವವು ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಹೆಗಲಿಗೇರಿದೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಚೇತನ್ ಶರ್ಮಾ, ಕೆಎಲ್ ರಾಹುಲ್ ಅವರತ್ತ ಆಯ್ಕೆಗಾರರು ದೃಷ್ಟಿ ನೆಟ್ಟಿದ್ದು, ಅವರು ಮೂರು ಮಾದರಿ ಆಟಗಾರರಾಗಿದ್ದಾರೆ. ನಾಯಕತ್ವದ ಉತ್ತಮ ಅನುಭವ ಹೊಂದಿದ್ದು, ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ರೋಹಿತ್​ ಅಲಭ್ಯತೆ ಹಿನ್ನೆಲೆಯಲ್ಲಿ ರಾಹುಲ್​ ಮೇಲೆ ನಾವು ವಿಶ್ವಾಸ ಹೊಂದಿದ್ದು, ಅವರ ನಾಯಕತ್ವ ಭವಿಷ್ಯಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯು ಜನವರಿ 19ರಂದು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಆರಂಭವಾಗಲಿದೆ. ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಜನವರಿ 21ರಂದು ಮತ್ತು ಮೂರನೇ ಏಕದಿನ ಪಂದ್ಯ ಜನವರಿ 23ರಂದು ಕೇಪ್​​ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ.

ಡಿಸೆಂಬರ್ 8ರಂದು ವಿರಾಟ್​ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ, ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಮುಂಬೈನಲ್ಲಿ ಅಭ್ಯಾಸದ ವೇಳೆ ರೋಹಿತ್​ ಗಾಯಗೊಂಡು, ಸರಣಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ವರ್ಷದ ಟೆಸ್ಟ್​ ತಂಡ ಪ್ರಕಟಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ ; ರೋಹಿತ್​ ಸೇರಿ ಭಾರತದ ನಾಲ್ವರ ಆಯ್ಕೆ, ಕೊಹ್ಲಿಗಿಲ್ಲ ಸ್ಥಾನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.