ETV Bharat / sports

ನಾವು ಫೈನಲ್​​​ನಲ್ಲಿ ತೋರಿದ ಪ್ರದರ್ಶನಕ್ಕೆ ಹೆಮ್ಮೆಯಿದೆ: ಕೆಕೆಆರ್​ ನಾಯಕ ಮಾರ್ಗನ್ - ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡ ಬಳಿಕ ಮಾತನಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ತಮ್ಮ ತಂಡದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

We are extremely proud of fight we have shown: KKR captain Morgan
ನಾವು ಫೈನಲ್​​​ನಲ್ಲಿ ತೋರಿದ ಪ್ರದರ್ಶನಕ್ಕೆ ಹೆಮ್ಮೆಯಿದೆ: ಕೆಕೆಆರ್​ ನಾಯಕ ಮಾರ್ಗನ್
author img

By

Published : Oct 16, 2021, 12:08 PM IST

ದುಬೈ: ಐಪಿಎಲ್ ವೇಳೆ ನಾವು ತೋರಿದ ಪ್ರದರ್ಶನದ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ತಂಡದ ಆಟಗಾರರು ನಂಬಲಾಗದಷ್ಟು ಕಷ್ಟಪಟ್ಟು ಹೋರಾಡಿದ್ದಾರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ನಾಯಕ ಇಯಾನ್ ಮಾರ್ಗನ್ ​ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ನಂತರ ಮಾತನಾಡಿದ ಇಯಾನ್ ಮಾರ್ಗನ್ ತಂಡದ ಆಟಗಾರರ ಶ್ರಮ ಬಣ್ಣಿಸಿದ್ದು, ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಅಯ್ಯರ್ ಮತ್ತು ಗಿಲ್ ಅವರು ಅತ್ಯದ್ಭುತವಾಗಿ ಆಟವಾಡಿದ್ದಾರೆ. ವೆಂಕಟೇಶ್ ಈ ಪ್ಲಾಟ್​​ಫಾರ್ಮ್​ಗೆ ಹೊಸಬರಾಗಿದ್ದಾರೆ. ಅವರು ನಮ್ಮ ಬ್ಯಾಟಿಂಗ್‌ನ ಮೂಲಾಧಾರವಾಗಿದ್ದಾರೆ. ದುರಾದೃಷ್ಟವಾತ್ ತ್ರಿಪಾಠಿ ಅವರಿಗೆ ಗಾಯವಾಗಿದೆ ಎಂದಿದ್ದಾರೆ. ತಂಡದ ಮಾಲೀಕರಾದ ಶಾರೂಖ್ ಖಾನ್ ತಂಡಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಮಾರ್ಗನ್ ಹೇಳಿದ್ದಾರೆ.

ತಂಡದ ಆಟಗಾರರ ಸಾಧನೆ ಬಗ್ಗೆ ತುಂಬಾ ಹೆಮ್ಮೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅದರ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿನಂದನೆಗಳು. ಈ ಐಪಿಎಲ್ ಒಂದು ಅಭೂತಪೂರ್ವ ಪ್ರಯಾಣ, ಕೆಲವೊಂದು ವಿಚಾರಗಳನ್ನು ತುಂಬಾ ಸಮಯದವರೆಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ಬ್ರೆಂಡನ್ ಮೆಕಲಂ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ನ ಓಪನರ್ ಫಾಫ್ ಡು ಪ್ಲೆಸಿಸ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿದ್ದಾರೆ. ಗಾಯಕ್ವಾಡ್ ವಿಶೇಷ ಪ್ರತಿಭೆ. ಗಾಯಕ್ವಾಡ್ ಅವರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.

ನನಗೆ ತುಂಬಾ ಸಂತೋಷವಾಗುತ್ತಿದೆ. ಐಪಿಎಲ್​ನಲ್ಲಿ ಇಂದಿನ ಪಂದ್ಯ ನನ್ನ ನೂರನೇ ಪಂದ್ಯವಾಗಿದೆ. ಇಲ್ಲಿ ನಾನು ಸುಮಾರು 10 ವರ್ಷ ಕಳೆದಿದ್ದೇನೆ ಎಂದು ಫಾಫ್ ಡು ಪ್ಲೆಸಿಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಬಾರಿ ಕೆಕೆಆರ್​​ ಐಪಿಎಲ್ ಗೆಲ್ಲುವ ಅರ್ಹ ತಂಡವಾಗಿತ್ತು: ಮಹೇಂದ್ರ ಸಿಂಗ್​ ಧೋನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.