ನವದೆಹಲಿ: ಭಾರತದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ತಾವು ಬಾಲ್ಯದಲ್ಲಿ ಗಲ್ಲಿ ಕ್ರಿಕೆಟ್ ಆಡುವಾಗಿನ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ. ತಮಾಷೆಯ ಸ್ಟ್ರೀಟ್ ಕ್ರಿಕೆಟ್ ಆಡುಭಾಷೆಗಳನ್ನು ಮೆಲುಕು ಹಾಕಿದರು.
ಸಾಮಾಜಿಕ ಮಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಗಲ್ಲಿ ಕ್ರಿಕೆಟ್ ವೇಳೆ ಬಳಸುತ್ತಿದ್ದ ಪದ, ನಿಯಮಗಳನ್ನು ಹಂಚಿಕೊಂಡಿದ್ದಾರೆ. 'ಡು ಯು ನೋ ಯುವರ್ ಕ್ರಿಕೆಟ್ ಸ್ಲ್ಯಾಂಗ್' ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಬ್ಯಾಟಿಂಗ್ ಕಿಂಗ್ ಜನಪ್ರಿಯ ಲೋಕಲ್ ಪದಗಳಾದ 'ಬಟ್ಟಾ' ಮತ್ತು 'ಬೇಬಿ ಓವರ್'ಗಳ ಅರ್ಥಗಳನ್ನು ವಿವರಿಸಿದ್ದಾರೆ.
-
How well do you know your cricket slangs? 🗣 @pumacricket#ad pic.twitter.com/yp5Ke6afpQ
— Virat Kohli (@imVkohli) September 15, 2022 " class="align-text-top noRightClick twitterSection" data="
">How well do you know your cricket slangs? 🗣 @pumacricket#ad pic.twitter.com/yp5Ke6afpQ
— Virat Kohli (@imVkohli) September 15, 2022How well do you know your cricket slangs? 🗣 @pumacricket#ad pic.twitter.com/yp5Ke6afpQ
— Virat Kohli (@imVkohli) September 15, 2022
ಬಟ್ಟಾ, ಬೇಬಿ ಓವರ್ಗಳನ್ನು ನೆಪಿಸಿಕೊಂಡು ವಿರಾಟ್ ನಕ್ಕಿದ್ದಾರೆ. ಬಟ್ಟಾ ಎಂಬುದು ಸ್ಥಳೀಯವಾಗಿ ಎಸೆಯುವ ಬೌಲ್ ಆಗಿದೆ. ಅದನ್ನು ಹೇಗೆ ಬೇಕಾದರೂ ಹಾಕಬಹುದು. ಇದೊಂದು ಒರಟಾದ ಕ್ರಿಕೆಟ್ ವಿಧಾನ ಎಂದು ಕೊಹ್ಲಿ ನಗಾಡಿದ್ದಾರೆ.
ಓವರ್ನ ಕೊನೆಯ ಮೂರು ಎಸೆತಗಳನ್ನು ಕರೆಯಲಾಗುವ ಬೇಬಿ ಓವರ್ ಬಗ್ಗೆಯೂ ಮಾತನಾಡಿದ್ದು, ತಾವೂ ಕೂಡ ಗಲ್ಲಿ ಕ್ರಿಕೆಟ್ ಆಡುವಾಗ ಬೇಬಿ ಓವರ್ ಆಡಿದ್ದೇನೆ. ಅದೊಂದು ರೀತಿಯ ಮಜವಾದ ಎಸೆತಗಳು. ಸಿಂಗಲ್ ಬ್ಯಾಟರ್ ಆಡಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ರನ್ ಮಷಿನ್ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟೂರ್ನಿಯಲ್ಲಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. 3 ವರ್ಷಗಳ ಬಳಿಕ ಮೊದಲ ಶತಕ ಗಳಿಸಿದ್ದಾರೆ. ಇದಲ್ಲದೇ, 2 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಟೂರ್ನಿಯಲ್ಲಿ ಕೊಹ್ಲಿ ಆಕರ್ಷಕ 276 ರನ್ ಗಳಿಸಿ, ಎರಡನೇ ಅತ್ಯಧಿಕ ರನ್ನರ್ ಆಗಿದ್ದಾರೆ.
ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 14 ಸ್ಥಾನ ದಿಢೀರ್ ಏರಿಕೆ ಕಂಡು 15 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಬ್ಯಾಟಿಂಗ್ ಕಿಂಗ್ ಮಿಂಚು ಹರಿಸುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಓದಿ: 20 ಗ್ರ್ಯಾಂಡ್ಸ್ಲ್ಯಾಮ್ಗಳ ಒಡೆಯ ರೋಜರ್ ಫೆಡರರ್ ಟೆನಿಸ್ಗೆ ನಿವೃತ್ತಿ ಘೋಷಣೆ