ಅಹಮದಾಬಾದ್ (ಗುಜರಾತ್): ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಮುಳುಗಿ ಹೋಗಿದೆ. ಟೀಂ ಇಂಡಿಯಾ ಆಟಗಾರರು ಬಿಡುವು ಮಾಡಿಕೊಂಡು ಸಂತಸ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಂಗಳವಾರ ಪರಸ್ಪರ ಬಣ್ಣಗಳ ಹಂಚಿಕೊಂಡು ಹಬ್ಬವನ್ನು ಸಡಗರಿಂದ ಆಚರಿಸಿದರು.
- " class="align-text-top noRightClick twitterSection" data="
">
ಬಸ್‌ನೊಳಗೆ ಬಣ್ಣದೋಕುಳಿ: ಬಣ್ಣಗಳ ಹಬ್ಬ ಹೋಳಿ ಹಿನ್ನೆಲೆ ವಿರಾಟ್ ಕೊಹ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಓಪನರ್ ಗಿಲ್ ಟೀಮ್ ಇಂಡಿಯಾದ ಸದಸ್ಯರೊಂದಿಗೆ ರಂಗಿನ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಿ ಎಲ್ಲರ ಗಮನಸೆಳೆದಿದ್ದಾರೆ. ಮೂವರು ಆಟಗಾರರು ತಾವು ಯಾರಿಗೂ ಕಡಿಮೆ ಏನಿಲ್ಲ ಎಂಬಂತೆ ತಂಡದ ಬಸ್‌ನೊಳಗೆ ಬಣ್ಣದೋಕುಳಿಯಲ್ಲಿ ಮುಳುಗಿದರು.
ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಗಿಲ್ಲೋ, ರಾಹುಲೋ? ; ಮುನ್ಸೂಚನೆಯೊಂದಿಗೆ ರಿಕಿ ಪಾಂಟಿಂಗ್
ರಂಗ್ ಬರ್ಸೆ ಹಾಡಿಗೆ ಸಖತ್ ಡ್ಯಾನ್ಸ್: ಬಾಲಿವುಡ್ ಚಲನಚಿತ್ರ ಸಿಲ್ಸಿಲಾದ ಪ್ರಸಿದ್ಧ ಹಾಡಿನ ರಂಗ್ ಬರ್ಸೆಗೆ ಟೀಂ ಇಂಡಿಯಾ ಬ್ಯಾಟ್ಸ್ಮೆನ್ ವಿರಾಟ್ ಕೊಹ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಕೊಹ್ಲಿ ಜೊತೆಗೆ ನಾಯಕ ರೋಹಿತ್ ಶರ್ಮಾ ಮತ್ತು ಓಪನರ್ ಗಿಲ್ ಸಾಥ್ ನೀಡಿದ್ದಾರೆ. ಈ ಮೂವರು ಟೀಮ್ ಇಂಡಿಯಾದ ಸದಸ್ಯರೊಂದಿಗೆ ರಂಚಮಿ ಹಬ್ಬವನ್ನು ಆಚರಿಸುತ್ತಿರುವುದು ಎಲ್ಲ ಗಮನಸೆಳೆದಿದೆ. ಮೂವರು ತಂಡದ ಬಸ್‌ನೊಳಗೆ ಬಣ್ಣಗಳಲ್ಲಿ ಮುಳುಗಿ ಹೋಗಿರುವುದು ಕಂಡು ಬರುತ್ತದೆ. "ಇಂಡಿಯನ್ ಕ್ರಿಕೆಟ್ ಟೀಂನಿಂದ ಹೋಳಿ ಶುಭಾಶಯಗಳು ಎಂದು ಗಿಲ್ ಇನಸ್ಟಾಗ್ರಾಂನಲ್ಲಿ ತಮ್ಮ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸ್ಟಾರ್ ಆಟಗಾರ ಸೂರ್ಯಕುಮಾರ್ ಇನ್ಸ್ಟಾಗ್ರಾಂನಲ್ಲಿ ಫೋಸ್ಟ್: ಇನ್ಸ್ಟಾಗ್ರಾಂನಲ್ಲಿ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು, ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಚೈನಾಮನ್ ಕುಲದೀಪ್ ಯಾದವ್ ಪರಸ್ಪರ ಬಣ್ಣಗಳನ್ನು ಎರೆಚಾಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ನಿಮಗೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು, ಬಹಳಷ್ಟು ಬಣ್ಣಗಳಿಂದ ನಿಮ್ಮೆಲ್ಲರ ಪ್ರೀತಿ, ನಗು ಹೆಚ್ಚಾಗಲಿ. ಹೋಳಿ ಹಬ್ಬವು ಮತಷ್ಟು ಉತ್ಸಾಹ ಹೆಚ್ಚಾಗಲಿ. ಆದರೆ, ಸುರಕ್ಷಿತವಾಗಿ ಹೋಳಿ ಆಚರಿಸಿ ಗೆಳೆಯರೇ" ಎಂದು ಸೂರ್ಯಕುಮಾರ್ ಇನ್ ಸ್ಟಾಗ್ರಾಂನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: 'ಸ್ಟ್ರೈಕ್ ರೇಟ್ ಜಾಸ್ತಿಯಾಗಿದೆ'; ಈ ಟೀಕೆಗೆ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ
ಬಾರ್ಡರ್ - ಗವಾಸ್ಕರ್ ಸರಣಿಯ ಈಗ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ. ಇಂದೋರ್‌ನಲ್ಲಿನ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲಗ್ಗೆ ಇಟ್ಟಿದೆ. ಅಂತಿಮ ಟೆಸ್ಟ್ ಅನ್ನು ಗೆದ್ದರೆ ಭಾರತಕ್ಕೆ ಅವಕಾಶ ಲಭಿಸಲಿದೆ. ಭಾರತವು ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ ಮತ್ತು ಅಹಮದಾಬಾದ್‌ನಲ್ಲಿ ಅಂತಿಮ ಟೆಸ್ಟ್‌ನಲ್ಲಿ ಜಯಗಳಿಸುವ ಮೂಲಕ ಆಸ್ಟ್ರೇಲಿಯಾದ ಜೊತೆಗೆ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.
ಇದನ್ನೂ ಓದಿ: 'ಸ್ಟ್ರೈಕ್ ರೇಟ್ ಜಾಸ್ತಿಯಾಗಿದೆ'; ಈ ಟೀಕೆಗೆ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ