ಮುಂಬೈ: ವಿರಾಟ್ ಕೊಹ್ಲಿ-ರಾಹುಲ್ ದ್ರಾವಿಡ್ ಸಂಯೋಜನೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ. ಹೊಸ ಕೋಚ್ಗಳ ಅಡಿಯಲ್ಲೂ ನಮ್ಮ ಮನಸ್ಥಿತಿ ಮತ್ತು ಉದ್ದೇಶ ಹಿಂದಿನಂತೆಯೇ ಉಳಿಯಲಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಹೇಳಿದ್ದಾರೆ.
ರವಿಶಾಸ್ತ್ರಿ ಕೋಚ್ ಅವಧಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೇರಿದರು. ಪರಾಸ್ ಮಾಂಬ್ರೆ ಮತ್ತು ಟಿ ದಿಲೀಪ್ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಭರತ್ ಅರುಣ್ ಮತ್ತು ಆರ್ ಶ್ರೀಧರ್ ಸ್ಥಾನವನ್ನ ಅಲಂಕರಿಸಿದ್ದಾರೆ.
-
🗣️ 🗣️ The mindset is to take Indian cricket forward and stay at the top: #TeamIndia Captain @imVkohli #INDvNZ @Paytm pic.twitter.com/NWrxTih29K
— BCCI (@BCCI) December 6, 2021 " class="align-text-top noRightClick twitterSection" data="
">🗣️ 🗣️ The mindset is to take Indian cricket forward and stay at the top: #TeamIndia Captain @imVkohli #INDvNZ @Paytm pic.twitter.com/NWrxTih29K
— BCCI (@BCCI) December 6, 2021🗣️ 🗣️ The mindset is to take Indian cricket forward and stay at the top: #TeamIndia Captain @imVkohli #INDvNZ @Paytm pic.twitter.com/NWrxTih29K
— BCCI (@BCCI) December 6, 2021
ಹೊಸ ಮ್ಯಾನೇಜ್ಮೆಂಟ್ ಬಂದ ಬಳಿಕವೂ ನಾವು ಹಿಂದಿನ ಮನಸ್ಥಿತಿ ಮತ್ತು ಉದ್ದೇಶದೊಂದಿಗೆ ಮುಂದುವರಿಯಲಿದ್ದೇವೆ. ಭಾರತೀಯ ಕ್ರಿಕೆಟ್ನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಇದು ಮಹತ್ವದಾಗಿದೆ ಮತ್ತು ಇದನ್ನು ಅನುಸರಿಸುವುದರಿಂದ ಭಾರತ ಕ್ರಿಕೆಟ್ ಬೆಳವಣಿಗೆ ಮುಂದುವರಿಯಲಿದೆ ಎಂದು ಕಿವೀಸ್ ವಿರುದ್ಧ 372 ರನ್ಗಳ ಜಯ ಸಾಧಿಸಿದ ನಂತರ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ನಾಯಕ-ಕೋಚ್ ಸಂಯೋಜನೆಯಲ್ಲಿ ಭಾರತ ಕೆಲವು ಐತಿಹಾಸಿಕ ಟೆಸ್ಟ್ ಸರಣಿಗಳನ್ನು ಗೆದ್ದಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದನ್ನು ಕೊಹ್ಲಿ ದೊಡ್ಡ ಯಶಸ್ಸು ಎಂದು ಕರೆದಿದ್ದಾರೆ. ಈ ಯಶಸ್ಸು ಮುಂಬರುವ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವುದಕ್ಕೆ ನೆರವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಮಗೆ ಒಳ್ಳೆಯ ಸವಾಲು ಎದುರಾಗಲಿದೆ. ಕಳೆದ ಆಸ್ಟ್ರೇಲಿಯಾದಲ್ಲಿನ ಸರಣಿ ಜಯ ನಮಗೆ ವಿಶ್ವದ ಎಲ್ಲಿ ಬೇಕಾದರೂ ಸರಣಿ ಗೆಲ್ಲುವ ನಂಬಿಕೆಯನ್ನು ಹುಟ್ಟಿಸಿದೆ. ನಾವು ಸಾಧಿಸಬೇಕೆಂದುಕೊಂಡಿರುವ ಈ ಸಾಧನೆ ದೊಡ್ಡ ಚಾಲೆಂಜ್ ಆಗಿದೆ. ಆಶಾದಾಯಕವಾಗಿ ದಕ್ಷಿಣ ಆಫ್ರಿಕಾದಲ್ಲೂ ನಮಗೆ ಗೊತ್ತಿರುವ ಆಟವನ್ನು ಆಡಿ ಸರಣಿ ಗೆಲ್ಲಲಿದ್ದೇವೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.