ETV Bharat / sports

ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸ್ಕೊಂಡಿರು ಎಂದಿದ್ರು.. ಧೋನಿ ಮಾತು ನನ್ನಲ್ಲಿ ವಿಶ್ವಾಸ ತರಿಸಿದವು: ಸಿರಾಜ್​​

2019ರ ಐಪಿಎಲ್ ಆವೃತ್ತಿಯಲ್ಲಿ ಮೊಹಮ್ಮದ್ ಸಿರಾಜ್​ 9 ಪಂದ್ಯಗಳಿಂದ 10ಕ್ಕೂ ಹೆಚ್ಚು ಎಕಾನಮಿಯಲ್ಲಿ ಕೇವಲ 7 ವಿಕೆಟ್ ಪಡೆದುಕೊಂಡಿದ್ದರು. ಆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಆರು ಪಂದ್ಯಗಳಲ್ಲಿ ಸೋಲುವ ಮೂಲಕ ಅತ್ಯಂತ ಹೀನಾಯ ಪ್ರದರ್ಶನ ತೋರಿ ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು.

Mohammed Siraj on Dhoni
ಮೊಹಮ್ಮದ್ ಸಿರಾಜ್​ ಎಂಸ್​ ಧೋನಿ
author img

By

Published : Feb 8, 2022, 3:34 PM IST

ನವದೆಹಲಿ: 2019ರ ಐಪಿಎಲ್ ಆವೃತ್ತಿಯ ವೈಫಲ್ಯದ ನಂತರ ಕೆಲವು ನನಗೆ ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸಿಕೊಂಡಿರುವ ಎಂದು ಟೀಕಿಸಿದ್ದರು. ಇವುಗಳು ಐಪಿಎಲ್​ನಲ್ಲಿ ನನ್ನ ಕೆರಿಯರ್ ಮುಗಿಯಿತೇನೋ ಎನ್ನುವ ಆಲೋಚನೆ ಮೂಡುವಂತೆ ಮಾಡಿದ್ದವು. ಆದರೆ, ಧೋನಿ ಮಾತುಗಳು ನನ್ನನ್ನು ಅಂತಹ ಕೆಟ್ಟ ಆಲೋಚನೆಗಳಿಂದ ದೂರ ಮಾಡಿ ನನ್ನಲ್ಲಿ ವಿಶ್ವಾಸ ಮೂಡಿಸಿದವು ಎಂದು ಮೊಹಮ್ಮದ್​ ಸಿರಾಜ್​ ಹೇಳಿದ್ದಾರೆ.

ಆ ಆವೃತ್ತಿಯಲ್ಲಿ ಮೊಹಮ್ಮದ್ ಸಿರಾಜ್​ 9 ಪಂದ್ಯಗಳಿಂದ 10ಕ್ಕೂ ಹೆಚ್ಚು ಎಕಾನಮಿಯಲ್ಲಿ ಕೇವಲ 7 ವಿಕೆಟ್ ಪಡೆದುಕೊಂಡಿದ್ದರು. ಆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಆರು ಪಂದ್ಯಗಳಲ್ಲಿ ಸೋಲುವ ಮೂಲಕ ಅತ್ಯಂತ ಹೀನಾಯ ಪ್ರದರ್ಶನ ತೋರಿ ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು.

ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಸಿರಾಜ್​ ಅತ್ಯಂತ ಕೆಟ್ಟ ಪ್ರದರ್ಶನ ತೋರಿದ್ದರು. ಕೇವಲ 2.2 ಓವರ್​ಗಳಲ್ಲಿ 36 ರನ್​ ಬಿಟ್ಟುಕೊಟ್ಟಿದ್ದರು. 3ನೇ ಓವರ್​ನಲ್ಲಿ ಎರಡು ಬೀಮರ್​ ಎಸೆದಿದ್ದರಿಂದ ವಿರಾಟ್​ ಕೊಹ್ಲಿ ಅನಿವಾರ್ಯವಾಗಿ ಓವರ್​ ಬದಲಾಯಿಸಿದ್ದರು.

ನಾನು ಆ ಪಂದ್ಯದಲ್ಲಿ 2 ಬೀಮರ್​ ಎಸೆದಾಗ ಜನರು ನನ್ನನ್ನು ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸಿಕೊಂಡಿರು ಎಂದು ಕಮೆಂಟ್​ ಮಾಡುತ್ತಿದ್ದರು ಎಂದು ಆರ್​ಸಿಬಿ ಪೋಡ್​ಕಾಸ್ಟ್​​ನಲ್ಲಿ ಸಿರಾಜ್​ ಹೇಳಿದ್ದಾರೆ.

"ಆ ವೇಳೆ ಸಾಕಷ್ಟು ನಿಂದಿಸುವ ಕಮೆಂಟ್​ಗಳು ಬರುತ್ತಿದ್ದವು. ಆದರೆ, ಆ ಜನರಿಗೆ ಇದರ ಹಿಂದಿರುವ ಹೋರಾಟವನ್ನು ನೋಡುವುದಿಲ್ಲ. ನಾನು ಭಾರತ ತಂಡಕ್ಕೆ ಮೊದಲು ಆಯ್ಕೆಯಾದಾಗ 'ನಿನ್ನ ಬಗ್ಗೆ ಜನರು ಮಾತನಾಡುವ ಪ್ರತಿಯೊಂದನ್ನು ಕೇಳಲು ಹೋಗಬೇಡ' ಎಂದು ಮಹಿ ಭಾಯ್( ಎಂಎಸ್​ ಧೋನಿ​) ಹೇಳಿದ್ದನ್ನು ನಾನು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. 'ನೀನು ಇಂದು ಚೆನ್ನಾಗಿ ಬೌಲಿಂಗ್ ಮಾಡಿದರೆ, ಅವರು ನಿನ್ನನ್ನು ಪ್ರಶಂಸಿಸುತ್ತಾರೆ, ಚೆನ್ನಾಗಿ ಮಾಡಲಿಲ್ಲ ಎಂದರೆ ಅವರು ನಿಂದಿಸುತ್ತಾರೆ, ಹಾಗಾಗಿ ಕಮೆಂಟ್​ಗಳನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ" ಎಂದು ಅವರು ಕಿವಿಮಾತು ಹೇಳಿದ್ದರು.

" ಹೌದು, ಅದು ನಿಜ, ಅಂದು ನನ್ನನ್ನು ನಿರಂತರವಾಗಿ ಟ್ರೋಲ್​ ಮಾಡಿದವರೇ ಮತ್ತೊಂದು ದಿನ ನೀನೊಬ್ಬ ಬೆಸ್ಟ್​ ಬೌಲರ್​ ಭಾಯ್​ ಎಂದರು. ಆದ್ದರಿಂದ ನನಗೆ ಯಾರ ಅಭಿಪ್ರಾಯವೂ ಬೇಡ, ನಾನು ಅಂದು ಇದ್ದ ಅದೇ ಸಿರಾಜ್" ಎಂದು 27 ವರ್ಷದ ಹೈದರಾಬಾದ್​ ವೇಗಿ ಹೇಳಿಕೊಂಡಿದ್ದಾರೆ.

2019ರ ವೈಫಲ್ಯದ ಹೊರತಾಗಿಯೂ 2020ರಲ್ಲಿ ಆರ್​ಸಿಬಿ ಸಿರಾಜ್​ರನ್ನು ತಂಡದಿಂದ ಕೈಬಿಡಲಿಲ್ಲ. ಆ ವರ್ಷ ಸಿರಾಜ್​ ಉತ್ತಮ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡಕ್ಕೂ ಆಯ್ಕೆಯಾದರು. ಆಸ್ಟ್ರೇಲಿಯಾ ವಿರುದ್ಧದ ಗಬ್ಬಾ ಟೆಸ್ಟ್​​ ಪಂದ್ಯದಲ್ಲಿ 5 ವಿಕೆಟ್​ ಪಡೆದು ಭಾರತಕ್ಕೆ ಐತಿಹಾಸಿಕ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲಿಂದ ಇಲ್ಲಿಯವರೆಗೇ ಆರ್​ಸಿಬಿ ಮತ್ತು ಭಾರತ ಎರಡೂ ತಂಡದ ಪರ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ.

2022ರ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ 7 ಕೋಟಿ ನೀಡಿ ಸಿರಾಜ್​ರನ್ನು ಕೊಹ್ಲಿ(15 ಕೋಟಿ) ಮತ್ತು ಮ್ಯಾಕ್ಸ್​ವೆಲ್​(11 ಕೋಟಿ) ಜೊತೆಗೆ ರಿಟೈನ್​ ಮಾಡಿಕೊಂಡಿದೆ.

ಇದನ್ನೂ ಓದಿ:IPL ಮೆಗಾ ಹರಾಜಿನ ಮೇಲೆ ಕಣ್ಣು: ಭರ್ಜರಿ ಶತಕ ಸಿಡಿಸಿ ಸಾಮರ್ಥ್ಯ ಸಾಭೀತುಪಡಿಸಿದ ರಾಯ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.