ETV Bharat / sports

ಎಬಿಡಿಗೆ ಡಾಟ್​ ಬಾಲ್ ಹಾಕಿದ್ರೆ ಸಾಕು ಅನ್ಕೊಂಡಿದ್ದೆ, ವಿಕೆಟ್ ಪಡೆದಿದ್ದು ನನ್ನ ಅದೃಷ್ಟ: ಹರ್​ಪ್ರೀತ್ ಬ್ರಾರ್​

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್​ ರಾಹುಲ್​ ಅವರು ಅಜೇಯ 91 ರನ್​ಗಳ ನೆರವಿನಿಂದ 179 ರನ್​ಗಳಿಸಿತ್ತು. 180 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 145 ರನ್​ಗಳಿಸಲಷ್ಟೇ ಶಕ್ತವಾಗಿ 34 ರನ್​ಗಳ ಸೋಲು ಕಂಡಿತು.

ಹರ್​ಪ್ರೀತ್ ಬ್ರಾರ್​
ಹರ್​ಪ್ರೀತ್ ಬ್ರಾರ್​
author img

By

Published : May 1, 2021, 5:28 PM IST

ಅಹ್ಮದಾಬಾದ್​: ಆರ್​ಸಿಬಿಯ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವ​ರನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದ್ದೆ, ಆದರೆ ಯೋಜನೆಯ ಸಂಪೂರ್ಣ ಜಾರಿಯಿಂದಾಗಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​ರ ವಿಕೆಟ್​ ​ಪಡೆಯಲು ಸಾಧ್ಯವಾಗಿದ್ದು ಅದೃಷ್ಟ ಎಂದು ಪಂಜಾಬ್ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್​ಪ್ರೀತ್ ಬ್ರಾರ್ ತಿಳಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್​ ರಾಹುಲ್​ ಅವರು ಅಜೇಯ 91 ರನ್​ಗಳ ನೆರವಿನಿಂದ 179 ರನ್​ಗಳಿಸಿತ್ತು. 180 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 145 ರನ್​ಗಳಿಸಲಷ್ಟೇ ಶಕ್ತವಾಗಿ 34 ರನ್​ಗಳ ಸೋಲು ಕಂಡಿತು.

ಒಂದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್​ವೆಲ್​ ಮತ್ತು ಎಬಿಡಿ ವಿಲಿಯರ್ಸ್​ ಅಂತಹ ಮಹಾನ್ ಬ್ಯಾಟ್ಸ್​ಮನ್​ಗಳ ವಿಕೆಟ್ ಪಡೆಯುವುದು ಯಾವುದೇ ಒಬ್ಬ ಬೌಲರ್​​ಗೆ ಸುಲಭದ ಮಾತಲ್ಲ. ಆದರೆ, ಈ ವಿಶೇಷ ಸಾಧನೆಗೆ ಪಾತ್ರರಾದ ಬ್ರಾರ್​ ಇದು ಅಮೂಲ್ಯವಾದ ಕ್ಷಣ ಎಂದಿದ್ದಾರೆ.

"ಚೆಂಡು ಸ್ವಲ್ಪ ನನ್ನ ಹಿಡಿತದಲ್ಲಿದ್ದ ಕಾರಣ ಡಿವಿಲಿಯರ್ಸ್​ಗೆ ಆಪ್​ ಸೈಡ್ ಸ್ಟಂಪ್​ನಲ್ಲಿ ಬೌಲಿಂಗ್ ಮಾಡಲು ಬಯಸಿದ್ದೆ. ಅದಕ್ಕಾಗಿ ನಾನು ಸ್ಲಿಪ್​ ಅನ್ನು ನಿಲ್ಲಿಸಿಕೊಂಡಿದೆ ಮತ್ತು ಕವರ್​ನಲ್ಲಿ ಒಬ್ಬ ಫೀಲ್ಡರ್​ ಹೊಂದಿದ್ದೆ. ಅವರಿಗೆ ಡಾಟ್ ಬಾಲ್​ಗಳನ್ನು ಮಾಡಲು ನಾನು ಬಯಸಿದ್ದೆ, ಆದರೆ ವಿಕೆಟ್ ಪಡೆಯಲು ಯಶಸ್ವಿಯಾದೆ, ಇದಕ್ಕೆ ನಾನು ಧನ್ಯನಾಗಿದ್ದೇನೆ" ಎಂದು 19ರನ್​ಗಳಿಗೆ 3 ವಿಕೆಟ್ ಪಡೆದ ಬ್ರಾರ್ ಪಂದ್ಯದ ನಂತರ ತಿಳಿಸಿದ್ದಾರೆ.

ಇನ್ನು ಕೊಹ್ಲಿ ವಿಕೆಟ್​ ಕೂಡ ಯೋಜನೆಯಂತೆಯೇ ಪಡೆದಿದ್ದಾಗಿ 23 ವರ್ಷದ ಬೌಲರ್ ತಿಳಿಸಿದ್ದಾರೆ. ನನ್ನ ತಂತ್ರವೇನಿದ್ದರೂ ಒಳ್ಳೆಯ ಲೆಂತ್​ನಲ್ಲಿ ಚೆಂಡನ್ನು ಎಸೆಯಬೇಕೆಂಬುದಾಗಿತ್ತು. ಈ ವೇಳೆ ಅವರು(ಕೊಹ್ಲಿ) ದಂಡಿಸಿದರೂ ನನಗೆ ಚಿಂತೆಯಿರಲಿಲ್ಲ. ಈ ಸಂದರ್ಭದಲ್ಲಿ ಬ್ಯಾಟ್ಸ್​ಮನ್ ಡೌನ್ ದ ಟ್ರ್ಯಾಕ್ ಆಡಲು ಪ್ರಯತ್ನಿಸಿದರೆ ವಿಕೆಟ್​ ಸಿಗಬಹುದು ಎಂದುಕೊಂಡಿದ್ದೆ, ಅದು ಯಶಸ್ವಿಯಾಯಿತು ಎಂದು ಬ್ರಾರ್ ಕೊಹ್ಲಿಯನ್ನು ಬೌಲ್ಡ್​ ಮಾಡಿದ ಘಟನೆಯನ್ನು ಸ್ಮರಿಸಿಕೊಂಡರು.

ಈ ಹಿಂದೆ ಮೂರು ಪಂದ್ಯಗಳನ್ನಾಡಿದ್ದ ಬ್ರಾರ್ ಒಂದು ವಿಕೆಟ್​ ಪಡೆದಿರಲಿಲ್ಲ, ಆದರೆ ನಿನ್ನೆ ಒಂದೇ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.