ETV Bharat / sports

ದ್ರಾವಿಡ್​ರಿಂದ ತೆರವಾಗಿದ್ದ NCA ಮುಖ್ಯಸ್ಥ ಸ್ಥಾನವನ್ನು ಅಧಿಕೃತವಾಗಿ ವಹಿಸಿಕೊಂಡ ಲಕ್ಷ್ಮಣ್ - ರಾಹುಲ್ ದ್ರಾವಿಡ್

ಟಿ-20 ವಿಶ್ವಕಪ್​ ನಂತರ ರವಿಶಾಸ್ತ್ರಿ ಅವರ ಭಾರತ ತಂಡದ ಮುಖ್ಯಕೋಚ್​ ಸ್ಥಾನಕ್ಕೆ ರಾಹುಲ್​ ದ್ರಾವಿಡ್​ ನೇಮಕಗೊಂಡಿದ್ದರು. ಇದೀಗ ಲಕ್ಷ್ಮಣ್​ ಎನ್​ಸಿಎ ಮುಖ್ಯಸ್ಥ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

VVS Laxman officially  takes over as NCA chief on Monday
ವಿವಿಎಸ್ ಲಕ್ಷ್ಮಣ್​
author img

By

Published : Dec 13, 2021, 9:44 PM IST

ಬೆಂಗಳೂರು: ಕನ್ನಡಿಗ ರಾಹುಲ್​ ದ್ರಾವಿಡ್​ ಭಾರತ ತಂಡದ ಕೋಚ್​ ಆಗಿ ನೇಮಕಗೊಂಡ ನಂತರ ಖಾಲಿ ಉಳಿದಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದು, ಕಚೇರಿಯಲ್ಲಿ ತಮ್ಮ ಮೊದಲ ದಿನದ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಟಿ-20 ವಿಶ್ವಕಪ್​ ನಂತರ ರವಿಶಾಸ್ತ್ರಿ ಅವರ ಭಾರತ ತಂಡದ ಮುಖ್ಯಕೋಚ್​ ಸ್ಥಾನಕ್ಕೆ ರಾಹುಲ್​ ದ್ರಾವಿಡ್​ ನೇಮಕಗೊಂಡಿದ್ದರು. ಇದೀಗ ಲಕ್ಷ್ಮಣ್​ ಎನ್​ಸಿಎ ಮುಖ್ಯಸ್ಥ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಕ್ಷ್ಮಣ್​ ಎನ್​ಸಿಎ ಮುಖ್ಯಸ್ಥ ಜೊತೆಗೆ ಭಾರತ ಎ, ಭಾರತ ಅಂಡರ್​ 19 ಮತ್ತು ಭಾರತ ಅಂಡರ್​ 23 ತಂಡಗಳು ಸೇರಿದಂತೆ ಭಾರತೀಯ ಯುವ ಪೀಳಿಗೆಯ ಕ್ರಿಕೆಟಿಗರ ಅಭಿವೃದ್ಧಿಯಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ.

  • First day in office at the NCA! An exciting new challenge in store, look forward to the future and to working with the future of Indian cricket. pic.twitter.com/gPe7nTyGN0

    — VVS Laxman (@VVSLaxman281) December 13, 2021 " class="align-text-top noRightClick twitterSection" data=" ">

ಎನ್​ಸಿಎ ಕಚೇರಿಯಲ್ಲಿ ಮೊದಲ ದಿನ. ಅತ್ಯಾಕರ್ಷಕ ಹೊಸ ಸವಾಲು ಇಲ್ಲಿದೆ. (ಯುವ ಪೀಳಿಗೆ)ಭವಿಷ್ಯಕ್ಕಾಗಿ ಕೆಲಸ ಮಾಡಲು ಮತ್ತು ಭಾರತೀಯ ಕ್ರಿಕೆಟ್​ ಭವಿಷ್ಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಲಕ್ಷ್ಮಣ್ ಕಚೇರಿ​ನಲ್ಲಿ ಕುಳಿತಿರುವ ಫೋಟೋದೊಂದಿಗೆ​ ಟ್ವೀಟ್ ಮಾಡಿದ್ದಾರೆ.​

ರಾಹುಲ್ ದ್ರಾವಿಡ್​ ಎನ್​ಸಿಎ ಮುಖ್ಯಸ್ಥರಾದ ಮೇಲೆ ಸಾಕಷ್ಟು ಬದಲಾವಣೆ ತಂದಿದ್ದಾರೆ. ಯುವ ಕ್ರಿಕೆಟಿಗರ ಭವಿಷ್ಯ, ಬೆಳವಣಿಗೆಯ ಜೊತೆಗೆ ಆಟಗಾರರ ಫಿಟ್​ನೆಸ್​ ಬಗ್ಗೆಯೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ವ್ಯವಸ್ಥೆಗಳನ್ನು ಯಥಾವತ್ತಾಗಿ ನೋಡಿಕೊಳ್ಳುವುದಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ತಮ್ಮ ಸ್ನೇಹಿತರಾದ ಲಕ್ಷ್ಮಣ್​ರನ್ನು ಒತ್ತಾಯ ಮಾಡಿ ಅವರನ್ನು ಎನ್​ಸಿಎ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದ್ದಾರೆ.

ಇದನ್ನೂ ಓದಿ:ಏಕದಿನ ತಂಡದಲ್ಲಿ ಶಿಖರ್ ಧವನ್​ಗೆ​ ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ: ಸಬಾ ಕರೀಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.