ಮುಂಬೈ: ಪ್ರೊ ಕಬಡ್ಡಿ ಲೀಗ್ನ 9ನೇ ಆವೃತ್ತಿಗೋಸ್ಕರ ಹರಾಜು ಪ್ರಕ್ರಿಯೆ ನಡೆಯಲಿದ್ದು, ದಿನಾಂಕ ಪ್ರಕಟಗೊಂಡಿದೆ. ಆಗಸ್ಟ್ 5 ಮತ್ತು 6ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಪಿಕೆಎಲ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಮುಂಬೈನಲ್ಲಿ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ.
-
You're invited to this year's first #Pangebaaz event 😍
— ProKabaddi (@ProKabaddi) July 22, 2022 " class="align-text-top noRightClick twitterSection" data="
🗓️: 𝟓𝐭𝐡 & 𝟔𝐭𝐡 𝐀𝐮𝐠𝐮𝐬𝐭 𝟐𝟎𝟐𝟐
Save the date for #VIVOPKLPlayerAuction 🤩 pic.twitter.com/u698ko0tqB
">You're invited to this year's first #Pangebaaz event 😍
— ProKabaddi (@ProKabaddi) July 22, 2022
🗓️: 𝟓𝐭𝐡 & 𝟔𝐭𝐡 𝐀𝐮𝐠𝐮𝐬𝐭 𝟐𝟎𝟐𝟐
Save the date for #VIVOPKLPlayerAuction 🤩 pic.twitter.com/u698ko0tqBYou're invited to this year's first #Pangebaaz event 😍
— ProKabaddi (@ProKabaddi) July 22, 2022
🗓️: 𝟓𝐭𝐡 & 𝟔𝐭𝐡 𝐀𝐮𝐠𝐮𝐬𝐭 𝟐𝟎𝟐𝟐
Save the date for #VIVOPKLPlayerAuction 🤩 pic.twitter.com/u698ko0tqB
ಹರಾಜು ಪ್ರಕ್ರಿಯೆಯಲ್ಲಿ 500ಕ್ಕೂ ಅಧಿಕ ಪ್ಲೇಯರ್ಸ್ ಭಾಗಿಯಾಗುವ ಸಾಧ್ಯತೆ ಇದ್ದು, ಪ್ರತಿ ತಂಡ 24 ಆಟಗಾರರ ಖರೀದಿ ಮಾಡುವ ಅವಕಾಶವಿದೆ. ಹರಾಜು ಪ್ರಕ್ರಿಯೆಯಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು ಎಂಬ ನಾಲ್ಕು ವಿಭಾಗ ಮಾಡಲಾಗಿದೆ.
ಆಲ್ರೌಂಡರ್, ಡಿಫೆಂಡರ್, ರೈಡರ್ ಎಂದು ವಿಂಗಡನೆ ಮಾಡಲಾಗಿದೆ. A,B,C,D ಎಂಬ ವಿಭಾಗ ಮಾಡಲಾಗಿದೆ. A ವಿಭಾಗಕ್ಕೆ 30 ಲಕ್ಷ ರೂ. B ವಿಭಾಗದಲ್ಲಿ 20 ಲಕ್ಷ ರೂ. C ವಿಭಾಗದಲ್ಲಿ 10 ಲಕ್ಷ ರೂ ಹಾಗೂ D ಕೆಟಗರಿಯಲ್ಲಿ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಪ್ರತಿ ಫ್ರಾಂಚೈಸಿಗಳು ಒಟ್ಟು 4.4 ಕೋಟಿ ಹಣ ಹೊಂದಿವೆ.
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನ ಯುವ ಪ್ರತಿಭೆ ಭಾಗಿಯಾಗಲಿದ್ದು, ತಮ್ಮ ಪ್ರದರ್ಶನ ಹೊರಹಾಕಲು ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ. ಪಿಕೆಎಲ್ ಲೀಗ್ ನೀತಿ ಪ್ರಕಾರ ಪ್ರತಿ ಫ್ರಾಂಚೈಸಿ 8 ಆಟಗಾರರನ್ನ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.