ETV Bharat / sports

ಸೆಹ್ವಾಗ್​​ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹರ್ಮನ್‌ಪ್ರೀತ್ ಕೌರ್ ಜತೆ ಹೋಲಿಕೆ - ಮಹಿಳಾ ಟಿ20 ವಿಶ್ವಕಪ್‌

ನನ್ನ ಮತ್ತು ಹರ್ಮನ್​ ಪ್ರೀತ್​ ನಡುವೆ ಒಂದು ವಿಷಯವಂತೂ ಸಾಮಾನ್ಯವಾಗಿದೆ. ಅದು ಏನೆಂದರೇ ನಾವಿಬ್ಬರೂ ಬೌಲರ್​ಗಳನ್ನು ದಂಡಿಸುವುದನ್ನು ಆನಂದಿಸುತ್ತೇವೆ ಎಂದು ಸೆಹ್ವಾಗ್​ ಹೇಳಿದ್ದಾರೆ.

Virender Sehwag tweet
ವೀರೇಂದ್ರ ಸೆಹ್ವಾಗ್ ಟ್ವೀಟ್​
author img

By

Published : Jan 31, 2023, 2:53 PM IST

Updated : Jan 31, 2023, 2:59 PM IST

ನವದೆಹಲಿ: ಮಹಿಳಾ ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ಭಾರತ ಪುರುಷರ ಕ್ರಿಕೆಟ್​ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಾಷ್ಟು ಸದ್ದು ಮಾಡುತ್ತಿದೆ. ಈ ಒಂದು ಟ್ವೀಟ್​ನಲ್ಲಿ ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್​ ಅವರಿಗೆ ಸಂಬಂಧಿಸಿದ್ದಾಗಿದೆ. ನಿನ್ನೆ ಸೆಹ್ವಾಗ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಸ್ವತಃ ತಾವೇ ಹರ್ಮನ್‌ಪ್ರೀತ್ ನಡುವೆ ತಮ್ಮನ್ನ ತಾವೇ ಹೋಲಿಕೆ ಮಾಡಿಕೊಂಡಿದ್ದಾರೆ.

  • Mere aur @imharmanpreet mai ek cheez common hai. Hum dono ko
    Bowlers ki pitai karne mai mahut maza aata hai. World Cup ka safar October mai nahi, February mai shuru ho raha hai. Wishing you the best https://t.co/ByrRMSDkSe

    — Virender Sehwag (@virendersehwag) January 30, 2023 " class="align-text-top noRightClick twitterSection" data=" ">

ನಮ್ಮಿಬ್ಬರಲ್ಲಿ ಒಂದು ವಿಷಯವಂತೂ ಕಾಮನ್​ - ಸೆಹ್ವಾಗ್​: ಈ ಟ್ವೀಟ್​ನಲ್ಲಿ ' ನನ್ನ ಮತ್ತು ಹರ್ಮನ್​ ಪ್ರೀತ್​ ನಡುವೆ ಒಂದು ವಿಷಯವಂತೂ ಸಾಮಾನ್ಯವಾಗಿದೆ. ಅದು ಏನೆಂದರೇ ನಾವಿಬ್ಬರೂ ಬೌಲರ್​ಗಳನ್ನು ದಂಡಿಸುವುದನ್ನು ಆನಂದಿಸುತ್ತೇವೆ ಎಂದು ಬರೆದು ಕೊಂಡಿದ್ದಾರೆ ' ಹಾಗೂ ಏಕದಿನ ವಿಶ್ವಕಪ್​ ಆಕ್ಟೋಬರ್​ನಲ್ಲಿ ಪ್ರಾರಂಭವಾಗುತ್ತಿಲ್ಲ, ಫೆಬ್ರವರಿಯಲ್ಲೇ ಆರಂಭವಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ 20 ವಿಶ್ವಕಪ್​ ಆಡಲು ಸಿದ್ದವಾಗಿರುವ ತಂಡಕ್ಕೆ ಶುಭ ಕೋರಿದ್ದಾರೆ.

ಸೆಹ್ವಾಗ್ ಟ್ವೀಟ್​ಗೆ ಕೌರ್​​ ಪ್ರತಿಕ್ರಿಯೆ: ನಂತರ ಸೆಹ್ವಾಗ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹರ್ಮನ್‌ಪ್ರೀತ್ ಕೌರ್ ಅವರು ಈ ಹಿಂದೆ ಕೂಡ ತಂಡದಲ್ಲಿ ಜೂಲನ್ ದಿ, ಅಂಜುಮ್ ದಿ, ಡಯಾನಾ ಮಾಮ್ ಅವರು ನನ್ನಲ್ಲಿ ಸೆಹ್ವಾಗ್ ಸರ್, ಯುವಿ ಪಾ, ವಿರಾಟ್ ಮತ್ತು ರೈನಾ ಪಾ ಅವರಿಗೆ ಹೋಲಿಕೆ ಮಾಡಿದ್ದರು. ಅವರ ಗೆಲುವನ್ನು ಸಮಾನವಾಗಿ ಆಚರಿಸಿದ್ದೇನೆ, ಹಾಗೆಯೇ ಸೋಲುಗಳಲ್ಲಿ ಅಳುತ್ತಿದ್ದೆ. ನನಗೆ ಕ್ರಿಕೆಟ್ ಸಜ್ಜನರ ಆಟವಲ್ಲ, ಪ್ರತಿಯೊಬ್ಬರ ಆಟ ಎಂದು ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ.

ವಿಶ್ವಕಪ್​ ಗೆದ್ದ ಭಾರತೀಯ ವನಿತೆಯರಿಗೆ ಶಹಬ್ಬಾಸ್​​​​ಗಿರಿಯ ಮಹಾಪೂರ: ಟಿ20 ವಿಶ್ವಕಪ್​ಅನ್ನು ಮುಡಿಗೇರಿಸಿ ಕೊಂಡಿರುವ ಭಾರತ ಅಂಡರ್​-19 ಕ್ರಿಕೆಟ್​ ತಂಡದ ವನಿತೆಯರಿಗೆ ಎಲ್ಲ ಕಡೆಯಿಂದಲ್ಲೂ ಅಭಿನಂದನೆ ಸಿಗುತ್ತಿದೆ. ಪ್ರಥಮ ಆವೃತ್ತಿಯನ್ನು ಗೆಲ್ಲುವ ಮೂಲಕ ವನಿತೆಯರ ತಂಡ ಕ್ರಿಕೆಟ್​ ಇತಿಹಾಸದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಿಂದ ಕೆತ್ತಿದೆ. ಟೀಂ ಇಂಡಿಯಾದ ಈ ಗೆಲುವಿಗೆ ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್​ ಲೋಕದ ಎಲ್ಲ ಹಿರಿಯ, ಕಿರಿಯ ಹಾಗೂ ದಿಗ್ಗಜರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾ ಹಾರೈಕೆಗಳು ಬಂದಿವೆ.

ಆಂಗ್ಲರ ಎದುರು ಪ್ರಬಲ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ನೀಡಿದ 19 ವರ್ಷದೊಳಗಿನ ವನಿತೆಯರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಐಸಿಸಿಯಿಂದ ಮೊದಲ ಬಾರಿಗೆ 19 ವರ್ಷದೊಳಗಿನವರ ವನಿತೆಯರ ವಿಶ್ವಕಪ್​ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲೇ ಭಾರತದ ವುಮೆನ್​ ಇನ್​ ಬ್ಲೂ ತಂಡ ಜಯ ಸಾಧಿಸಿ ವಿಕ್ರಮ ಮೆರದಿದೆ. ಮೊದಲ ಬಾರಿಗೆ 19 ವರ್ಷದೊಳಗಿನ ವನಿತೆಯರ ವಿಶ್ವಕಪ್​ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ತಂಡಕ್ಕೆ 5 ಕೋಟಿಯ ಬಹುಮಾನವನ್ನು ಪ್ರಕಟಿಸಿ, ಸಾಧನೆಗೆ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ : U19W T20 World Cup: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರು, ತಂಡಕ್ಕೆ 5 ಕೋಟಿ ಬಹುಮಾನ

Last Updated : Jan 31, 2023, 2:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.