ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಏಷ್ಯಾಕಪ್ಗೆ ಭಾರತ ತಂಡ ತಯಾರಿ ನಡೆಸಲಾಗುತ್ತಿದೆ. ಆಗಸ್ಟ್ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಏಷ್ಯಾಕಪ್ 2023 ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸಪ್ಟೆಂಬರ್ 2 ರಂದು ಲಂಕಾದ ಕ್ಯಾಂಡಿ ಮೈದಾನದಲ್ಲಿ ಪಾಕಿಸ್ತಾನದ ಜೊತೆಗೆ ಆಡಲಿದೆ.
-
BCCI designed a program chart during the 2 week break for players who weren't part of the IRE series [The Indian Express]
— Johns. (@CricCrazyJohns) August 24, 2023 " class="align-text-top noRightClick twitterSection" data="
- 9 hours of sleep
- Gym
- Walking
- Yoga
- Swimming
- Certain amounts of protein daily
BCCI wants all players to be fit for the next 3 months. pic.twitter.com/doHZanVlUc
">BCCI designed a program chart during the 2 week break for players who weren't part of the IRE series [The Indian Express]
— Johns. (@CricCrazyJohns) August 24, 2023
- 9 hours of sleep
- Gym
- Walking
- Yoga
- Swimming
- Certain amounts of protein daily
BCCI wants all players to be fit for the next 3 months. pic.twitter.com/doHZanVlUcBCCI designed a program chart during the 2 week break for players who weren't part of the IRE series [The Indian Express]
— Johns. (@CricCrazyJohns) August 24, 2023
- 9 hours of sleep
- Gym
- Walking
- Yoga
- Swimming
- Certain amounts of protein daily
BCCI wants all players to be fit for the next 3 months. pic.twitter.com/doHZanVlUc
ಬೆಂಗಳೂರಿನ ಶಿಬಿರಕ್ಕೆ ಪ್ರಕಟಿತ ಏಷ್ಯಾಕಪ್ ತಂಡದ ಆಟಗಾರರು ಬಂದು ಈಗಾಗಲೇ ಸೇರಿದ್ದಾರೆ. ಅಲ್ಲಿ ಅವರಿಗೆ ಫಿಟ್ನೆಸ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಶಿಬಿರದ ಮೊದಲ ದಿನ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪರೀಕ್ಷಿಸಲಾಗಿದೆ. ಯೋ-ಯೋ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ಪಾಸ್ ಆಗಿದ್ದಾರೆ. ಬಿಸಿಸಿಐ 16 ಅಂಕವನ್ನು ಯೋ-ಯೋ ಪರೀಕ್ಷೆಗೆ ಸೆಟ್ ಮಾಡಿದೆ.
-
Updates on Team India's Yo-Yo Test:- (PTI)
— CricketMAN2 (@ImTanujSingh) August 24, 2023 " class="align-text-top noRightClick twitterSection" data="
•Mandated Yo-Yo parameter - 16.5
•Kohli, Rohit, Hardik & others passed the Test.
•Bumrah, Samson, Tilak, Krishna join team on Friday.
•KL Rahul part of fitness drill but Not Yo-Yo Test.
•Camp is scheduled to conclude on 29th Aug. pic.twitter.com/hwqP4BVWGH
">Updates on Team India's Yo-Yo Test:- (PTI)
— CricketMAN2 (@ImTanujSingh) August 24, 2023
•Mandated Yo-Yo parameter - 16.5
•Kohli, Rohit, Hardik & others passed the Test.
•Bumrah, Samson, Tilak, Krishna join team on Friday.
•KL Rahul part of fitness drill but Not Yo-Yo Test.
•Camp is scheduled to conclude on 29th Aug. pic.twitter.com/hwqP4BVWGHUpdates on Team India's Yo-Yo Test:- (PTI)
— CricketMAN2 (@ImTanujSingh) August 24, 2023
•Mandated Yo-Yo parameter - 16.5
•Kohli, Rohit, Hardik & others passed the Test.
•Bumrah, Samson, Tilak, Krishna join team on Friday.
•KL Rahul part of fitness drill but Not Yo-Yo Test.
•Camp is scheduled to conclude on 29th Aug. pic.twitter.com/hwqP4BVWGH
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ವಿರಾಟ್ ಕೊಹ್ಲಿ ತಮ್ಮ ಸ್ಕೋರ್ ಅನ್ನು ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಯೋ-ಯೋ ಟೆಸ್ಟ್ನಲ್ಲಿ 17.2 ಅಂಕ ಸಿಕ್ಕಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮಂಡಳಿಯ ಅಧಿಕಾರಿಗಳು ವಿರಾಟ್ ಕೊಹ್ಲಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೊಹ್ಲಿ ವಿರುದ್ಧವೂ ಕೆಲವು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಹಿರಿಯ ಅಧಿಕಾರಿಗಳು ತಿಳಿಸಿರುವಂತೆ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಆಟಗಾರರು ಗೌಪ್ಯತೆಯ ನಿಯಮವನ್ನು ಅನುಸರಿಸಿ ಪೋಸ್ಟ್ಗಳನ್ನು ಮಾಡಬೇಕು. ತರಬೇತಿಯ ಸಮಯದಲ್ಲಿ ಅವರ ವೈಯುಕ್ತಿಕ ಚಿತ್ರಗಳನ್ನು ಪೋಸ್ಟ್ ಮಾಡಲು ಅಭ್ಯಂತರ ವಿಲ್ಲ. ಆದರೆ ಯಾವುದೇ ಸ್ಕೋರ್ ಅಥವಾ ವರದಿಗಳನ್ನು ಹಂಚಿಕೊಳ್ಳುವಂತಿಲ್ಲ ಎಂದಿದೆ. ಈ ಒಪ್ಪಂದದ ಪ್ರಕಾರ ವಿರಾಟ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದಕ್ಕಾಗಿ ಕ್ರಮ ಜರುಗಿಸ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
-
Virat Kohli reveals passing the yo-yo test ahead of the much-anticipated clash against Pakistan in the Asia Cup. #ViratKohli pic.twitter.com/bCTdYwSfwN
— CricTracker (@Cricketracker) August 24, 2023 " class="align-text-top noRightClick twitterSection" data="
">Virat Kohli reveals passing the yo-yo test ahead of the much-anticipated clash against Pakistan in the Asia Cup. #ViratKohli pic.twitter.com/bCTdYwSfwN
— CricTracker (@Cricketracker) August 24, 2023Virat Kohli reveals passing the yo-yo test ahead of the much-anticipated clash against Pakistan in the Asia Cup. #ViratKohli pic.twitter.com/bCTdYwSfwN
— CricTracker (@Cricketracker) August 24, 2023
ಏಷ್ಯಾಕಪ್ಗೂ ಮುನ್ನ ಫಿಟ್ನೆಸ್ ಮತ್ತು ಪಂದ್ಯದ ತಯಾರಿಗಾಗಿ ಎನ್ಸಿಎಯಲ್ಲಿ ನಿನ್ನೆಯಿಂದ (ಆಗಸ್ಟ್ 24) ಶಿಬಿರ ಆರಂಭವಾಗಿದೆ. ತಂಡದಲ್ಲಿ ಗಾಯದ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲು ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ಶಿಬಿರ 6 ದಿನಗಳ ಕಾಲ ನಡೆಯಲಿದೆ. 31 ರಂದು ಭಾರತ ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಏಷ್ಯಾಕಪ್ ನಂತರ ಭಾರತ ತಂಡ ಆಸ್ಟ್ರೇಲಿಯಾದ ಜೊತೆಗೆ ಏಕದಿನ ಸರಣಿ ಆಡಲಿದೆ. ಅದರ ನಂತರ ಭಾರತದಲ್ಲೇ 2023ರ ಏಕದಿನ ವಿಶ್ವಕಪ್ನ ಪಂದ್ಯಗಳು ಆರಂಭವಾಗಲಿದೆ. ಸತತ ಪಂದ್ಯಗಳನ್ನು ಆಡಲಿರುವ ಕಾರಣ ತಂಡದ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ಶಿಪ್: ಪ್ರಜ್ಞಾನಂದಗೆ ವಿಡಿಯೋ ಕಾಲ್ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಂ ಸ್ಟಾಲಿನ್