ETV Bharat / sports

ರೋಹಿತ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ.. ಪಾಕ್​ ವಿರುದ್ಧ ಅತ್ಯಧಿಕ ರನ್ ಬಾರಿಸಿದ​ ಸರದಾರ - ಭಾರತ ಗೆಲುವಿನ ಆರಂಭ

ಟಿ20 ವಿಶ್ವಕಪ್​ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿನ ಆರಂಭ ಪಡೆಯಿತು. ವಿರಾಟ್​ ಕೊಹ್ಲಿ ಬ್ಯಾಟಿಂಗ್​ ವೈಭವದಿಂದ ಗೆಲುವಿನ ಕೇಕೆ ಹಾಕಿತು.

virat-kohli-surpasses-rohit-sharma
ರೋಹಿತ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ
author img

By

Published : Oct 23, 2022, 7:41 PM IST

ಮೆಲ್ಬರ್ನ್​(ಆಸ್ಟ್ರೇಲಿಯಾ): ವಿಶ್ವಕಪ್​ ಸೂಪರ್​ 12 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಮಿಂಚಿನ ಆಟವಾಡಿ ವೈಯಕ್ತಿವಾಗಿ 82 ರನ್​ ಗಳಿಸುವ ಮೂಲಕ ತಂಡವನ್ನು ಗೆಲ್ಲಿಸಿದ ಶ್ರೇಯಕ್ಕೆ ಪಾತ್ರವಾದರು. ಜೊತೆಗೆ ಟಿ20 ವಿಶ್ವಕಪ್​ನಲ್ಲಿ ಪಾಕ್​ ತಂಡದ ವಿರುದ್ಧ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಗರಿಷ್ಠ ರನ್​ ಬಾರಿಸಿದ ವಿರಾಟ್​ ಕೊಹ್ಲಿ, ಟೀಂ ಇಂಡಿಯಾದ ಹಾಲಿ ಕ್ಯಾಪ್ಟನ್​ ರೋಹಿತ್​ ಶರ್ಮಾರ ರನ್​ ದಾಖಲೆಯಲ್ಲಿ ಹಿಂದಿಕ್ಕಿದರು. ರೋಹಿತ್​ ಶರ್ಮಾ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಸರಾಸರಿ 300ಕ್ಕೂ ಅಧಿಕ ರನ್​ ಗಳಿಸಿದ್ದರು. ಇದನ್ನು ಮೀರಿಸಿದ ವಿರಾಟ್​ 308 ರನ್​ ಸರಾಸರಿ ಹೊಂದಿದ್ದಾರೆ. ಪಾಕ್​ ವಿರುದ್ಧ ಈವರೆಗೂ ಟಿ20 22 ಪಂದ್ಯಗಳನ್ನಾಡಿದ್ದು, 84.27 ರ ಸರಾಸರಿಯಲ್ಲಿ 927 ರನ್​ ಬಾರಿಸಿದ್ದಾರೆ.

ಪಂದ್ಯದಲ್ಲಿ ರೋಹಿತ್​ ಶರ್ಮಾ, ರಾಹುಲ್​ ಬೇಗನೇ ಔಟಾಗಿ ಪೆವಿಲಿಯನ್​ಗೆ ಹಿಂದಿರುಗಿದರು. ಈ ವೇಳೆ ಅಂಗಳಕ್ಕೆ ಬಂದ ವಿರಾಟ್​ ವಿಕೆಟ್​ ಬೀಳದಂತೆ ಎಚ್ಚರಿಕೆ ವಹಿಸಿದರು. ಮಂದಗತಿಯಲ್ಲಿ ಆಟ ಆರಂಭಿಸಿ, ಬಳಿಕ ಸಿಡಿದರು.

31 ರನ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಬಲ ತುಂಬಿದ ವಿರಾಟ್​, ಹಾರ್ದಿಕ್​ ಪಾಂಡ್ಯಾ ಜೊತೆ ಸೇರಿ 113 ರನ್​ಗಳ ಜೊತೆಯಾಟ ನೀಡಿದರು. ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೊನೆಯ 3 ಓವರ್​ಗಳಲ್ಲಿ 48 ರನ್​ ಅಗತ್ಯವಿತ್ತು. ಪಂದ್ಯ ಗೆಲ್ಲುವುದು ತುಸು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ, ಪಾಕಿಸ್ತಾನದ ಎಲ್ಲ ತಂತ್ರಗಳನ್ನು ಬೇಧಿಸಿದ ಕೊಹ್ಲಿ, ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಓದಿ: ಮೆಲ್ಬರ್ನ್​ನಲ್ಲಿ ವಿರಾಟ ಪರ್ವ.. ಪಾಕ್​ ಸವಾಲು ಗೆದ್ದ 'ಕಿಂಗ್​ ಕೊಹ್ಲಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.